ಸಂಪಾದಕೀಯ

ಲೋಕಾಯುಕ್ತ ಪೊಲೀಸ್ ಮಾರ್ಗಸೂಚಿ

Published On :

ಲೋಕಾಯುಕ್ತ ವ್ಯವಸ್ಥೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಬೇಕಾದಷ್ಟು ಅಧಿಕಾರವಿದ್ದರೂ, ಅದನ್ನು ಬಳಸುವ ವಿಚಾರದಲ್ಲಿ ಸೂಕ್ತವಾದ ಮಾರ್ಗಸೂಚಿಯೂ ರಚನೆಯಾಗಿಲ್ಲ. ಆ ಪೊಲೀಸರಿಗೆ ವಿಶೇಷ ಶಿಕ್ಷಣವನ್ನು ಒದಗಿಸುವ ಪ್ರಯತ್ನ ನಡೆದಿಲ್ಲ.
ಉದಾಹರಣೆಗೆ, ಯಾವುದೇ ಪ್ರಕರಣದಲ್ಲಿ, ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಮೊದಲ ಮಾಹಿತಿಯ ವರದಿಯನ್ನು ಸಲ್ಲಿಸಿ, ಕೇಸನ್ನು ನೋಂದಣಿ ಮಾಡಿಕೊಳ್ಳದೇ, ಯಾವುದೇ ರೀತಿಯ ತನಿಖೆ, ವಿಚಾರಣೆ, ದಾಳಿಯನ್ನು ನಡೆಸುವಂತಿಲ್ಲ.
ಖಾಸಗಿ ದೂರಿನ ಆಧಾರದ ಮೇಲೆ ನೇರವಾಗಿ ಶಂಕಿತ ವ್ಯಕ್ತಿಗಳ ಮನೆ ಮೇಲೆ ದಾಳಿ ನಡೆಸುವ ಪ್ರವೃತ್ತಿ ಲೋಕಾಯುಕ್ತ ಪೊಲೀಸರಲ್ಲಿರುವುದನ್ನು ಕರ್ನಾಟಕ ಹೈಕೋರ್ಟ್ ಟೀಕಿಸಿದೆ. ಯಾವುದೇ ರೀತಿಯಲ್ಲಿ ದೂರು ಬಂದರೂ, ಅದರ ಪೂರ್ವ ಭಾವಿ ತನಿಖೆ ಅಗತ್ಯ. ಮೇಲ್ನೋಟಕ್ಕೆ ದೂರಿನಲ್ಲಿ ಹುರುಳಿರುವುದನ್ನು ತನಿಖೆಯ ಮೂಲಕ ಖಚಿತ ಪಡಿಸಿಕೊಂಡ ಅನಂತರವೇ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಬಸವನ ಬಾಗೆವಾಡಿಯ ಸಬ್ ರಿಜಿಸ್ಟ್ರಾರ್‌ರ ಮನೆಯ ಮೇಲಿನ ದಾಳಿಯ ಔಚಿತ್ಯವನ್ನು ಪ್ರಶ್ನಿಸಿದ ಸಂಬಂಧದಲ್ಲಿ ಹೈಕೋರ್ಟಿನ ವಿಭಾಗೀಯ ಪೀಠ ಸೂಚನೆ ನೀಡಿರುವುದು ಸಾಮಯಿಕವಾದದ್ದು.
ಭ್ರಷ್ಟಾಚಾರ ಮನೆಮನೆಯ ಮಾತಾಗಿರುವ ಸನ್ನಿವೇಶದಲ್ಲಿ ಲೋಕಾಯುಕ್ತ ಪೊಲೀಸರು ಮನೆ ಮೇಲೆ ದಾಳಿ ನಡೆಸಿದರೆ, ಸಂಬಂಧಪಟ್ಟ ವ್ಯಕ್ತಿಯ ಮಾನ-ಮರ್ಯಾದೆಯ ಹರಾಜಾಗುವುದು ಅನಿವಾರ್ಯ. ಅಂತಹ ಪ್ರಕರಣಗಳಲ್ಲಿ ಪೊಲೀಸರು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಅವರಿಗೆ ಸೂಕ್ತ ರೀತಿಯ ಮಾರ್ಗದರ್ಶಿ ಸೂತ್ರ ಹಾಗೂ ತರಪೇತಿಯೂ ಅಗತ್ಯ. ನಾಗರಿಕರ ಹೆಸರು ಕೆಡಿಸುವ, ಗೌರವ ಪ್ರತಿಷ್ಠೆಗೆ ಧಕ್ಕೆ ತರುವ ಹಕ್ಕು ಲೋಕಾಯುಕ್ತ ಪೊಲೀಸರಿಗೆ ಇಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.