ಕಲ್ಯಾಣಪುರ ದೇವಳದಲ್ಲಿ ಕೈವಲ್ಯ ಶ್ರೀಗಳ ಮೊಕ್ಕಾಂ
ಕಲ್ಯಾಣಪುರ: ಇಲ್ಲಿನ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ಕೈವಲ್ಯ ಮಠಾಧೀಶ ಶ್ರೀಶಿವಾನಂದ ಸರಸ್ವತಿ ಸ್ವಾಮಿಗಳ ಮೊಕ್ಕಾಂ ಕಾರ್ಯಕ್ರಮ ನ.12ರಿಂದ 19ರವರೆಗೆ ನಡೆಯುತ್ತಿದ್ದು, ಶ್ರೀಗಳು ಮಂಗಳವಾರ ರಾತ್ರಿ ಶ್ರೀದೇವಳಕ್ಕೆ ಆಗಮಿಸಿದರು.
ದೇವಳದ ಆಡಳಿತ ಮೊಕ್ತೇಸರ ಕೆ. ಅನಂತಪದ್ಮನಾಭ ಕಿಣಿ, ಅರವಿಂದ ಬಾಳಿಗಾ, ಗಣಪತಿ ಭಟ್, ರಾಮಚಂದ್ರ ಭಟ್, ಜಯದೇವ ಭಟ್, ಸುಬ್ಬಣ್ಣ ಪೈ, ಕೆ. ತುಳಸೀದಾಸ್ ಕಿಣಿ ಹಾಗೂ ಸಮಾಜ ಬಾಂಧವರು ಸ್ವಾಮೀಜಿ ಅವರನ್ನು ಸ್ವಾಗತಿಸಿದರು.
ಶ್ರೀಗಳ ಮೊಕ್ಕಾಂ ಪ್ರಯುಕ್ತ ನ.13ರಂದು ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು. 14ರಂದು ವಿಶೇಷ ತುಳಸಿ ಪೂಜೆ ಸ್ವಾಮೀಜಿಯವರಿಂದ ನೆರವೇರಿತು. 15ರಂದು ದೇವರಿಗೆ ವಿಶೇಷ ಪೂಜೆ, 16ರಂದು ಸ್ವರ್ಣಾನದಿಯ ತೀರದಲ್ಲಿ ತೀರ್ಥಸ್ನಾನ ಹಾಗೂ ಕಾರ್ತಿಕ ಮಾಸದ ವಿಶೇಷ ಹವನ ಪೂಜೆ ಮತ್ತು ವನಭೋಜನ ಕಾರ್ಯಕ್ರಮ ನಡೆಯಿತು. ನಂತರ ರಾತ್ರಿ ದೇವಳದಲ್ಲಿ ರಾತ್ರಿ ಪೂಜೆ ಬಳಿಕ ಕೆರೆ ದೀಪೋತ್ಸವ, ರಜತ ಲಾಲಕಿ ಉತ್ಸವ, ಕಟ್ಟೆಪೂಜೆ, ವಸಂತ ಪೂಜೆ, ಪ್ರಸಾದ ವಿತರಣೆ ನಡೆಯಿತು.
ಇಂದು ಅವಭೃತ ಉತ್ಸವ: ಭಾನುವಾರ ಕಾರ್ತಿಕ ಶುದ್ಧ ಹುಣ್ಣಿಮೆಯ ದಿನ ಅವಭೃತ ಉತ್ಸವ (ಓಕುಳಿ) ಹಾಗೂ ವಸಂತ ಪೂಜೆ ನಡೆಯಲಿದೆ. ಸೋಮವಾರ ದೇವರ ಸನ್ನಿಧಿಯಲ್ಲಿ ಗಾಯತ್ರಿ ಹವನ ನಡೆಯಲಿದ್ದು, ಸ್ವಾಮೀಜಿಯಿಂದ ಪೂರ್ಣಾಹುತಿ ಜರುಗಲಿರುವುದು.
19ರಂದು ಧಾರ್ಮಿಕ ಸಭಾ ಕಾರ್ಯಕ್ರಮ, ಸ್ವಾಮೀಜಿ ಆಶೀರ್ವಚನ ಮತ್ತು ಫಲಮಂತ್ರಾಕ್ಷತೆ ಹಾಗೂ ಶ್ರೀಗಳ ಕೆಮ್ತೂರು ಭೇಟಿ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

