ಪ್ರಾಣಿಗಳಿಗೂ ಫೇಸ್ಬುಕ್ ಅಕೌಂಟ್ ಇದ್ದರೆ, ಅವುಗಳ ಸ್ಟೇಟಸ್ ಅಪ್ಡೇಟ್ ಹೇಗಿರುತ್ತಿತ್ತು?
ಜಿರಳೆ: 'ಸ್ವಲ್ಪದ್ರಲ್ಲೇ ನನ್ನ ಮನೆ ಓನರ್ ಕಾಲಡಿ ಸಿಲುಕಿ ಅಪ್ಪಚ್ಚಿ ಆಗೋವ್ನಿದ್ದೆ. ನನ್ನ ಜೀವನ ತುಂಬ ರಿಸ್ಕಿ'
ಬೆಕ್ಕು: 'ನನ್ನ ಏಳನೇ ಮಗು ತನ್ನ ಅಪ್ಪ ಯಾರು ಅಂತ ಕೇಳ್ತಾ ಇದೆ. ಏನೂಂತ ಉತ್ತರ ಕೊಡ್ಲಿ? ನನಗೇ ಸರಿಯಾಗಿ ನೆನಪಿಲ್ಲ'
ಕೋಳಿ: 'ನಾಳೆ ನಾನು ನನ್ನ ಸ್ಟೇಟಸ್ ಅಪ್ಡೇಟ್ ಮಾಡ್ಲಿಲ್ಲ ಅಂದ್ರೆ, ಕೆಎಲ್ಫ್ಸಿಯಲ್ಲಿ ಕಬಾಬ್ ಆಗಿದೀನಿ ಅಂತ ಅರ್ಥ. ಲವ್ ಯು ಆಲ್'
ಕುರಿ: 'ಗೆಳೆಯರೆ ದಯವಿಟ್ಟು ಮನೆಯಿಂದ ಹೊರಗೆ ಹೋಗಬೇಡಿ. ಈದ್ ಹಬ್ಬ ಬರ್ತಾ ಇದೆ'