ಭಪ್ಪರೆ ಭಲರೆ ಧೋನಿ
ಭಾರತ ಕ್ರಿಕೆಟ್ ತಂಡದ ಈಗಿನ ಕ್ಯಾಪ್ಟನ್ ಮಹೇಂದ್ರ ಧೋನಿ ದಶಕಕ್ಕೂ ಹಿಂದೆ ಟೆಸ್ಟ್ ತಂಡವನ್ನು ಸೇರಿದಾಗ, ಅವರ ಆಕರ್ಷಣೆ ಇದ್ದಿದ್ದು ಅವರ ತಲೆ ಕೂದಲಿನ ವಿಚಿತ್ರ ಸ್ವರೂಪ ಹಾಗೂ ಮನಸೋ ಇಚ್ಛೆ ಬೀಸುವ ಬ್ಯಾಟಿನಿಂದ.
ಹಲವಾರು ಬಾರಿ ಅವರು ಗೇಲಿಗೆ ತುತ್ತಾಗಿದ್ದಾರೆ. ಟೆಸ್ಟ್ ತಂಡದ ನಾಯಕರಾಗಿ ಅವರು ಆಯ್ಕೆಯಾಗಿದ್ದೂ ಆ ಕಾಲದಲ್ಲಿ ಬೇರೆ ಯಾರೂ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿಯೇ ಎಂದು ಅನೇಕರು ಟೀಕಿಸಿದ್ದೂ ಉಂಟು.
ಕಳೆದ ವರ್ಷ ಭಾರತೀಯ ಕ್ರಿಕೆಟ್ ತಂಡದ ಕಳಪೆ ಸಾಧನೆಯ ಮಟ್ಟದ ಹಿನ್ನಲೆಯಲ್ಲಿ, ಸ್ವತಃ ಕ್ಯಾಪ್ಟನ್ ಧೋನಿಯ ವೈಯಕ್ತಿಕ ಸಾಧನೆ ಕಳಪೆಯಾಗಿರದೇ ಹೋದರೂ ಅವರ ಟೀಕಾಕಾರರ ಕಾಟ ಮಾಧ್ಯಮದಲ್ಲಿ ಸಾಕಷ್ಟಿತ್ತು.
ಅಂತಹವರೆಲ್ಲರಿಗೂ ಉತ್ತರ ನೀಡುವಂತೆ, ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಆಸ್ಟ್ರೇಲಿಯಾ ವಿರುದ್ಧದ ಪ್ರಥಮ ಟೆಸ್ಟ್ನಲ್ಲಿ ಬಾರಿಸಿದ ಭರ್ಜರಿ ದ್ವಿಶತಕ ಟೀಕಾಕಾರರ ಬಾಯಿ ಮುಚ್ಚಿಸುವ ರೀತಿಯ ಪ್ರದರ್ಶನ. ಗಳಿಸಿದ ರನ್ಗಳ ಸಂಖ್ಯೆಯ ದೃಷ್ಟಿಯಿಂದ ಅಷ್ಟೇ ಅಲ್ಲ, ಆ ರನ್ಗಳನ್ನು ಗಳಿಸಿದ ರೀತಿಯಿಂದಲೂ, ಮಹೇಂದ್ರ ಧೋನಿ ಅಭಿನಂದನೆಗೆ ಅರ್ಹರಾಗಿದ್ದಾರೆ. ಭಪ್ಪರೆ ಭ್ಲರೆ ಧೋನಿ ಎನ್ನುವ ಉದ್ಘೋಷ ಈಗಲೂ ಪ್ರಕಟವಾಗದೇ ಹೋದರೆ ಅದು ಅಸಹನೀಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

