ಇವರ ನಿಜ ಬಣ್ಣವೇನು?
ಫೆಬ್ರವರಿ 12ರ ಕನ್ನಡಪ್ರಭ ಪತ್ರಿಕೆಯ 9ನೇ ಪುಟದಲ್ಲಿ 'ಅರುಂಧತಿ ಫಿಕ್ಷನ್- ಪಕ್ಕ ಒಂದಿಷ್ಟು ಫ್ಯಾಕ್ಟ್ಸ್ಗಳು' ಮತ್ತು ಅದೇ ಪುಟದಲ್ಲಿದ್ದ ಡ್ಯಾನಿ ಪಿರೇರಾ ಅವರ ಲೇಖನ 'ಅಫ್ಜಲ್ ಸತ್ತರೂ, ವಿದ್ರೋಹದ ಮನಸ್ಥಿತಿ ಜೀವಂತ' ಎಂಬ ಲೇಖನ, ಭಾರತದಲ್ಲೇ ಹುಟ್ಟಿ, ಹಿಂದೂ ದೇಶದ ನೆಲ, ಜಲ, ಅನ್ನ, ಆಸರೆಗಳನ್ನು ಅನುಭವಿಸುತ್ತಾ ಹಿಂದೂಗಳನ್ನೇ ವಿರೋಧಿಸುವಂತಹ ವಿಚಾ(ಕಾ)ರ ವಾದಿ, ಬುದ್ಧಿಜೀವಿ ಎಂಬುವವರ ವಾದದ ನಿಜ ಬಣ್ಣವನ್ನು ಎಳೆ ಎಳೆಯಾಗಿ ವಿವರಿಸುತ್ತವೆ. ಈ ಕಮ್ಯುನಿಸ್ಟ್ ಕಲರ್ನ ವಿಚಾರವಾದಿಗಳೂ ಮತ್ತು ಬುದ್ಧಿಜೀವಿಗಳೂ ಎಂಬ ತಳಿಗಳು ಒಂದು ಬಗೆಯ ಸತ್ವರಹಿತರು.
ನಾವೆಲ್ಲ ಬಾಲ್ಯದಲ್ಲಿ ಚರಿತ್ರೆಯ ಪಠ್ಯದಲ್ಲಿ ಓದಿದ್ದಂತೆ 'ಟಿಪ್ಪು ಸುಲ್ತಾನನ ನಂಬಿಕಸ್ಥ ದಳಪತಿಯಾಗಿದ್ದ 'ಮೀರ್ ಸಾದಕ್'ನ ಪ್ರತಿರೂಪದಂತೆ ಅಥವಾ ಅವನ ಪ್ರೇತಾತ್ಮ ಸಂತಾನಗಳು ತಾವೇ ಎಂಬ ಚಿಂತನೆಯ ಪ್ರತಿಪಾದಕರಾಗಿರುತ್ತಾರೆ. ಈ ವಕ್ರಬುದ್ಧಿ ಜೀವಿಗಳ ರದ್ದಿ ಚಿಂತನೆಗಳು ಏಕೆ ಹೀಗೆ ಪ್ರಕಟವಾಗುತ್ತವೊ ತಿಳಿಯದಾಗಿದೆ. ಬಹುಶಃ ಇವರ ಈ ಮನೋಭಾವದ ಅಂತರಂಗದಲ್ಲಿ ಏನೋ ಚಪಲವಡಗಿದೆ. ಮುಂದೆ ಎಂದಾದರೂ ತಾವು ತಮ್ಮ ಕುಟುಂಬ ಪರಿವಾರ ಸಹಿತ ಸುಂದರ ಕಾಶ್ಮೀರ ಪ್ರವಾಸ ಕೈಗೊಂಡಾಗ, ಪ್ರವಾಸದ ವೇಳೆ ಯಾವುದೇ ಸೈತಾನರ ಹಿಂಸಾ ವಿನೋದಕ್ಕೆ ಬಲಿಯಾಗಬಾರದೆಂಬ ಪೂರ್ವಯೋಜಿತ ಮುಂಜಾಗ್ರತೆಯೆ? ಅಥವಾ ಯಾರನ್ನು ಬೇಕಾದರೂ ಗುಂಡಿಟ್ಟು ಸಾಯಿಸಲಿ, ದೇಶವನ್ನೇ ಬಾಂಬಿಟ್ಟು ಉಡಾಯಿಸಲಿ, ಆದರೆ ತಮ್ಮ ಕುಟುಂಬವನ್ನು ಏನೂ ಮಾಡದಿರಲಿ ಎಂಬ ರಕ್ಷಣಾತ್ಮಕ ಉಪಾಯವೆ? ಇದಕ್ಕಾಗಿ ಕಮ್ಯುನಿಸ್ಟ್ ಕಲರ್ನ ಮೇಕಪ್ ಸಂಸ್ಕಾರವೇ? ಅಥವಾ ಕಾರ್ಲ್ಮಾರ್ಕ್ಸ್ನು 'ಹಿಂದೂಗಳನ್ನು ದ್ವೇಷಿಸಿ' ಎಂದು ಎಲ್ಲಾದರೂ ಹೇಳಿದ್ದಾನೆಯೆ? ಹಾಗೆ ಇವರಿಗೆ ಸೂಚಿಸಿದ್ದಾನೆಯೆ?
ಸಮಯ ಸಿಕ್ಕಾಗಲೆಲ್ಲಾ ಪ್ರವಾಹದ ವಿರುದ್ಧ ಈಜುವ ಈ ನಾಟಕವನ್ನೇಕೆ ಇವರು ಹವ್ಯಾಸ ಮಾಡಿಕೊಂಡಿದ್ದಾರೆ? ಕ್ಯಾನ್ಸರ್ ಎಂದರೆ ಏಡಿ ಎಂಬ ಜಂತು, ಅದಕ್ಕೆ ಆರು ಕಾಲುಗಳಿದ್ದರೂ ಬೇರೆ ಎಲ್ಲಾ ಜೀವಿಗಳಂತೆ ಏಡಿ ಮುಂದಕ್ಕೆ ಹೆಜ್ಜೆ ಇಡಲಾರದು. ಬದಲು ಅಡ್ಡಗಾಲೇ ತನ್ನ ಅಭ್ಯಾಸ, ಹಾಗೇ ಓಡುತ್ತದೆ. ಬಹುಷಃ ಈ ವಿಕಾರ ವಾದಿಗಳು, ಬುದ್ಧಿಜೀವಿಗಳೂ ಭಾರತದ ಕ್ಯಾನ್ಸರ್ಗಳಿರಬಹುದೇ? ತಿಳಿದವರಿದ್ದರೆ ಹೇಳಿ.
- ವಿ. ವಿಜಯನಾಥ್, ಬೆಂಗಳೂರು
ಇವರ ಪ್ರತಿಭಟನೆ ಏಕಿಲ್ಲ?
ಬಡವರ ಮತ್ತು ರೈತರ ಪಕ್ಷ ಎಂದು ಹೇಳಿಕೊಳ್ಳುವವವರು ಶ್ರೀರಾಮುಲು. ಅವರ ಸ್ನೇಹಿತರು ಕರುಣಾಕರ ರೆಡ್ಡಿಯವರು. ರೆಡ್ಡಿಯವರು ಏಕಾಏಕಿ ಹಾಲಿನ ಬೆಲೆಯನ್ನು ಲೀಟರಿಗೆ ನಾಲ್ಕು ರುಪಾಯಿ ಜಾಸ್ತಿ ಮಾಡಿದಾಗ ಬಡವರ ನಾಯಕ ಎಂದು ಹೇಳಿಕೊಳ್ಳುವ ಶ್ರೀರಾಮುಲು ಅವರು ಏನು ಮಾಡುತ್ತಿದ್ದರು? ಸರ್ಕಾರವು ನಂತರ ಬೆಲೆ 1 ರುಪಾಯಿ ಕಡಿಮೆ ಮಾಡಿದೆ. ಆದರೆ ಇದರಿಂದ ಚಹ, ಕಾಫಿ, ಬ್ರೆಡ್ ಮತ್ತು ಇತರ ಹಾಲು ಉತ್ಪನ್ನಗಳ ಬೆಲೆಯೂ ಕೂಡ ಏರಿದೆ. ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಪಾಲಿಗೆ ತಣ್ಣೀರೆರಚಿದಂತಾಗಿದೆ. ಇದು ಬಡವರು ಮತ್ತು ರೈತರಿಗೆ ಅನುಕೂಲವೇ?
ಪಶು ಆಹಾರವನ್ನು ಅತೀ ಹೆಚ್ಚು ಬೆಲೆಗೆ ಆಂಧ್ರದಿಂದ ಆಮದು ಮಾಡಿದವರಿಗೆ ಕನ್ನಡನಾಡಿನ ಸಂಪತ್ತನ್ನು ಹೇಗೆ ವರ್ಗಾವಣೆ ಮಾಡುವುದು ಎಂಬುದು ಗೊತ್ತಿದೆ!
- ಬಿ.ವಿ. ರಾವ್, ಬೆಂಗಳೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

