ಉಡುಪಿ

ಸುದರ್ಶನ ಕ್ರಿಯಾ ಶಿಬಿರ ಸಮಾರೋಪ (ಸುದ್ದಿ ಸಂಕ್ಷೇಪ)

Published On :

ಕುಂದಾಪುರ: ಬದುಕಿನ ಜಂಜಾಟ, ಮಾನಸಿಕ ಒತ್ತಡಗಳ ನಲುಗಿ ಹೋಗಿರುವ ನಮಗೆ ನೆಮ್ಮದಿ ಎನ್ನುವುದು ಮರೀಚಿಕೆಯಾಗಿದೆ. ಯಾವುದೇ ಔಷಧ ಚಿಕಿತ್ಸೆಗಳ ಲಭ್ಯವಿಲ್ಲದ ಮನುಷ್ಯನ ಮಾನಸಿಕ ಒತ್ತಡಗಳಿಗೆ ಯೋಗ, ಪ್ರಾಣಾಯಾಮದಂತಹ ಸುದರ್ಶನ ಕ್ರಿಯೆಯೇ ಪರಿಹಾರ ಎಂದು ಬೆಂಗಳೂರಿನ ಶ್ರೀ ರವಿಶಂಕರ ಗುರೂಜಿಯವರ ವ್ಯಕ್ತಿ ವಿಕಾಸ ಕೇಂದ್ರದ ಶಿಕ್ಷಕಿ ಭಾನುಮತಿ ಶೇಟ್ ಹೇಳಿದರು.
ಗಂಗೊಳ್ಳಿಯ ಶ್ರೀ ಗುರುಜ್ಯೋತಿ ಸ್ಪೋಟ್ಸರ್ ಕ್ಲಬ್ ಆಶ್ರಯದಲ್ಲಿ ಶ್ರೀ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಕಾರದೊಂದಿಗೆ ಗಂಗೊಳ್ಳಿಯ ಸ.ವಿ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸುದರ್ಶನ ಕ್ರಿಯಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಂಘದ ಗೌರವಾಧ್ಯಕ್ಷ ವಿಜಯ ಖಾವರ್, ಸಲಹೆಗಾರ ಬಿ. ಸದಾನಂದ ಶೆಣೈ ಹಾಗೂ ಶಾಲೆಯ ನಿಯೋಜಿತ ಮುಖ್ಯೋಪಾಧ್ಯಾಯಿನಿ ಸುಮನಾ ಪಡಿಯಾರ್ ಇದ್ದರು. ಭಾನುಮತಿ ಶೇಟ್ ಅವರನ್ನು ಸನ್ಮಾನಿಸಲಾಯಿತು. ಸೂರ್ಯಕಾಂತ ಖಾವರ್ ಕಾರ್ಯಕ್ರಮ ನಿರೂಪಿಸಿದರು. ಸತೀಶ ಎಂ. ಖಾವರ್ ವಂದಿಸಿದರು.

ಕುಂದಾಪುರ: ಇಂದಿನಿಂದ ವಿದ್ಯುತ್ ವ್ಯತ್ಯಯ
ಉಡುಪಿ: ಕುಂದಾಪುರ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆ.ವಿ. ಕುಂದಾಪುರ ಮತ್ತು ಇಂಡಸ್ಟ್ರಿಯಲ್ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಪ್ರಯುಕ್ತ 22ರಂದು ಬೆಳಗ್ಗೆ 9ರಿಂದ ಅಪರಾಹ್ನ 4 ಗಂಟೆವರೆಗೆ ಕುಂದಾಪುರ ಮುಖ್ಯ ರಸ್ತೆ, ಬಸ್ರೂರು, ಮೂರುಕೈ, ಚರ್ಚ್ ರಸ್ತೆ, ಪೆರಿ ರಸ್ತೆ, ಟಿ.ಟಿ. ರಸ್ತೆ ಪರಿಸರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೈಂದೂರು ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆ.ವಿ. ಶಿರೂರು ಫೀಡರ್‌ನಲ್ಲಿ ಪಾಲನಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 22ರಿಂದ 25ರವರೆಗೆ ಬೆಳಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗುತ್ತೆದೆ. ಉದೂರು, ತುದಳ್ಳಿ, ಅತ್ರಾಡಿ, ಕಡ್ಕೆ, ಗೋಳಿಬೇರು, ನಾಗರಮಕ್ಕಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಹೆಬ್ರಿ: ಶನಿಯಾಗ
ಹೆಬ್ರಿ: ಹೆಬ್ರಿಯಲ್ಲಿ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ತಾಣದ ಹೆಬ್ರಿ ಗೆಳೆಯರ ಬಳಗ ವತಿಯಿಂದ ಫೆ.10ರಂದು ಸಾರ್ವಜನಿಕ ಶನಿಯಾಗ ಮತ್ತು ಶನಿಶಾಂತಿ ತಾಣಶ್ರೀ ಅರ್ಧನಾರೀಶ್ವರ ಸನ್ನಿಧಿಯಲ್ಲಿ ನಡೆಯಲಿದೆ. ಬೆಳಗ್ಗೆಯಿಂದ ಧಾರ್ಮಿಕ ಕಾರ್ಯಗಳು ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಾಹಿತಿ, ಹರಿದಾಸ ಅಂಬಾತನಯ ಮುದ್ರಾಡಿ ಅವರಿಂದ ಶನಿಮಹಾತ್ಮೆ ಮತ್ತು ಹರಿದಾಸ ಬಿ.ಸಿ.ರಾವ್ ಶಿವಪುರ ಅವರಿಂದ ಶನಿ ಮಹಾತ್ಮೆಯ ಧಾರ್ಮಿಕ ಉಪನ್ಯಾಸ ನಡೆಯಲಿದೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.