ಸಾಧಕರಿಗೆ ಸನ್ಮಾನ, ವಿದ್ಯಾರ್ಥಿ ವೇತನ ವಿತರಣೆ
ಉಡುಪಿ: ಯುವಕರು ವೇಗವಾಗಿ ಬದಲಾಗುತ್ತಿರುವ ಜಾಗತಿಕ ವಿದ್ಯಮಾನಕ್ಕೆ ತಕ್ಕಂತೆ ಹೊಂದಿಕೊಂಡು, ಪ್ರತಿಯೊಂದು ವಿಭಾಗಗಳಲ್ಲೂ ಆಸಕ್ತಿಯಿಂದ ಮುನ್ನುಗ್ಗುವ ಛಲ ರೂಢಿಸಿಕೊಂಡಾಗ ಸಮಾಜದಲ್ಲಿ ಮುಂದೆ ಬರಲು ಸಾಧ್ಯ ಎಂದು ಬೆಂಗಳೂರು ಪ್ರಿಕೋಲ್ ಅಟೋಮೋಟಿವ್ ಕಂಪೆನಿಯ ಜನರಲ್ ಮ್ಯಾನೆಜರ್ ವಿಲಾಸಿನಿ ಪ್ರಭು ಹೇಳಿದ್ದಾರೆ.
ಬಂಟಕಲ್ಲು ರಾಜಾಪುರ ಸಾರಸ್ವತ ಸಂಘ ವತಿಯಿಂದ ಮಣಿಪಾಲ ಆರ್ಎಸ್ಬಿ ಸಭಾಭವನದಲ್ಲಿ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿ ವೇತನ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ನ್ಯಾಯಾಧೀಶ ಸಂದೇಶ ಪ್ರಭು ಮುದ್ರಾಡಿ ಮಾತನಾಡಿದರು. ಹಿರಿಯ ಯಕ್ಷಗಾನ ಭಾಗವತ ಎಳ್ಳಾರೆ ವೆಂಕಟರಾಯ ನಾಯಕ್, ಉದಯೋನ್ಮುಖ ಚಲನಚಿತ್ರ ನಟಿ ಸುಕೃತಾ ವಾಗ್ಲೆ, ಡಾಕ್ಟರೇಟ್ ಪುರಸ್ಕೃತ ಶಾಂತಲಾ ಬಿ., 30 ಬಾರಿ ರಕ್ತದಾನ ಮಾಡಿದ ಶಿಕ್ಷಕ ದೇವದಾಸ ಪಾಟ್ಕರ್ ಮುದರಂಗಡಿ, ಉಡುಪಿ ನಗರಸಭೆ ನೂತನ ಸದಸ್ಯರಾಗಿ ಆಯ್ಕೆಯಾದ ಶಾಂತಾರಾಮ ಸಾಲ್ವಣ್ಕರ್, ಸುಮಿತ್ರಾ ಆರ್. ನಾಯಕ್, ನರಸಿಂಹ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಹಾಗೂ ಉಡುಪಿ ಜಿಪಂ ಅಧ್ಯಕ್ಷ ಬಿ.ಉಪೇಂದ್ರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಪಿ.ವಿ. ಪ್ರಭು (ಯುಎಸ್ಎ), ರಾಮಕೃಷ್ಣ ನಾಯಕ್, ರಮಾನಂದ ನಾಯಕ್, ಆರ್ಎಸ್ಬಿ ಮಹಿಳಾ ಘಟಕ ಅಧ್ಯಕ್ಷೆ ಸುಮಾ ಎಸ್. ನಾಯಕ್, ಕಾರ್ಯದರ್ಶಿ ನರಸಿಂಹ ನಾಯಕ್ ಇದ್ದರು. ಸಂಘದ ಉಪಾಧ್ಯಕ್ಷ ಸದಾಶಿವ ಪ್ರಭು ಸ್ವಾಗತಿಸಿದರು. ಕೆ.ಆರ್. ಪಾಟ್ಕರ್ ಬಂಟಕಲ್ಲು ವಂದಿಸಿದರು.
ಕೊಡವೂರು ದೇವಳದಲ್ಲಿ ಕರಸೇವೆ
ಉಡುಪಿ; ಧಾರ್ಮಿಕ ಕ್ಷೇತ್ರಗಳಲ್ಲಿ ಕರಸೇವೆ ಮಾಡುವವರಿಗೆ ದೈಹಿಕ ಹಾಗೂ ಆಧ್ಯಾತ್ಮಿಕ ಲಾಭಗಳಾಗುತ್ತವೆ. ಆದ್ದರಿಂದ ಭಗವದ್ಭಕ್ತರು ಅವಕಾಶ ಸಿಕ್ಕಿದಾಗಲೆಲ್ಲ ಧಾರ್ಮಿಕ ಕ್ಷೇತ್ರಗಳ ಕರಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಜನ್ಮ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು. ಇತ್ತೀಚೆಗೆ ಅಷ್ಠಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಇಲ್ಲಿನ ಕೊಡವೂರಿನ ಮಹತೋಭಾರ ಶ್ರೀಶಂಕರನಾರಾಯಣ ದೇವಳದ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ಗರ್ಭಗುಡಿಯಲ್ಲಿರುವ ಬಾವಿಯನ್ನು ಶುಚಿತ್ವಗೊಳಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಮ್ಮ ಮುಂದಿನ ಜನಾಂಗ ಇಂತಹ ಸ್ಥಳಗಳಲ್ಲಿ ನಮ್ಮನ್ನು ನೆನಪಿಸಿಕೊಳ್ಳುವಂತಹ ದೇವರ ಸೇವೆ ನಮ್ಮಿಂದ ನಡೆಯಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಶ್ರೀದೇವಳದ ಹಯವದನ ತಂತ್ರಿ, ಆಡಳಿತ ಮೊಕ್ತೇಸರ ಟಿ. ರಾಘವೇಂದ್ರ ರಾವ್, ದೇವಳದ ಸಹ ಮೂಕ್ತೇಸರರಾದ ರಾಘವೇಂದ್ರ ಭಟ್, ಕಾಳು ಶೇರಿಗಾರ್, ವಿಜಯ ಎಂ. ಬಂಗೇರ, ಸುಧಾ ಉಳಿತ್ತಾಯ, ಕೆ.ಟಿ. ಪ್ರಸಾದ್, ಡಾ. ಗೋದಾವರಿ, ಸುರೇಶ್ ಶೆಟ್ಟಿ, ಈಶ್ವರ್, ಭಕ್ತವೃಂದದ ಅಧ್ಕಕ್ಷ ರವಿರಾಜ್ ಹೆಗ್ಡೆ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

