ಒಮ್ಮೆ ಬಿಟ್ಟರೆ ಮತ್ತೆಂದೂ ನಿಮ್ಮ ಹತ್ತಿರವೂ ಸುಳಿಯದು
ಇದೊಂದಿದ್ದರೆ ಉತ್ತಮ ನಟಿ, ಡಾಕ್ಟರ್, ಮಾಡೆಲ್ ಯಾವುದೂ ಆಗಲು ಸಾಧ್ಯವಿಲ್ಲ
ಇದು ಹೆಣ್ಣಿನ ಆಭರಣ. ಹಾಗಾಗಿಯೇ ಗಂಡಸರು ಇದನ್ನು ಇಟ್ಟುಕೊಳ್ಳುವುದಿಲ್ಲ
ನಂಗಾ ನಾಚ್ ಮಾಡುವವರಿಗಿಲ್ಲದ್ದು
ಮೂರೇ ಬಟ್ಟೆ ಹಾಕಿಕೊಳ್ಳುವವರು ಮಾನ ಮೂರಾಬಟ್ಟೆಯಾಗುವುದೆಂದು ಅಂಜಿದಿಡೆಂತಯ್ಯಾ?
ಬಡತನಕ್ಕೆ ನಾಚಿಕೊಳ್ಳುವವಗೆ ಸಿರಿವಂತನಾಗಲು ಅರ್ಹತೆಯಿಲ್ಲ
ಹೊಸದಾಗಿ ಗೆಜ್ಜೆ ಕಟ್ಟಿಕೊಂಡವಳು ಹೆಜ್ಜೆ ಹೆಜ್ಜೆಗೂ ಅನುಭವಿಸುವ ಲಜ್ಜೆ
ಬೀಡಾ ತಿನ್ನುವ ಯುವಕ ಎದುರಿಸುವ ವ್ರೀಡಾ
ಅಭಿಮಾನಧನರಿಗೆ ಕಾಡುವಂಥದ್ದು
ನಾಚಿಕೆಯಿಂದಾಗಿಯೇ ಅದೆಷ್ಟೋ ಕೆಲಸಗಳನ್ನು ಬಿಡಬೇಕಾಗುತ್ತದೆ. ಹಾಗಾಗಿ ಇದನ್ನೇ ಬಿಡುವುದು ಒಳ್ಳೆಯದು
ನಾಚಿಕೆ ಬಿಟ್ಟವ ಊರಿಗೇ ದೊಡ್ಡವ
ಎಲ್ಲದಕ್ಕೂ ಚೀ ಚೀ .. ಎನ್ನುವುದೇ ನಾಚಿಕೆ
ಹಳ್ಳಿ ಹೆಣ್ಣಿಗೆ ಒಡವೆ, ಪೇಟೆ ಹೆಣ್ಣಿಗೆ ತೊಡಕು
ಇದೆಲ್ಲ ಬಿಡದ ಹೊರತೂ ನೀವು ಉತ್ತಮ ರಾಜಕಾರಣಿಯಾಗಲಾರಿರಿ
-ವಿಶ್ವನಾಥ ಸುಂಕಸಾಳ