ಹರಿಹರನ 'ಸಲ್ಲಾಪ'ಕ್ಕೂ ಕಲಾಪಕ್ಕೂ ಏನು ವ್ಯತ್ಯಾಸ?
ರವಿಕುಮಾರ್ ಜಿ. ಬಿ. 9449669897
ಐಪಿಎಸ್ ಅಧಿಕಾರಿಗಳು ಕೆಲಸಕ್ಕೆ ರಾಜೀನಾಮೆ ಕೊಟ್ಟು ರಾಜಕೀಯಕ್ಕೆ ಬರುತ್ತಿದ್ದಾರೆ ಏಕೆ?
ಕಳ್ಳರನ್ನು ಕಾಯುವ ಕೆಲಸಕ್ಕಿಂತ ಅದೇ ಪಂಗಡಕ್ಕೆ ಸೇರಿಬಿಡುವುದು ಲೇಸು ಎಂದಿರಬಹುದೇ?
ಪವನಕುಮಾರ ಕೆ. ವಿ. ಬಳ್ಳಾರಿ
ಹರಿಹರನ 'ಸಲ್ಲಾಪ'ಕ್ಕೂ ಕಲಾಪಕ್ಕೂ ಏನು ವ್ಯತ್ಯಾಸ?
ನಿಮ್ಮ ಖಾಸಗಿ ಕಲಾಪ ಆರಂಭಿಸುವುದಕ್ಕೂ ಮೊದಲು ಸಲ್ಲಾಪ ಓದಿಕೊಂಡರೆ ಎಲ್ಲವೂ ಸುಸೂತ್ರ!
ಫ್ಯಾಷನ್ ಡಿಸೈನರ್ ಮಧು, 9945737427
ತಲೆಕೂದಲು ಬೆಳೆಯುವಷ್ಟು ಬೇಗ ತಲೆಯೊಳಗೆ ಬುದ್ಧಿ ಬೆಳೆಯೋಲ್ಲವಲ್ಲ?
ಕೂದಲಿನಂತೆ ತಾನು ಬೆಳೆಯುತ್ತಿದ್ದರೆ ಕತ್ತರಿಸೋಕೆ ಯಾರಿದ್ದಾರೆ ಎಂಬ ಕಾಳಜಿ ಬುದ್ಧಿಗೆ!
ಸಿ. ನಾಗರಾಜ ಅರದೋಟ್ಲು, ಭದ್ರಾವತಿ
ಬ್ರಿಟಿಷರೇಕೆ ಭಾರತಕ್ಕೆ ರಾತ್ರಿವೇಳೆ ಸ್ವಾತಂತ್ರ್ಯ ಕೊಟ್ಟರು?
ಹಗಲಲ್ಲಿ ಕೊಟ್ಟಿದ್ದರೆ ತೆಗೆದುಕೊಳ್ಳವುದಕ್ಕೆ ನೂಕುನುಗ್ಗಲು ಉಂಟಾಗಬಹುದಿತ್ತೆಂಬ ಭಯ.
ಮೊಳಕಾಲ್ಮೂರು ಸುರೇಶ್, ಬಳ್ಳಾರಿ
ಪ್ರೇಮವೈಫಲ್ಯ ಹೊಂದಿದವರು ಆತ್ಮಹತ್ಯೆಗೆ ಶರಣಾಗುತ್ತಾರೆ ಏಕೆ?
ದಾಂಪತ್ಯದ ಮೂಲಕ ಹೊಂದಬಹುದಾಗಿದ್ದ ಸಾವು ತಪ್ಪಿಹೋಗಿದ್ದನ್ನು ಈ ಮೂಲಕ ಈಡೇರಿಸಿಕೊಳ್ಳುವ ತವಕದಿಂದ.
-ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

