ಅಪೂರ್ವ ಸಾಹಿತಿ ಜೊಸೆಫ್ ಕಾನ್ರಾಡ್
ಜೊಸೆಫ್ ಕಾನ್ರಾಡ್ ಇಂಗ್ಲಿಷ್ ಭಾಷೆಯ ಒಬ್ಬ ಅಪ್ರತಿಮ ಸಾಹಿತಿ. 1857 ರಿಂದ 1924 ರವರೆಗೆ ಜೀವಿಸಿದ್ದ ಇವರು ಕಾದಂಬರಿಕಾರರಾಗಿ ಮತ್ತು ಸಣ್ಣಕಥೆಗಳ ಬರಹಗಾರರಾಗಿ ಅಚ್ಚಳಿಯದ ಪ್ರಭಾವ ಹೊಂದಿದ್ದಾರೆ. ಅವರು ರಷ್ಯಾದ ಅಲ್ಮೇರ್ ಪೊಲ್ಲಿಯಲ್ಲಿ ಜನಿಸಿದ, ಪೋಲಿಷ್ ಭಾಷೆಯನ್ನು ಮಾತೃಭಾಷೆಯನ್ನಾಗಿ ಹೊಂದಿದ ಪ್ರತಿಭಾವಂತ. ಅವರನ್ನು ಮೂರು ಸಂಸ್ಕೃತಿಗಳ ಅಪೂರ್ವ ವ್ಯಕ್ತಿ ಎಂದು ಗುರುತಿಸಲಾಗುತ್ತಿದೆ. ಏಕೆಂದರೆ ಪೋಲಿಷ್ ಮಾತೃಭಾಷೆ, ಬೆಳೆದಂತೆಲ್ಲಾ ಫ್ರೆಂಚ್ ಕಲಿತು, ಫ್ರಾನ್ಸ್ ದೇಶಕ್ಕೆ ಹೋಗಿ ಅಲ್ಲಿ ನಾಲ್ಕು ವರ್ಷಗಳ ಕಾಲ ಹಡಗೊಂದರಲ್ಲಿ ಸೇವೆ ಸಲ್ಲಿಸಿ, ನಂತರ ಹದಿನೈದು ವರ್ಷಗಳ ಕಾಲ ಬ್ರಿಟಿಷ್ ವ್ಯಾಪಾರಿ ಹಡಗಿನಲ್ಲಿ ಸೇವೆ ಸಲ್ಲಿಸಿದರು. ತಮ್ಮ ಹತ್ತೊಂಭತ್ತು ವರ್ಷಗಳ ಅವಧಿಯಲ್ಲಿ ಅರ್ಧಕ್ಕೂ ಹೆಚ್ಚು ಕಾಲ ಸಮುದ್ರ ಪ್ರಯಾಣದಲ್ಲಿ ಕಳೆದರು.
ಇಪ್ಪತ್ತೈದನೆಯ ವಯಸ್ಸಿನವರೆಗೆ ಅವರಿಗೆ ಇಂಗ್ಲಿಷಿನ ಗಂಧಗಾಳಿ ಗೊತ್ತಿರಲಿಲ್ಲ. ಆದರೆ ಇಂಗ್ಲಿಷ್ ಭಾಷೆಯನ್ನು ವ್ಯವಹಾರಕ್ಕಾದರೂ ಕಲಿಯಬೇಕೆಂದು 25ನೆಯ ವಯಸ್ಸಿನಲ್ಲಿ ಎ.ಬಿ.ಸಿ.ಡಿ ಕಲಿಯಲು ಪ್ರಾರಂಭಿಸಿದರು. ಇಂಗ್ಲಿಷ್ ಜ್ಞಾನ ಹೆಚ್ಚಿಸಿಕೊಳ್ಳಲು ಇಂಗ್ಲಿಷ್ ಸಾಹಿತ್ಯವನ್ನೋದಲು ಪ್ರಾರಂಭಿಸಿದರು. ಇದರಿಂದ ಆಂಗ್ಲ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿತು. ನಂತರ ಅನೇಕ ಸಣ್ಣ ಕಥೆಗಳನ್ನು ಮತ್ತು ಕಾದಂಬರಿಗಳನ್ನು ಬರೆದಾಗ ಅವರ ಸೃಜನಶೀಲತೆಯನ್ನು ಗುರುತಿಸಿದ ಸಾಹಿತ್ಯಾಸಕ್ತರು ಬರವಣಿಗೆಗೆ ಪ್ರೋತ್ಸಾಹ ನೀಡಿದರು. ಇದರಿಂದ ಉತ್ತೇಜನಗೊಂಡು ಅನೇಕ ಕಾದಂಬರಿಗಳನ್ನು ಬರೆದು ಜೊಸೆಫ್ ಪ್ರಸಿದ್ಧರಾದರು.
ಜ್ಞಾನ ಸಂಪಾದಿಸಲು ವಯಸ್ಸು ಮುಖ್ಯವಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು. ಅವರ ಅನೇಕ ಕಾದಂಬರಿಗಳು ಚಲನಚಿತ್ರವಾಗಿ ಸಹ ಜನಪ್ರಿಯಗೊಂಡವು. ದಿ ಅಲ್ಮೈರ್, ದಿ ಲಗೂನ್, ಹಾರ್ಟ್ ಆಫ್ ಡಾರ್ಕ್ನೆಸ್, ಯೂತ್, ದಿ ಸೀಕ್ರೇಟ್ ಏಜೆಂಟ್ ಮುಂತಾದವುಗಳು ಅವರ ಯಶಸ್ವಿ ಕಾದಂಬರಿಗಳಲ್ಲಿ ಕೆಲವು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

