ಸಂಪಾದಕೀಯ

ಖಾಸಗಿ ವಿ.ವಿ ಬೇಡ

Published On :

ರಾಜ್ಯದಲ್ಲಿ ಈಗ ಒಟ್ಟು 18 ವಿಶ್ವ ವಿದ್ಯಾಲಯಗಳು ಇದ್ದಾವೆ. ಇವುಗಳಿಂದ ನೀಡುತ್ತಿರುವ ಸ್ನಾತಕೋತ್ತರ ಪದವಿ, ಡಿಪ್ಲಮೋ, ದೂರ ಶಿಕ್ಷಣ ಪದವಿ ಪಡೆದ ವಿದ್ಯಾರ್ಥಿಗಳಿಗೆ ಇಂದು ಉದ್ಯೋಗ ದೊರೆಯುವುದು ಕಷ್ಟವಾಗಿದೆ. ಹೀಗಿದ್ದೂ ಮತ್ತೆ ಇನ್ನೂ ಖಾಸಗಿ ವಿ.ವಿ ಸ್ಥಾಪನೆಗೆ ರಾಜ್ಯ ಸರ್ಕಾರ ತೊಡಗಿರುವುದು ಯಾವ ಪುರುಷಾರ್ಥಕ್ಕಾಗಿ? ಈಗ ಪದವಿ, ಸ್ನಾತ್ತಕೋತ್ತರ ಪದವಿ ಪಡೆದು ನಿರುದ್ಯೋಗಿಗಳಾಗಿರುವವರಿಗೆ ಮೊದಲು ಉದ್ಯೋಗ ಒದಗಿಸುವ ಪ್ರಯತ್ನ ನಡೆಯಲಿ. ಆ ನಂತರ ಇಂತಹ ಪ್ರಯತ್ನಕ್ಕೆ ಕೈಹಾಕುವುದು ಒಳಿತು. ಇನೂ ಒಂದು ವೇಳೆ ಖಾಸಗಿ ವಿ.ವಿ ಸ್ಥಾಪನೆ ಮಾಡಿದರೇ, ಸರ್ಕಾರಿ ವಿ.ವಿಗಳಿಗೆ ವಿದ್ಯಾರ್ಥಿಗಳು ಸೇರುವುದೇ ಕಡಿಮೆ ಆಗುವಂತ ಪರಿಸ್ಥಿತಿ ನಿರ್ಮಾಣಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ. ಖಾಸಗಿ ವಿವಿಗಳ ಸ್ಥಾಪನೆಯಿಂದ ವಿವಿಗಳ ಗುಣಮಟ್ಟ ಹೆಚ್ಚಬಹುದು. ಆದರೆ ಮುಂದಿನ ದಿನಗಳಲ್ಲಿ ಶಿಕ್ಷಣ ವ್ಯಾಪಾರೀಕರಣದ ಹಂತವನ್ನ ತಲುಪಿ ಬಿಡಬಹುದು. ಹಾಗೆಯೇ ಸರ್ಕಾರಿ ವಿವಿನಲ್ಲಿ ಓದಿದ ವಿದ್ಯಾರ್ಥಿಗಳು ಹಾಗೂ ಖಾಸಗಿ ವಿವಿಗಳಲ್ಲಿ ಓದಿದ ವಿದ್ಯಾರ್ಥಿಗಳೆಂಬ ಬೇದ ಭಾವವು ಹುಟ್ಟಿಕೊಳ್ಳಬಹುದು. ಜೊತೆಗೆ ವಿದ್ಯಾರ್ಥಿಗಳ ಅಂಕಗಳ ಪ್ರಮಾಣದಲ್ಲೂ ಏರಿಳಿತ ಕಂಡು, ಮತ್ತಷ್ಟು ನಿರುದ್ಯೋಗ ಸೃಷ್ಟಿಗೆ ಕಾರಣವಾಗಿಬಿಡುತ್ತದೆ. ಈ ಎಲ್ಲವನ್ನ ಅರ್ಥ ್ಥಮಾಡಿಕೊಂಡರೆ ಖಾಸಗಿ ವಿವಿಗಳು ಬೇಡವೇ ಬೇಡ. ಈಗಿರುವ ಸರ್ಕಾರಿ ವಿವಿಗಳೇ ಸಾಕು.
- ವಸಂತ ಬಿ ಈಶ್ವರಗೆರೆ, ಹಿರಿಯೂರು  

ಮೊಟ್ಟೆ ಬಿಲ್ ಪಾವತಿಸಿ
ರಾಜ್ಯದಲ್ಲಿ ಅಪೌಷ್ಠಿಕತೆಯಿಂದ ಮಕ್ಕಳಿಗೆ ಮೊಟ್ಟೆ ವಿತರಿಸಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಮೊಟ್ಟೆಯನ್ನು ಯಾರು ನೀಡಬೇಕು? ಎಲ್ಲಿ ಖರೀದಿಸಬೇಕು? ಎನ್ನುವುದು ಯಕ್ಷಪ್ರಶ್ನೆ. ಇದರ ಬಿಸಿ ಅನುಭವಿಸುತ್ತಿರುವವರು ಅಂಗನವಾಡಿ ಶಿಕ್ಷಕಿಯರು ತಮ್ಮ ಕೈಯಿಂದಲೇ ಹಣ ಕೊಟ್ಟು ಮೊಟ್ಟೆ ಖರೀದಿಸುತ್ತಾರೆ. ಆದರೆ ಮೇಲಧಿಕಾರಿಗಳು ಬಿಲ್ ನೀಡುವುದಿಲ್ಲ. ಇದು ಸುಮಾರು 4-5 ತಿಂಗಳು ನೀಡಿರುವುದಿಲ್ಲ. ಮೇಲಧಿಕಾರಿಗಳನ್ನು ವಿಚಾರಿಸಿದರೆ ಖಜಾಂಚಿ ಅಧಿಕಾರಿಗಳನ್ನು ಕೇಳಿ ಅಂತಾರೆ. ಅಲ್ಲಿ ಕೇಳಿದರೆ 500, 200ಕ್ಕೆಲ್ಲಾ ಬಿಲ್ ಕೊಡಲು ಆಗುವುದಿಲ್ಲ. 30,000 ಕ್ಕಿಂತ ಮೇಲ್ಪಟ್ಟು ಬಿಲ್ ಇದ್ದರೆ ಹಣ ಕೊಡುತ್ತೇವೆ ಅಂತಾರೆ. ಇದು ಯಾವ ನ್ಯಾಯ? ಅಂಗನವಾಡಿ ಶಿಕ್ಷಕಿಯರು ಹಣವಿಲ್ಲದೆ ಪರದಾಡುತ್ತಿದ್ದಾರೆ. ಸರ್ಕಾರ ಇದರ ಕಡೆ ಗಮನ ಹರಿಸುವುದು, ಬಾಕಿ ಬಿಲ್ ಅನ್ನು ಅಂಗನವಾಡಿ ಶಿಕ್ಷಕಿಯರಿಗೆ ಪಾವತಿಸಬೇಕಾಗಿ ವಿನಂತಿ.
- ರಂಜಿತ ರಣಸಿಂಗ್, ಅಥಣಿ

ಈ ನಿರ್ಣಯ ಸರಿಯೇ?
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅನೇಕ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಅವುಗಳಲ್ಲಿ ಕನ್ನಡಕ್ಕೆ ಡಬ್ಬಿಂಗ್ ಬರುವುದನ್ನು ತಡೆಯಬೇಕು ಎನ್ನುವುದೂ ಸಹ ಒಂದು. ಕನ್ನಡದ ಬೆಳವಣಿಗೆಗೆ ಮಾರಕವಾಗಿರುವ ಡಬ್ಬಿಂಗ್ ನಿಷೇಧದಿಂದ ಕನ್ನಡಿಗರು ಕನ್ನಡದಿಂದ ದೂರವಾಗುತ್ತಿದ್ದಾರೆ. ಕನ್ನಡಿಗರು ಹಲವಾರು ಉತ್ತಮ ಮನೋರಂಜನೆಗಾಗಿ, ಇನ್ಫೋಟೈನ್ಮೆಂಟ್ ಕಾರ್ಯಕ್ರಮಗಳನ್ನು ನೋಡಲು ಇತರ ಭಾರತೀಯ ಭಾಷೆಗಳಾದ ಇಂಗ್ಲಿಷ್, ತಮಿಳು, ತೆಲುಗು ಹಿಂದಿ ಭಾಷೆಗಳಿಗೆ ಮೊರೆ ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ಮಕ್ಕಳಿಗೆ ಇಷ್ಟವಾಗುವ ಪೋಗೋ, ಕಾರ್ಟೂನ್ ನೆಟ್ವರ್ಕ್ ಮೊದಲಾದ ಚಾನೆಲ್ಗಳು ಸಹ ಕನ್ನಡದಲ್ಲಿ ಇಲ್ಲ. ಅಸಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವಿರೋಧಿ ಡಬ್ಬಿಂಗ್ ನಿಷೇಧದಿಂದ  ಕನ್ನಡಿಗರಿಗೆ ಆದಷ್ಟು ಬೇಗ ಮುಕ್ತಿ  ಸಿಗಬೇಕಾಗಿದೆ.
-  ರವಿ ಸಾವ್ಕಾರ್, ಬೆಂಗಳೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.