ಬಂಟ್ವಾಳ ಕ್ಷೇತ್ರ: ಕಮಲ ಪಾಳಯಕ್ಕೆ ಸೌಂದರ್ಯ ರಮೇಶ್?
ಬಂಟ್ವಾಳ: ಬಂಟ್ವಾಳ ಕ್ಷೇತ್ರದ ಜೆಡಿಎಸ್,ನ ಸಂಭಾವ್ಯ ಅಭ್ಯರ್ಥಿ, ಉದ್ಯಮಿ ಸೌಂದರ್ಯ ರಮೇಶ್ ಕೂಡ ಜೆಡಿಎಸ್ ತೊರೆಯುವ ಹಂತದಲ್ಲಿದ್ದಾರೆ.
ಬಿಜೆಪಿ ನಾಯಕರು ಹಾಗೂ ಕುಲಾಲ ಸಮಾಜದ ಮುಖಂಡರ ಉಪಸ್ಥಿತಿಯಲ್ಲಿ ಶನಿವಾರ ಕಟೀಲಿನಲ್ಲಿ ನಡೆದ ಮೊದಲ ಸುತ್ತಿನ ಗೌಪ್ಯ ಸಭೆಯಲ್ಲಿ ಸೌಂದರ್ಯ ರಮೇಶ್ ಅವರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ಭಾಗಶಃ ಯಶಸ್ಸು ಕಂಡಿದೆ ಎನ್ನಲಾಗಿದೆ.
ಕುಲಾಲ ಸಮುದಾಯದ ಹಿತದೃಷ್ಟಿಯಿಂದ ಕೆಲ ಬೇಡಿಕೆಗಳನ್ನು ಬಿಜೆಪಿ ನಾಯಕರ ಮುಂದಿಡಲಾಗಿದ್ದು, ಬಿಜೆಪಿ ವರಿಷ್ಠರು ಮುಂದೆ ನಡೆಸುವ ಎರಡನೇ ಸುತ್ತಿನ ಮಾತುಕತೆಯಲ್ಲಿ ಈ ಬಗ್ಗೆ ಹಸಿರು ನಿಶಾನೆ ದೊರೆತರೆ ಸೌಂದರ್ಯ ರಮೇಶ್ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ.
ಕುಲಾಲ ಮತ ನಿರ,ಾಯಕ: ಕುಲಾಲರ ಕಾಶಿ ಎಂದು ಹೇಳಲಾಗಿರುವ ಬಂಟ್ವಾಳ ತಾಲೂಕಿನ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 22 ಸಾವಿರ ಕುಲಾಲ ಮತದಾರರಿದ್ದಾರೆ. ಬಂಟ್ವಾಳ, ಕಾಪು, ಸುರತ್ಕಲ್, ಉಡುಪಿ ಹಾಗೂ ಉಳ್ಳಾಲ ಸೇರಿದಂತೆ 5 ವಿಧಾನಸಭಾ ಕ್ಷೇತ್ರದಲ್ಲಿ ಕುಲಾಲರ ಮತ ನಿರ,ಾಯಕ ಪಾತ್ರ ವಹಿಸುತ್ತದೆ.
ಈ ಪೈಕಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಮುಂಚೂಣಿಯಲ್ಲಿದೆ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕುಂಬಾರ ಸಮಾಜಕ್ಕೆ ತಕ್ಕಮಟ್ಟಿನ ಮಾನ್ಯತೆ ಸಿಕ್ಕಿತ್ತು. ಆ ಬಳಿಕ ಯಡಿಯೂರಪ್ಪ ಹಾಗೂ ಸದಾನಂದ ಗೌಡರ ಸರ್ಕಾರದಲ್ಲಿ ಕುಂಬಾರ ಸಮಾಜದತ್ತ ಗಮನ ಕೇಂದ್ರೀಕರಿಸಿ ಕುಂಭ ನಿಗಮ ಸ್ಥಾಪಿಸುವ ಮೂಲಕ ಪೂರ, ಪ್ರಮಾಣದಲ್ಲಿ ಅಲ್ಲದಿದ್ದರೂ ಸಮಾಧಾನಕರ ಸ್ಥಾನ ನೀಡಲಾಯಿತು.
ರಾಜ್ಯ ರಾಜಕೀಯದಲ್ಲಿ ಕುಂಬಾರ ಸಮಾಜಕ್ಕೆ ಯಾವುದೇ ರಾಜಕೀಯ ನ್ಯಾಯ ದೊರೆತಿಲ್ಲ ಎನ್ನುವುದು ಕುಲಾಲ ಮುಖಂಡರ ಅಳಲು. ಈ ಬಾರಿಯಾದರೂ ಕುಂಬಾರ, ಕುಲಾಲ ಸಮಾಜಕ್ಕೆ ಸೂಕ್ತ ರಾಜಕೀಯ ಸ್ಥಾನಮಾನ ದೊರಕಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಚಿಂತನ- ಮಂಥನದಲ್ಲಿ ತೊಡಗಿದ್ದಾರೆ. ಇದರ ಮೊದಲ ಅಸ್ತ್ರವೆಂಬಂತೆ ಸೌಂದರ್ಯ ರಮೇಶ್ ಅವರ ಮನವೊಲಿಸಿ ಈ ನಿರ್ಧಾರ ತಳೆದಿರುವುದಾಗಿ ತಿಳಿದುಬಂದಿದೆ.
ನೂತನವಾಗಿ ಅಸ್ತಿತ್ವಕೆ ಬಂದ ಕುಲಾಲ- ಕುಂಬಾರರ ವೇದಿಕೆಯ ಜಿಲ್ಲಾ ಘಟಕದ ಮುಖಂಡರು ಸೌಂದರ್ಯ ರಮೇಶ್ ಅವರ ಮನವೊಲಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

