ಪ್ರಾದೇಶಿಕವಾರು ಕಬ್ಬಿನ ದರ ನಿಗದಿ ಸೂಕ್ತ
ಕೆಮಿಕಲ್ ಇಂಜಿನಿಯರಿಂಗ್ ಪದವೀಧರನಾಗಿದ್ದು, ಕಳೆದ 12 ವರ್ಷಗಳಿಂದ ಕರ್ನಾಟಕ ರಾಜ್ಯದ ದಕ್ಷಿಣ ಹಾಗೂ ಉತ್ತರ ಕರ್ನಾಟಕದ ವಿವಿಧ ಸರ್ಕಾರಿ, ಸಹಕಾರಿ ಹಾಗೂ ಖಾಸಗಿ ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸಿದ ಅನುಭವ ಆಧಾರದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಕ್ಕರೆ ಸಚಿವರಿಗೆ ಸಲಹೆ ಕೊಡುತ್ತಿದ್ದೇನೆ. ಬಹುಪಾಲು ದಕ್ಷಿಣ ಕರ್ನಾಟಕದ ಮಂಡ್ಯ, ಮೈಸೂರು, ಹಾಸನ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳು ವಾರ್ಷಿಕ ಹಂಗಾಮು (Season))ವನ್ನು ಜೂನ್ ಹಾಗೂ ಜುಲೈನಲ್ಲಿ ಆರಂಭಿಸುತ್ತೇವೆ. ಬಹುತೇಕ ಮಾರ್ಚ್ ಅಥವಾ ಏಪ್ರಿಲ್ನಲ್ಲಿ ಹಂಗಾಮವನ್ನು ಮುಗಿಸುತ್ತವೆ. ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ (Recovery) ಶೇಕಡ 9ರಿಂದ 10.5 ರವರೆಗೆ ಇರುತ್ತದೆ. (ಅಂದರೆ 1000 ಕೆ.ಜಿ. ಕಬ್ಬನ್ನು ಅರೆದರೆ 90ರಿಂದ 105 ಕೆ.ಜಿ. ಸಕ್ಕರೆ ಉತ್ಪಾದನೆ). ಇನ್ನು ಉತ್ತರ ಕರ್ನಾಟಕದ ಬಿಜಾಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಸಕ್ಕರೆ ಕಾರ್ಖಾನೆಗಳು ವಾರ್ಷಿಕ ಹಂಗಾಮನ್ನು ಸಪ್ಟೆಂಬರ್ ಅಥವಾ ಅಕ್ಟೋಬರ್ನಲ್ಲಿ ಆರಂಭಿಸುತ್ತವೆ. ಬಹುತೇಕ ಮೇ ಅಥವಾ ಜೂನ್ನಲ್ಲಿ ಹಂಗಾಮವನ್ನು ಮುಗಿಸುತ್ತವೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಇಳುವರಿ ಶೇಕಡ 11ರಿಂದ 12.5 ರವರೆಗೆ ಇರುತ್ತದೆ. (ಅಂದರೆ 1000 ಕೆ.ಜಿ. ಕಬ್ಬನ್ನು ಅರೆದರೆ 110ರಿಂದ 125 ಕೆ.ಜಿ. ಸಕ್ಕರೆ ಉತ್ಪಾದನೆ). ಉತ್ತರ ಕರ್ನಾಟಕದ ಕಪ್ಪು ಎರೆ ಭೂಮಿಯಲ್ಲಿ ಉತ್ತಮ ಗುಣಮಟ್ಟದ ಕಬ್ಬನ್ನು ಬೆಳೆಯಬಹುದು. ಇನ್ನು ಹಗಲಿನಲ್ಲಿ ಬಿಸಿಲು ಹೆಚ್ಚಾಗಿದ್ದರೂ ರಾತ್ರಿ ವೇಳೆಯಲ್ಲಿ ತಂಡಿಯಾದ ಹವಾಗುಣ ಸಕ್ಕರೆ ಇಳುವರಿಗೆ ಅನುಕೂಲವಾಗಿರುತ್ತದೆ. ಮೇಲ್ಕಂಡ ವಿಷಯಗಳನ್ನು ಗಮನಿಸಿ ಕರ್ನಾಟಕ ಸರ್ಕಾರ ತಜ್ಞರ ಸಮಿತಿಯನ್ನು ರಚಿಸಿ ವರದಿ ತರಿಸಿಕೊಂಡು ವೈಜ್ಞಾನಿಕವಾಗಿ ಪ್ರಾದೇಶಿಕವಾರು ಇಳುವರಿ ಆಧಾರ ಮತ್ತು ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ನೋಡಿಕೊಂಡು ಕಬ್ಬಿನ ದರ ನಿಗದಿಪಡಿಸಿದರೆ ಪ್ರತಿ ವರ್ಷ ಹಂಗಾಮಿಗೆ ಮುಂಚೆ ದರ ನಿಗದಿ ಪಡಿಸಿ ಎಂದು ರೈತರು ಕಾರ್ಖಾನೆ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದನ್ನು ತಡೆಗಟ್ಟಬಹುದು.
-ನೇರಲಗುಡ್ಡ ಶಿವಕುಮಾರ್, ಶಿರಾ
ಹೇಳಿದ್ದೇನು, ಮಾಡುತ್ತಿರುವುದೇನು?
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರ ವಹಿಸಿಕೊಂಡ ಹೊಸತರಲ್ಲಿ ನಾಡಿನ ಜನತೆಯ ಏಳಿಗೆಗೋಸ್ಕರ ಅವಿರತವಾಗಿ ಶ್ರಮಿಸುತ್ತೇನೆ, ಜನತೆಯ ನೆಮ್ಮದಿ ನನ್ನ ಗುರಿ, ಸೇಡಿನ ರಾಜಕಾರಣಿ ನಾನಲ್ಲ, ಆಡಳಿತ-ಪ್ರತಿಪಕ್ಷದ ಶಾಸಕ-ಸಚಿವರೊಂದಿಗೆ ಸಹಕಾರ ಮನೋಭಾವನೆ ಇಟ್ಟುಕೊಂಡಿರುತ್ತೇನೆ ಎಂದೆಲ್ಲಾ ಹೇಳಿದ್ದರು. ಆದರೆ ಇವರು ಮಾಡಿದ್ದೇನು? ಕೆಳ ಮಧ್ಯಮ ವರ್ಗದ ಜನತೆಗೆ ದೊರೆಯುತ್ತಿದ್ದ ಪಡಿತರ ನಿಲ್ಲಿಸಿದಿರಿ. ಕೇವಲ ಹಸಿರು ಕಾರ್ಡುದಾರರಿಗೆ 1 ರೂ.ಗೆ ಅಕ್ಕಿ ಎಂದು ಪ್ರಚಾರ ಮಾಡಿದಿರಿ, ಏಕಪಕ್ಷೀಯ ತೀರ್ಮಾನ ನಿಮ್ಮದಾಯಿತು. ಏಕೆ ಮಧ್ಯಮ ಮತ್ತು ಕೆಳವರ್ಗದ ಜನ ಶ್ರೀಮಂತರೇ. ನಂತರ ಶಾದಿಭಾಗ್ಯ. ಅಹಿಂದ ವರ್ಗದ ಮಕ್ಕಳಿಗೆ ಪ್ರವಾಸ ಭಾಗ್ಯ ನೀಡಿ ಅವರ ಸಹಪಾಠಿ ಮಕ್ಕಳಿಗೆ ನಿರಾಸೆ ಮಾಡಿದಿರಿ. ಇವುಗಳಿಂದ ನೀವು ಅವರ ಎಲ್ಲಾ ಮತಗಳನ್ನು ಕಾಂಗ್ರೆಸ್ಗೆ ಕೊಡಿಸುತ್ತೀರಾ. ಶಾದಿ ಭಾಗ್ಯ ಯೋಜನೆಯಿಂದ ಹಿಂದೂ ಮುಸಲ್ಮಾನರ ನಡುವೆ ಅಂತರ ಜಾಸ್ತಿ ಮಾಡುತ್ತಿದ್ದೀರಾ. ಇನ್ನು ಸೇಡಿನ ರಾಜಕಾರಣ ಮಾಡುವುದಿಲ್ಲ ಎಂದು ಪ್ರಮಾಣವಚನ ಸ್ವೀಕಾರದಲ್ಲಿ ಹೇಳಿ ಎಲ್ಲರಿಂದ ಪ್ರಶಂಸೆ ಪಡೆದ ನೀವು 25 ದಿನ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಧರಣಿ ನಡೆಸಿದಾಗ ಸೌಜನ್ಯಕ್ಕಾದರೂ ನೀವಾಗಲಿ, ನಿಮ್ಮ ಸರ್ಕಾರದ ಪ್ರತಿನಿಧಿಗಳಾಗಲಿ ಹೋಗಿ ವಿಚಾರಿಸಿದಿರಾ? ಇದು ಸೇಡಿನ ರಾಜಕಾರಣ ಅಲ್ಲವೇ? ರೈತ ವಿರೋಧಿ ಅಲ್ಲ ಎಂದಿರಿ. ಆದರೆ ರೈತನೊಬ್ಬ ವಿಷ ಕುಡಿದು ಸಾಯುವವರೆಗೆ ರೈತನ ಕಡೆ ಸುಳಿಯಲಿಲ್ಲ. ಹೀಗೆ ಇನ್ನೂ ಅನೇಕ ವಿಚಾರಗಳು ನಿಮ್ಮನ್ನೇ ಬೊಟ್ಟು ಮಾಡಿ ತೋರಿಸುತ್ತಿವೆ.
-ಕೋರಾ ವಿಜಯಕುಮಾರ್
-ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

