ಶಾಸಕರ ವಿದೇಶ ಯಾತ್ರೆ
ಸರ್ಕಾರದ ಬೊಕ್ಕಸದ ಹಣದಿಂದ ನೆರವು ಪಡೆದು, ಶಾಸಕರು ತಂಡ -ತಂಡಗಳಲ್ಲಿ ಭಾರತ ಯಾತ್ರೆ ಹಾಗೂ ವಿದೇಶ ಯಾತ್ರೆಗಳನ್ನು ಕೈಗೊಳ್ಳುವುದು ಹೊಸದೇನೂ ಅಲ್ಲ. ಆ ವೆಚ್ಚವನ್ನು ಬಜೆಟ್ನಲ್ಲಿ ವಿಧಾನ ಮಂಡಲದ ಖರ್ಚಿನ ಬಾಬಿನಲ್ಲೇ ತೋರಿಸಿರುವುದರಿಂದ ಈ ಪ್ರವಾಸ ಯಾತ್ರೆಗಳನ್ನೂ ಶಾಸಕರ ಹುದ್ದೆಗೆ ಅಂಟಿಕೊಂಡ ಪರಿಕರ ಅಥವಾ ಸೌಲಭ್ಯವೆಂದೇ ಭಾವಿಸಲಾಗಿದೆ.
ಆದರೆ ಆಗಾಗ, ಕೆಲವೊಮ್ಮೆ ವಿಧಾನಮಂಡಲದ ಸದನಗಳಲ್ಲೇ ಇಂತಹ ಪ್ರವಾಸಗಳು ನಿಜವಾಗಿಯೂ ಅಗತ್ಯವೇ. ವಿಧಾನಮಂಡಲದ ಗುಣಮಟ್ಟ ಈ ಯಾತ್ರೆಗಳಿಂದ ಹೆಚ್ಚುತ್ತದೆಯೇ ಎನ್ನುವ ವಿಚಾರದಲ್ಲಿ ಚರ್ಚೆಯಾಗಿದ್ದೂ ಉಂಟು.
ಶಾಸಕರು ತಮ್ಮ ವೇತನ-ಭತ್ಯೆಯನ್ನು ತಾವೇ ನಿರ್ಧರಿಸಿಕೊಳ್ಳುವ ಅಧಿಕಾರವನ್ನು ಪಡೆದಿದ್ದಾರೆ. ಅವರಿಗೆ ಅಗತ್ಯವೆನಿಸಿದ ಸೌಲಭ್ಯಗಳಿಗೆ ಹಣವನ್ನು ಮಂಜೂರು ಮಾಡಿಕೊಳ್ಳುವ ಅಧಿಕಾರವೂ ಅವರದ್ದೇ. ಈ ಸ್ವಾಯತ್ತ ಅಧಿಕಾರವನ್ನು ಚಲಾಯಿಸಿ ಶಾಸಕರು ತಮ್ಮ ಭಾರತ ಯಾತ್ರೆ-ವಿದೇಶ ಯಾತ್ರೆಗಳಿಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಈಗಲೂ ಹಲವು ಶಾಸಕರು ವಿದೇಶ ಪ್ರವಾಸದಲ್ಲಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಒಂದು ದೊಡ್ಡ ತಂಡವೇ ಅಮೆಜಾನ್ ಹಾಗೂ ದಕ್ಷಿಣ ಅಮೆರಿಕದ ರಾಷ್ಟ್ರಗಳಿಗೆ ತೆರಳಲಿದೆ. ಯಾರಿಗೇ ಆಗಲಿ, ಇಂತಹ ಸೌಲಭ್ಯವನ್ನು ಕೊಟ್ಟ ಅನಂತರ ಅದನ್ನು ಹಿಂದಕ್ಕೆ ಪಡೆಯುವುದು ಕಷ್ಟ. ಅದರ ಅಗತ್ಯವೂ ಇಲ್ಲ.
ಇಂತಹ ಪ್ರವಾಸದಿಂದ ವಿಧಾನಮಂಡಲದ ಕೆಲಸದ ಗುಣಮಟ್ಟ ಹೆಚ್ಚುತ್ತದೆ ಎನ್ನುವ ವಾದದಲ್ಲೂ ಹುರುಳಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿಯೂ ಅಸಹಾಯಕರೇ ವಿಧಾನಮಂಡಲದ ಸಮಿತಿಗಳ ಕೆಲಸದಲ್ಲಿ ಅವರು ಹಸ್ತಕ್ಷೇಪ ಮಾಡುವಂತಿಲ್ಲ.
ಇದೆಲ್ಲವೂ ಸರಿ. ಆದರೆ ಸ್ವಯಂಪ್ರೇರಿತರಾಗಿ, ಶಾಸಕರೇ ಇಂತಹ ಮೋಜಿನ ಯಾತ್ರೆಗಳ ಉಪಯುಕ್ತತೆ ಕುರಿತು ಮರುಚಿಂತನೆ ಮಾಡಬಹುದಲ್ಲ. ಅದಕ್ಕೆ ಯಾರಾದರೂ ನಾಯಕತ್ವ ವಹಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

