ಸೌಜನ್ಯಾ ಹತ್ಯಾಚಾರ: ಸಿಐಡಿ ತನಿಖೆ ಚುರುಕು
ಬೆಳ್ತಂಗಡಿ: ಭಾರಿ ಪ್ರತಿಭಟನೆ ಹಿನ್ನೆಲೆಯಲ್ಲಿ ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ತನಿಖೆ ಇದೀಗ ಮತ್ತೆ ಚುರುಕುಗೊಂಡಿದೆ.
ಸೌಜನ್ಯಾ ಕೊಲೆಯಾದ ವಾರಗಳ ಬಳಿಕ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಗಿತ್ತು. ಸಿಐಡಿಯ ಎರಡು ತಂಡಗಳು ತನಿಖೆ ನಡೆಸಿದ್ದವು. ಆದರೆ ಯಾವುದೇ ಫಲ ಕಂಡಿರಲಿಲ್ಲ. ಇದೀಗ ಸಿಐಡಿ ವಿಭಾಗದ ಎಸ್ಪಿ ಶ್ರೀಗೌರಿ ನೇತೃತ್ವದ ತಂಡ ಬೆಳ್ತಂಗಡಿಗೆ ಆಗಮಿಸಿದ್ದು, ತನಿಖೆ ಆರಂಭಿಸಿದೆ.
ಎಸ್ಐ ತನಿಖೆ: ಘಟನೆ ಸಂದರ್ಭ ಬೆಳ್ತಂಗಡಿ ಎಸ್ಐ ಆಗಿದ್ದು, ಪ್ರಕರಣದಲ್ಲಿ ಹಲವಾರು ಆರೋಪಗಳನ್ನು ಎದುರಿಸುತ್ತಿರುವ ಎಸ್ಐ ಯೋಗೀಶ್ ಕುಮಾರ್ ಅವರನ್ನು ಬೆಳ್ತಂಗಡಿಗೆ ಕರೆಸಿ ತೀವ್ರ ವಿಚಾರಣೆಗೆ ಗುರಿಪಡಿಸಿರುವುದಾಗಿ ತಿಳಿದುಬಂದಿದೆ. ತನಿಖಾ ತಂಡ ಸೌಜನ್ಯಾಳ ತಂದೆ ಚಂದಪ್ಪ ಗೌಡ, ತಾಯಿ ಕುಸುಮಾವತಿ ಹಾಗೂ ಮಾವ ವಿಠಲ ಅವರಿಂದ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದೆ. ಸೌಜನ್ಯಾ ಕುಟುಂಬಸ್ಥರು ಈ ಹಿಂದೆ ಮಾಡಿದ್ದ ಆರೋಪಗಳನ್ನು ತನಿಖಾ ತಂಡದ ಮುಂದೆಯೂ ಇಟ್ಟಿದ್ದು, ತಮಗೆ ನ್ಯಾಯ ಒದಗಿಸುವಂತೆ ಕೇಳಿಕೊಂಡಿದ್ದಾರೆ. ತನಿಖಾ ತಂಡ ಸೌಜನ್ಯಾ ಶವ ಪತ್ತೆಯಾದ ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದೆ.
15 ದಿನಗಳಲ್ಲಿ ವರದಿ: ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿಯ ವಿಚಾರಣೆಗಳು ನಡೆಯುವ ಸಾಧ್ಯತೆ ಇದೆ. ಇದೀಗ ಜೈಲಿನಲ್ಲಿರುವ ಶಂಕಿತ ಆರೋಪಿ ಸಂತೋಷನ ವಿಚಾರಣೆಗೂ ತಂಡ ಮುಂದಾಗಲಿರುವುದಾಗಿ ತಿಳಿದುಬಂದಿದೆ. ಹದಿನೈದು ದಿನದಲ್ಲಿ ತನಿಖಾ ವರದಿ ನೀಡುವುದಾಗಿ ಸಿಐಡಿಯ ಬಿಪಿನ್ ಗೋಪಾಲಕೃಷ್ಣ ಈ ಹಿಂದೆಯೇ ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ತನಿಖೆ ಅತ್ಯಂತ ವೇಗವಾಗಿ ನಡೆಯಲಿದೆ ಎಂಬ ಸೂಚನೆಗಳು ಲಭಿಸುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

