ಪಾಕ್ ಕ್ರೌರ್ಯ, ನಮ್ಮ ಸರ್ಕಾರದ ಮೃದುಧೋರಣೆ
ಆಗಸ್ಟ್ 8ರ Indian Express ಪತ್ರಿಕೆಯಲ್ಲಿ ಒಂದು ವಿಡಂಬನೆಯ ಕಾರ್ಟೂನ್ ಇದೆ. ಅದರಲ್ಲಿ ಹತ್ತಾರು ಸೈನಿಕ ಶವ ಪೆಟ್ಟಿಗೆಗಳು, ಪಕ್ಕದಲ್ಲಿ ರಕ್ಷಣಾ ಸಚಿವರು ಮತ್ತು ಪ್ರಧಾನಿ ಎಡಗೈಯನ್ನು ತೋರಿಸುತ್ತಾ"the amemded Statement of border Killing' ಎಂದು ಬರೆದಿದ್ದ ಹೇಳಿಕೆ ಹಾಗೂ ಎಡಭಾಗದಲ್ಲಿ "For the sake of peace we must think out of Box' ಶಾಂತಿಗಾಗಿ ಶವಪಟ್ಟಿಗೆ ಆಚೆಗೂ ನಾವು ಯೋಚನೆವಾಡಬೇಕು. ಎಂಥ ವ್ಯಂಗ್ಯ, ವಿಡಂಬನೆ! ನಮ್ಮನ್ನಾಳುವವರ ಮನೋಪ್ರವೃತ್ತಿಗೆ, ನಿರ್ವೀರ್ಯತೆಗೆ ಹಿಡಿದ ಕೈಗನ್ನಡಿ.
ಗಡಿಯಲ್ಲಿ ಪಾಕ್ ಯೋಧರು 450 ಮೀಟರ್ನಷ್ಟು ನಮ್ಮ ನೆಲೆಯೊಳಗೆ ನುಗ್ಗಿ 5 ಯೋಧರ ಪ್ರಾಣ ತೆಗೆದಾಗಲೂ ನಮ್ಮಲ್ಲಿ ಖಂಡಿಸಲು ಪದವೇ ಇಲ್ಲ. ಈಗ್ಗೆ 2 ತಿಂಗಳ ಹಿಂದೆ ನಮ್ಮ ಇಬ್ಬರು ಯೋಧರನ್ನು ಶಿರಚ್ಛೇದನದ ಮೂಲಕ ಕೊಂದ ಪಿಶಾಚಿಗಳು ಇವರು. ಗಡಿಭಾಗಗಳಲ್ಲಿ ಪಾಕ್ ಮತ್ತು ಚೀನಾ ದೇಶಗಳ ತಂಟೆ ತಕರಾರು, ಪ್ರಾಣಹಾನಿ, ಅತಿಕ್ರಮ ತಪ್ಪಿದ್ದಲ್ಲ. ಇತ್ತೀಚೆಗಷ್ಟೇ ಚೀನ 19 ಕಿ.ಮೀ. ಒಳನುಗ್ಗಿ ನಮ್ಮವರು ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳನ್ನು ಧ್ವಂಸ ಮಾಡಿ ತೆರಳಿದ್ದಾರೆ.
ಹೀಗೆ ಗಡಿಭಾಗದಲ್ಲಿ ಈ ಎರಡು ದೇಶಗಳು ನಮಗೆ ಅವಮಾನ ಮಾಡುತ್ತಿರುವಾಗ, ನಮ್ಮ ಯೋಧರನ್ನು ಬರ್ಬರವಾಗಿ ಕೊಲ್ಲುತ್ತಿರುವಾಗ ನಮ್ಮ ಸರ್ಕಾರ ದಿಟ್ಟವಾಗಿ ಯಾವ ಪ್ರತಿಭಟನೆಯನ್ನೂ ನೀಡುತ್ತಿಲ್ಲ. ಮೇಲಾಗಿ ಪಾಕ್ಗೆ ಅನುಕೂಲವಾಗುವಂತೆ ಹೇಳಿಕೆ ನೀಡುವ ಇಂಥ ಪ್ರಧಾನಿ, ರಕ್ಷಣಾ ಸಚಿವರು, ವಿದೇಶಾಂಗ ಸಚಿವರು ಬೇರೆ ಯಾವ ದೇಶದಲ್ಲೂ ಇಲ್ಲ! ಬಹುಶಃ ಇದೇ ಟೀಮ್ ಇದ್ದರೆ ಈ ದೇಶವನ್ನೇ ಹರಾಜು ಹಾಕಿ ಬಿಡುತ್ತಾರೆ ಎನಿಸುತ್ತದೆ. ನಮ್ಮ ಪ್ರಧಾನಿಯವರಿಗೆ ಮತ್ತು ರಕ್ಷಣಾ ಸಚಿವರಿಗೆ ನಮ್ಮ ಯೋಧರ ಪ್ರಾಣಗಳಿಗಿಂತ ಪಾಕಿಸ್ತಾನದ ಜತೆ ಮಾತುಕತೆ ಮುಖ್ಯವಾಗಿ ಬಿಟ್ಟಿದೆ. ಪಾಕ್ ಜತೆ ಶಾಂತಿ ಮಾತುಕತೆಗೆ ಇದು ಸರಿಯದ ಸಮಯ ಅಲ್ಲ. ಹಾಗೆ ನೋಡಿದರೆ ಅವರು ನಂಬಲರ್ಹರೇ ಅಲ್ಲ. ಅದ್ಯಾಕೆ ನಮ್ಮ ಸರಕಾರಕ್ಕೆ ಪಾಕನ್ನು ಸಮರ್ಥಿಸುವ ಹುಚ್ಚೋ ಗೊತ್ತಿಲ್ಲ.
ಈ ಕೃತ್ಯ ಎಸಗಿರುವವರು ಪಾಕ್ ಸೈನಿಕರೋ ಅಥವಾ ಉಗ್ರರೋ ಎಂಬ ಚರ್ಚೆ ಬೇಕಾಗಿಯೇ ಇಲ್ಲ. ಈ ಉಗ್ರರಿಗೆ ಅಡಗುತಾಣಗಳನ್ನು ನೀಡಿರುವುದು ಪಾಕಿಸ್ತಾನವಲ್ಲವೆ? ಅಂದ ಮೇಲೆ ಗಡಿ ಉದ್ದಕ್ಕೆ ಪಾಕ್ ಕಡೆ ಇರುವ ಈ ಉಗ್ರರ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸುವುದು ಬಿಟ್ಟು ಘಟನೆಯನ್ನೇ ತೇಲಿಸುವ, ಸಮಜಾಯಿಷಿ ನೀಡುವ ಇಂಥ ರಕ್ಷಣಾ ಸಚಿವರನ್ನು ಏನೆನ್ನೋಣ? ಚೀನೀಯರು ಗಡಿ ಒಳನುಗ್ಗಿದಾಗ ಗಡಿಯಲ್ಲಿ ಇಂಥ ಘಟನೆಗಳು ಸಾಮಾನ್ಯ ಎಂದು ಅಪ್ಪಣೆ ಕೊಡಿಸಿದರು ನಮ್ಮ ಸ್ಥಿತಪ್ರಜ್ಞ ಪ್ರಧಾನಿಗಳು.
ಇಂಥ ಹೇಡಿ ಜನರ ಕೈಗೆ ನಮ್ಮ ದೇಶವನ್ನು ಒಪ್ಪಿಸಿದೆವಲ್ಲಾ ಅಂತ ನಾವು ವೇದನೆ ಪಡುವುದೇ ಜನತೆಗೆ ಉಳಿದಿರುವ ದಾರಿ. ಈ ಹತ್ತು ವರ್ಷಗಳಲ್ಲಿ ಈ ಸರ್ಕಾರ ಸುತ್ತಲೂ ವೈರಿಗಳನ್ನು ಹೆಚ್ಚು ಮಾಡಿಕೊಳ್ಳುವಲ್ಲಿ ಯಶಸ್ವಿ ಆಗಿದೆ ಎನಿಸುತ್ತಿದೆ. ನೇಪಾಳ, ಮ್ಯಾನ್ಮಾರ್, ಶ್ರೀಲಂಕಾ, ಬಾಂಗ್ಲಾ, ಚೀನಾ, ಪಾಕ್, ಹೀಗೆ ಎಲ್ಲರೂ ನಮ್ಮ ಮೇಲೆ ಸವಾರಿ ಮಡುವವರೆ.
ಅಂತು ನಮ್ಮ ಪ್ರಧಾನಿಗಳು ದೇಶದ ಅಲ್ಪ ಸಂಖ್ಯಾತರನ್ನಷ್ಟೆ ಓಲೈಸುತ್ತಾರೆ ಎಂದು ತಪ್ಪಾಗಿ ತಿಳಿದಿದ್ದ ನಮಗೆ ಅವರು ನಮ್ಮ ಅಲ್ಪಸಂಖ್ಯಾತರನ್ನಷ್ಟೆ ಅಲ್ಲ ಪಾಕ್ನ ಬಹು ಸಂಖ್ಯಾತರನ್ನು ಓಲೈಸುತ್ತಾರೆ ಎಂಬ ಸತ್ಯ ಅರಿವಾಗಿದೆ.
-ವೆಂಕಟೇಶ ಮುಡಿಯನೂರು, ಬೆಂಗಳೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

