ಕಮಲ್ ತಮ್ಮ ವಿಶ್ವರೂಪಂ ಚಿತ್ರವನ್ನು ಮನೆಮನೆಗೆ ಕಳುಹಿಸಬೇಕೆಂದುಕೊಂಡಿದ್ರು. ನೀವು ಅವ್ರ ಸಿನಿಮಾನೇ ಮನೆಗೆ ಕಳುಹಿಸ್ಬಿಟ್ರಲ್ಲಾ?
ಅದು ಮನೆ ಮಂದಿಯೆಲ್ಲಾ ಕುಳಿತು ನೋಡಬಹುದಾದ ಚಿತ್ರ ಅನ್ನೋ ಬಗ್ಗೆ ಅನುಮಾನ ಇತ್ತು, ಅದ್ಕೆ!
ವಿಶ್ವರೂಪಂಗೆ 'ಬ್ಯಾನ್'ಗಳೂರ್‌ನಲ್ಲೇ ಪ್ರಾಬ್ಲಂ ಇಲ್ಲ, ನೀವ್ ಮಾತ್ರ ಬ್ಯಾನ್ ಮಾಡಿದ್ದು ಸರಿನಾ?
ಅಯ್ಯೋ, ಇದೊಳ್ಳೇದಾಯ್ತು, ಕರ್ನಾಟಕದಲ್ಲಿ ಬಿಡುಗಡೆ ಆಯ್ತು ಅಂದ್ರೆ, ಇಲ್ಲೂ ಬಿಡುಗಡೆ ಆಗ್‌ಬೇಕು
ಅನ್ನೋಕೆ ಅದೇನ್ ಕಾವೇರಿ ನೀರಾ?
ಮೀಡಿಯಾಗಳಲ್ಲಿ ಎಲ್ರೂ 'ಸಿನಿಮಾದಲ್ಲಿ ಅಂಥದ್ದೇನಿಲ್ಲ' ಅಂತಿದಾರೆ, ನೀವ್ ಮಾತ್ರ ಬ್ಯಾನ್ ಮಾಡಿಯೇ ತೀರುತ್ತೇನೆ ಅಂತಿದೀರಲ್ಲ?
ನೋಡ್ರೀ, ನನ್ನ ಕಣ್ಣಿಗೆ ಕಂಡಿದ್ದು ಸರಿಯಾಗೇ ಇದೆ. ಇಷ್ಟೆಲ್ಲಾ ರಂಪ ಆಗ್ತಿರೋದು, ಕಮಲಹಾಸನ್‌ಗೆ ಸಪೋರ್ಟ್ ಮಾಡೋ ಈ ಮೀಡಿಯಾದವರ 'ಎಲ್ಲೋ ಜರ್ನಲಿಸಂ'ನಿಂದನೇ!
ಇದು ಜರ್ನಲಿಸಂ 'ನಿಂದನೆ'. 'ಎಲ್ಲೋ' ಜರ್ನಲಿಸಮ್? ಅದೇನೋ ಅಂತಾರಲ್ಲ, ಕಾಮಾಲೆ ಕಣ್ಣಿಗೆ ಲೋಕವೆಲ್ಲಾ 'ಹಳದಿ' ಅಂತ, ಹಂಗಾಯ್ತು. ಸರಿ, ಕಮಲಹಾಸನ್‌ಗೆ ರಜನೀಕಾಂತ್ ಸಪೋರ್ಟ್ ಇದೆಯಂತೆ, ಹುಷಾರು ಅವರು ತಲೆಕೆಡಿಸ್ಕೊಂಡ್ರೆ ನಿಮ್ಮ ಸರ್ಕಾರನೇ ಬ್ಯಾನ್ ಮಾಡ್‌ಬಿಡ್ತಾರೆ.
ರೀ, ಏನೇನೋ ಹೇಳಿ ಹೆದರಿಸ್ತೀರಲ್ಲ, ಬ್ಯಾನ್ ವಿಷಯ ಬಿಟ್ಟು ಬೇರೆ ಮಾತಾಡೋಕೆ ಏನ್ರೀ ಬ್ಯಾನೆ ನಿಮ್‌ಗೆ?
ಸದ್ಯದ ಹಾಟ್ ವಿಷಯ ಅದೇ ಅಲ್ವಾ? ಸರಿ, ಕಮಲಹಾಸನ್, ತಮಿಳುನಾಡು ಬಿಟ್ಟುಹೋಗ್ತೀನಿ ಅಂತ ಹೆದರಿಸಿದಾರಲ್ಲಾ?
ಹಂಗಿದ್ರೆ, ಅವರು ತಮಿಳುನಾಡು ಬಿಟ್ಟುಹೋಗುವುದನ್ನೂ ಬ್ಯಾನ್ ಮಾಡಿಬಿಡ್ತೀನಿ. 'ಬ್ಯಾನಿಗೊಂದು ಎಲ್ಲೆ ಎಲ್ಲಿದೆ...!'(ಕಾಲ್ಪನಿಕ ಸಂದರ್ಶನ )
ಒಮ್ಮೆ ಭೇಟಿ ಕೊಡಿ
ಪುರುಸೊತ್ತಿಲ್ಲದ ಬಡಗಿ ಅದೇನನ್ನೋ ಕೆತ್ತಿದನಂತೆ ಎನ್ನುವುದು ಗಾದೆ. ಆದರೆ ನಿಜವಾಗಿಯೂ ಆಸಕ್ತಿ ಇರುವವರಿಗೆ ಮರಗೆಲಸದಲ್ಲಿರಬಹುದಾದ ವಿವಿಧ ರೀತಿಯ ವಿನ್ಯಾಸಗಳನ್ನು ಶಾಸ್ತ್ರೋಕ್ತವಾಗಿ ಕಲಿಸುವ ಮಾಹಿತಿ ಕೇಂದ್ರಗಳು ಇವು. ಸಣ್ಣಪುಟ್ಟ ಮರದ ವಸ್ತುಗಳ ವಿನ್ಯಾಸದಿಂದ ಹಿಡಿದು, ದೊಡ್ಡ ಮಟ್ಟದ ಮರದ ಉಕರಣಗಳನ್ನು ತಯಾರಿಸುವ ವಿಧಾನಗಳ ಬಗ್ಗೆ ಇಲ್ಲಿ ತಾಂತ್ರಿಕ ವಿವರಗಳಿವೆ. 'ಮರಗುಳಿತನ'ದ ಬಗ್ಗೆ ಆಸಕ್ತಿ ಇದ್ದವರು ಈ ವೆಬ್‌ಸೈಟ್‌ಗಳನ್ನು ನೋಡಿ.
http://bit.ly/VuQ90y,
http://bit.ly/dwotQK
http://bit.ly/POvs2e
http://bit.ly/UMqLX0, http://bit.ly/qgJscR
ಹರಿ-ಕಥೆ
ಸಂಜೆ ಹೊತ್ತಿಗೆ ಖೇಮು ಸೀದಾ ಬಾರ್‌ಗೆ ನುಗ್ಗಿದ. ಟೇಬಲ್‌ನಲ್ಲಿ ಕೂತು ಡ್ರಿಂಕ್ಸ್ ಆರ್ಡರ್ ಮಾಡಿದ. ಎರಡನೇ ಪೆಗ್ ಶುರುವಾಗುವ ಹೊತ್ತಿಗೆ ಸ್ವಲ್ಪ ಮಜಾ ತೆಗೆದುಕೊಳ್ಳಬೇಕು ಅನಿಸಿತು ಖೇಮುಗೆ. ಆರ್ಡರ್ ತೆಗೆದುಕೊಳ್ಳಲು ಬಂದ ಬಾರ್ ಅಟೆಂಡರ್‌ನನ್ನು ಕೇಳಿದ, 'ನಿಂಗೊಂದು ಸರ್ದಾರ್ಜಿ ಜೋಕ್ ಹೇಳ್ಲಾ?'. ಬಾರ್‌ಅಟೆಂಡರ್‌ನ ಮುಖದಲ್ಲಿ ಸಿಟ್ಟು ಕಾಣಿಸಿಕೊಂಡಿತು. ನೇರ ಖೇಮುವಿನ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ, 'ನಿಂಗೊಂದ್ ವಿಷ್ಯ ಗೊತ್ತಾ? ನಾನೂ ಸರ್ದಾರ್ಜಿ, ಈ ಟೇಬಲ್ ಕ್ಲೀನರ್ ಅಲ್ಲಿ ನಿಂತಿದಾನಲ್ಲ, ಅವನೂ ಸರ್ದಾರ್ಜಿ, ಅಲ್ ನೋಡು ಕೌಂಟರ್‌ನಲ್ಲಿ ಕ್ಯಾಷಿಯರ್ ಕೂತಿದಾನಲ್ಲ, ಅವನೂ ಸರ್ದಾರ್ಜಿ, ನಮ್ಮ ಬಾರ್ ಓನರ್ ಕೂಡಾ ಸರ್ದಾರ್ಜಿ, ನಮ್ಮ ಬಾರ್‌ನ ಬೌನ್ಸರ್ ಇದಾನಲ್ಲ, ಅವನೂ ಸರ್ದಾರ್ಜಿ. ಇಲ್ಲಿ ನಿನ್ನ ಮುಂದೆ ಒಟ್ಟು 5 ಜನ ಸರ್ದಾರ್ಜಿಗಳು ಇದೀವಿ. ಹೇಳು, ಈಗಲೂ ನಿನಗೆ ಸರ್ದಾರ್ಜಿ ಜೋಕ್ ಹೇಳಬೇಕು ಅನ್ನಿಸ್ತಿದೆಯಾ?'. ಎಲ್ಲರನ್ನೂ ನೋಡಿದ ಖೇಮು 'ಇಲ್ಲ, ಇಲ್ಲ, ಪರವಾಗಿಲ್ಲ ಬಿಡಿ' ಎಂದವನು ಮರುಮಾತನಾಡದೆ ಸುಮ್ಮನಾದ. 5 ಜನ ಸರ್ದಾರ್ಜಿಗಳು, ನಾವು ಕನಿಷ್ಠಪಕ್ಷ ಒಂದು ಸರ್ದಾರ್ಜಿ ಜೋಕ್ ಅನ್ನಾದರೂ ಕಟ್ ಮಾಡಿದೆವು ಎಂಬ ಖುಷಿ ಮತ್ತು ಹೆಮ್ಮೆಯೊಂದಿಗೆ ವಾಪಸು ಹೋದರು. ಅಷ್ಟರಲ್ಲಿ ಖೇಮುವಿನ ಪಕ್ಕದ ಟೇಬಲ್‌ನಲ್ಲಿದ್ದವ ಇವನತ್ತ ನಗುತ್ತಾ ಹೇಳಿದ, 'ಬೇಕಿತ್ತಾ ಇದು?, ಆದ್ರೂ ಹೋಗಿ ಹೋಗಿ ಸರ್ದಾರ್ಜಿಗಳಿಗೆ ಹೆದರ್ಕೊಂಡ್ ಜೋಕ್ ಹೇಳಲಿಲ್ಲವಲ್ಲಾ ನೀನು'. ಅದಕ್ಕೆ ಖೇಮು ಹೇಳಿದ 'ಭಯ ಅಲ್ಲ, 5 ಜನ ಸರ್ದಾರ್ಜಿಗಳಿಗೆ, ಅರ್ಥ ಮಾಡಿಸ್‌ಬೇಕು ಅಂದ್ರೆ, ಒಂದೇ ಜೋಕ್‌ನ ಕನಿಷ್ಠ ಪಕ್ಷ 10 ಸಲ ಹೇಳ್‌ಬೇಕು. ಯಾವನಿಗ್ ಬೇಕು ಆ ಕಷ್ಟ ಅಂತ ಸುಮ್ಮನಾದೆ'.
ಸ್ಯಾಂಡಲ್‌ವುಡ್
ತಮ್ಮ ನಿರ್ಮಾಣ, ನಿರ್ದೇಶನದ 'ವಿಶ್ವರೂಪಂ' ಚಿತ್ರದ ಬಿಡುಗಡೆಗೆ ತಮಿಳುನಾಡಿನಲ್ಲಿ ತೊಂದರೆ ಮಾಡಿದ್ದಕ್ಕೆ ಬೇಸರಗೊಂಡಿರುವ ಕಮಲ್‌ಹಾಸನ್ ರಾಜ್ಯ ಬಿಟ್ಟು ಹೋಗುವ ಮಾತನ್ನಾಡಿದ್ದಾರೆ. ಒಂದುವೇಳೆ ಅದು ಸೀರಿಯಸ್ ಆಗಿ ಕಾರ್ಯಗತವಾಗುತ್ತದೆ ಎಂದಾದರೆ ಕಮಲ್‌ಹಾಸನ್ ಬರುವುದಿದ್ದರೆ, ಬೆಂಗಳೂರಿಗೆ ಬರಲಿ. ಹೇಗಿದ್ದರೂ ಕರ್ನಾಟಕದಲ್ಲಿ ತಮಿಳರ ಸಂಖ್ಯೆ ಹೆಚ್ಚಾಗಿಯೇ ಇರುವುದರಿಂದ ಕಮಲ್‌ಗೆ ಅಲ್ಲಿಗೂ ಇಲ್ಲಿಗೂ ಹೆಚ್ಚಿನ ವ್ಯತ್ಯಾಸವೇನೂ ಕಾಣಿಸಲಾರದು. ಬೆಂಗಳೂರನ್ನು ರಿಟೈರ್ ಆದವರ ಪಾಲಿನ ಸ್ವರ್ಗ ಎನ್ನುತ್ತಾರೆ. ಆದರೆ, ಅದಕ್ಕೊಂದು ಅಪವಾದ ಎನ್ನುವಂತೆ ರಿಟೈರ್ ಆಗುವ ಮುಂಚೆಯೇ ಕಮಲ್ ಬರಲಿ. ಇಲ್ಲಿಯೇ ಇದ್ದುಕೊಂಡು, ಕನ್ನಡ ಸಿನಿಮಾಗಳನ್ನು ಮಾಡಲಿ. ಹೇಗಿದ್ರೂ ನಮ್ಮಲ್ಲಿ ಡಬ್ಬಿಂಗ್‌ಗೆ ಒನ್ ವೇ ಪಾಲಿಸಿ. ಅವುಗಳನ್ನು ತಮಿಳು, ತೆಲುಗಿಗೆ ಡಬ್ ಮಾಡುವುದು ಕಷ್ಟವೇನಲ್ಲ. ಅಲ್ಲದೆ, ಕರ್ನಾಟಕಕ್ಕೆ ಎಷ್ಟೋ ಜನ ತಮಿಳುನಾಡಿಂದ ಇಲ್ಲಿಗೆ ವಲಸೆ ಬಂದಿದ್ದಾರೆ, ಬರುತ್ತಿದ್ದಾರೆ, ಅದರಿಂದ ನಮ್ಮ ಕನ್ನಡಿಗರಿಗೆ ಸಮಸ್ಯೆ ಹೆಚ್ಚುತ್ತಿದೆ ಎಂಬ ಹಳೆಯ ಬೇಸರದ ನಡುವೆ ಕನ್ನಡಿಗರು ಹೆಮ್ಮೆಪಡುವಂಥ ಮತ್ತು ಖುಷಿ ಪಡುವಂಥ ಒಂದೇ ಒಂದು ವಲಸೆಯಾದರೂ ಆಗಲಿ. ಕಮಲ್ ಕರ್ನಾಟಕಕ್ಕೆ ಬರಲಿ.
ಡಬ್ಕುಡಬಲ್ ತುದಾಂಡಲ್...
ದಿಗ್ಗಜರ ಲೈಫ್ ಥಿಯರಿಗಳು
ಅಂಬರೀಷ್: ಲೇಟಾಗಿ ಎದ್ರೂ ಲೇಟೆಸ್ಟ್ ಆಗಿ ಎದ್ದೇಳ್‌ಬೇಕು
ವಿಷ್ಣುವರ್ಧನ್: ಎಡಗೈಯಲ್ಲಿ 'ಕೊಟ್ಟಿದ್ದು' ಬಲಗೈಗೆ ಗೊತ್ತಾಗಬಾರದು
ಗರ್ಲ್‌ಫ್ರೆಂಡ್ ಜೊತೆ ಹೋಗಿ, ಥಿಯೇಟರ್‌ಗಳಲ್ಲಿ ಯಾವಾಗಲೂ ಕಾರ್ನರ್ ಸೀಟುಗಳನ್ನೇ ಹುಡುಕುವವರಿಗೆ ಏನೆನ್ನಬಹುದು
'ಮೂಲೆ' ತಜ್ಞ
ತುಂಬಾ ಫಾಸ್ಟ್ ಆಗಿರುವುದಕ್ಕೆ ಉದಾಹರಣೆ- ಮೆಟ್ರೋ ರೈಲು
ತುಂಬಾ ಸ್ಲೋ ಆಗಿರುವುದಕ್ಕೆ ಉದಾಹರಣೆ - ಮೆಟ್ರೋ ರೈಲು ಕಾಮಗಾರಿ
ಶಾಪಿಂಗ್ ಮಾಲ್‌ಗಳಲ್ಲಿ ಯಾವ ಈವೆಂಟ್ ನಡೆಸಿದ್ರೂ ಅದು ಫ್ಲಾಪ್ ಆಗುತ್ತೆ ಯಾಕೆ?
ಯಾಕಂದ್ರೆ ಅದು - 'ಮಾಲ್‌ಫಂಕ್ಷನ್' ಆಗಿರುತ್ತೆ.
ಸಿನಿಮಾ ಹಿಟ್ ಆದ್ರೆ 10 ನೇ ದಿನ, 15ನೇ ದಿನ ಅಂತ ಪೋಸ್ಟರ್
ಫ್ಲಾಪ್ ಆದ್ರೆ? 11ನೇ ದಿನ ಅಂತ ಪೋಸ್ಟರ್, ತಿಥಿ ಆಯ್ತು ಅಂತ.
ರೇಸ್ 2 ಸಿನಿಮಾ ಬಗ್ಗೆ ಒಂದ್ ಡೌಟು.
ರೇಸ್ 2 ಅಂದ್ರೆ, ಅಲ್ಲಿ ಸೆಕೆಂಡ್ ಬಂದವರಿಗೆ ಪ್ರೈಜ್ ಕೊಡ್ತಾರಾ?
ಹಳೇ ಗರ್ಲ್‌ಪ್ರೆಂಡ್ ಜೊತೆ ಮತ್ತೆ 'ಸೆಕೆಂಡ್ ಇನ್ನಿಂಗ್ಸ್' ಅಫೈರ್ ಶುರುವಾದರೆ ಅದು
'ಫಾಲೋ ಆನ್'!
ಹಳೇ ಗಾದೆ: ಹೊಳೆಯಲ್ಲಿ ಹುಣಸೇಹಣ್ಣು ಕಿವುಚಿದಂಗಾಯ್ತು
ಹೊಸ ಗಾದೆ: ಬೆಂಗಳೂರು ಟ್ರಾಫಿಕ್‌ನಲ್ಲಿ ಸೈಕಲ್ ಬೆಲ್ ಹೊಡೆದಂಗಾಯ್ತು!
- ಹರಿ
harikannadaprabha@gmail.com