ಸಂಪಾದಕೀಯ

ಬೇಡವಾಗಿದ್ದ ಅವಾಂತರ

Published On :

ಕಲ್ಲಿದ್ದಲ ಗಣಿಗಳ ಹಕ್ಕನ್ನು ನಾನಾ ಅರ್ಜಿದಾರ ಸಂಸ್ಥೆಗಳಿಗೆ ಹಂಚಿದ ರೀತಿ ನೀತಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದು 186 ಲಕ್ಷ ಕೋಟಿ ರುಪಾಯಿಗಳ "ಸಾಂಕೇತಿಕ ನಷ್ಟವಾಗಿದೆ" ಎನ್ನುವ ಆರೋಪ ಈಗಿನ ಸಂಸತ್ತಿನ ಅಧಿವೇಶನವನ್ನೇ ಗೊಂದಲದಲ್ಲಿ ಮುಳುಗಿಸಿದೆ.
ಈ ವ್ಯವಹಾರದ ತನಿಖೆಯೂ ನಡೆಯುತ್ತಿದೆ. ಇಲ್ಲಿ ವಿಪರೀತವಾದ ದೊಡ್ಡ ವಿವಾದವನ್ನು ಎಬ್ಬಿಸಿರುವ ವಿಚಾರ ಎಂದರೆ, ನೂರಾರು ಕಡತಗಳು ನಾಪತ್ತೆಯಾಗಿರುವುದು. ಹಾಗೆಂದು ಕಲ್ಲಿದ್ದಲು ಮಂತ್ರಿ ಶ್ರೀ ಪ್ರಕಾಶ ಜೈಸ್ವಾಲ್ ಅವರೇ ಹೇಳಿದ್ದಾರೆ.
ಈ ಅವ್ಯವಹಾರ ನಡೆದ ಸಮಯದಲ್ಲಿ ಸ್ವಲ್ಪ ಕಾಲ ಪ್ರಧಾನಿ ಮನಮೋಹನ ಸಿಂಗ್ ಅವರೇ ಆ ಖಾತೆಯ ಜವಾಬ್ದಾರಿಯನ್ನು ಹೊತ್ತಿದ್ದರು. ಆ ಅವಧಿಯ ಕೆಲವು ಕಡತಗಳೂ ನಾಪತ್ತೆಯಾಗಿವೆ. ಎನ್ನುವ ವರದಿಗಳೂ ಇವೆ.
ಕಡತಗಳು ಏನಾಗಿವೆ ಎನ್ನುವುದನ್ನು ಪತ್ತೆಹಚ್ಚಲು ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿ ಹರಸಾಹಸ ಪಟ್ಟರೂ ಕಡತಗಳು ಸಿಗುತ್ತಿಲ್ಲ ಎಂದೂ ವರದಿಗಳು ತಿಳಿಸಿವೆ. ಈ ವಿಷಯದಲ್ಲಿ ದೊಡ್ಡ ರಂಪ-ರಾದ್ಧಾಂತವೇ ಕಾದಿದೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಶುಕ್ರವಾರ ಒಂದು ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯಂತೆ ಆಡಿಟರ್ ಜನರಲ್‌ರ ಕಾರ್ಯಾಲಯದಲ್ಲಿ (ಈಗಾಗಲೇ ಆಡಿಟ್ ವರದಿ ಪ್ರಕಟವಾಗಿದೆ) 1993 ರಿಂದ 2012ರ ವರೆಗಿನ ಅವಧಿಯ ಎಲ್ಲ ಪ್ರಮುಖ ಕಡತಗಳ ಪ್ರತಿಗಳೂ ಭದ್ರವಾಗಿವೆ. ಹಾಗೆಂದು ಆ ಕಾರ್ಯಾಲಯದ ಹಿರಿಯ ಅಧಿಕಾರಿಯೊಬ್ಬರು ಅಧಿಕೃತವಾಗಿಯೇ ತಿಳಿಸಿದ್ದಾರೆ.
ಹಾಗಿದ್ರೆ ಸಂಸತ್ತಿನಲ್ಲಿ ನಡೆದ ಕೋಲಾಹಲವೆಲ್ಲ ವ್ಯರ್ಥವೇ ಎಂದಾಯಿತು. ಕಡತಗಳ ಪ್ರತಿಗಳು ಆಡಿಟರ್ ಬಳಿ ಇರಬಹುದೆನ್ನುವ ಶಂಕೆ ಸರ್ಕಾರದಲ್ಲಿ ಯಾರಲ್ಲೂ ಮೂಡದೇ ಇರುವುದು ಆಶ್ಚರ್ಯವೇ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.