ಪ್ರತಿಯೊಬ್ಬ ಯಶಸ್ವೀ ಹುಡುಗನ 'ಮುಂದೆ' ಸುಳಿದಾಡುವಳು
ನಡೆದಾಡುವ ಬ್ಯೂಟಿ ಪಾರ್ಲರ್
ಸೌಂದರ್ಯದ ಗಣಿ ಈ ಮೀನಾಕ್ಷಿ. ಅಗೆದರೆ ಬರೀ ಧೂಳು... ಆಆ... ಕ್ಷಿ...
ಹುಡುಗನನ್ನು ತನೆಗೆ ಬೇಕಾದಂತೆ ಬೆಂಡಾಗಿಸುವಳು
ಬೆಡಗಿಗಿರುವ ಇನ್ನೊಂದು ಹೆಸರು- ಹುಡುಗಿ
ಹಡಗಿನಂಥ ಮೈಯ್ಯವಳು ತುದಿ ಚೂಪು, ಬುಡ ಚೂಪು, ನಡು ಅಗಲ
ಮುಟ್ಟದಿದ್ದರೂ ಮುನಿಯುವವಳು
ಹೃದಯವನ್ನೇ ಸೀಳುವ ಸೀಳುನೋಟ ಅಕೆಯದು
ನಾಚಿಕೆ ಮುಳ್ಳು ಅಥವಾ ನಾಚಿದಂತೆ ನಟಿಸಿ ಮಳ್ಳು ಮಾಡವಳು
ಮನೆಯವರು ಜಾಗೃತಿ ತಪ್ಪಿದರೆ ಹುಡುಗಿಯನ್ನು ಹುಡುಕಿ ಎನ್ನಬೇಕಾಗುತ್ತದೆ
ಕನ್ಯೆಯೂ ಹೌದು, ಕುಮಾರಿಯೂ ಹೌದು ಈ ಕನ್ಯಾ ಕುಮಾರಿ
ಇಂದಿನ ಹುಡುಗಿ, ಮುಂದಿನ ಹೆಂಡತಿ, ಭವಿಷ್ಯದ ಮುದುಕಿ
ನಾಚಿಕೆ, ಮಾನ, ಮರ್ಯಾದೆ, ಶೀಲ ಎಲ್ಲವನ್ನೂ ಸಮಾಜ ಈಕೆಯ ತಲೆಗೇ ಕಟ್ಟಿಬಿಟ್ಟಿದೆ
ವಿಶ್ವನಾಥ ಸುಂಕಸಾಳ