ಉಡುಪಿ

ಕನ್ನಡ ಸಾಹಿತ್ಯ ಸಮ್ಮೇಳನ ಪ್ರಚಾರ ರಥಕ್ಕೆ ಸ್ವಾಗತ

Published On :

ಶನಿವಾರಸಂತೆ: 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನದ ಪ್ರಚಾರ ರಥ ಶನಿವಾರ ಗೋಪಾಲಪುರ, ಜಗೆನಹಳ್ಳಿ, ನಿಡ್ತ, ಹಾರೆಹೊಸೂರು, ಗುಡುಗಳಲೆ ಮಾರ್ಗವಾಗಿ ಶನಿವಾರಸಂತೆ ತಲುಪಿತು. ಜಿಲ್ಲಾ ಪಂಚಾಯ್ತಿ ಸದಸ್ಯ ಡಿ.ಬಿ. ಧರ್ಮಪ್ಪ ಮಾತನಾಡಿದರು. ನಿಡ್ತ ಪಂಚಾಯ್ತಿಯಲ್ಲಿ ಕನ್ನಡ ರಥವನ್ನು ಗ್ರಾಮ ಪಂಚಾಯ್ತಿ ವತಿಯಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಗುಡುಗಳಲೆಯಿಂದ ಕೆಆರ್‌ಸಿ ಸರ್ಕಲ್‌ವರೆಗೆ ರಥದೊಂದಿಗೆ ಮೆರವಣಿಗೆ ತೆರಳಿ ನಂತರ ಕೊಡ್ಲಿಪೇಟೆಗೆ ಬೀಳ್ಕೊಡಲಾಯಿತು. ಪ್ರಚಾರ ಸಮಿತಿಯ ಶಿವಾನಂದ್, ಪಿಲಿಫಾಸ್, ಮಂಜುನಾಥ್, ಆನಂದ್, ಚಂದ್ರಪ್ಪ, ವಿಶ್ವನಾಥ್, ಲಲಿತ, ಶನಿವಾರಸಂತೆ ಗ್ರಾಪಂ ಅಧ್ಯಕ್ಷೆ ಭುವನೇಶ್ವರಿ, ಜ್ಯೋತಿ, ಮಂಜುನಾಥ್, ಶ್ರೀಪತಿ, ಸೋಮಪ್ಪ, ನಾಗಣ್ಣ, ತಾಪಂ ಸದಸ್ಯೆ ಸವಿತ, ಜಯಮ್ಮ, ಪ್ರತಾಪ್, ಡಿ.ಕೆ. ಗಣೇಶ್, ಪುಟ್ಟಸ್ವಾಮಿ, ಪಿಡಿಒ ಶಿವಣ್ಣ, ಶಿವಪ್ರಕಾಶ್, ಜಯಕುಮಾರ್ ಕೆ.ಪಿ. ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.