ಕಂಜೂಸ್ ಕೋಲ್ಯ ಕನ್ನಡಪ್ರಭ ಆಫೀಸ್ಗೆ ಹೋದ.
ಕಂ. ಕೋಲ್ಯ: ನನ್ನ ಚಿಕ್ಕಪ್ಪ ಸತ್ತು ಹೋಗಿದಾರೆ. ಪತ್ರಿಕೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಬೇಕಿತ್ತು, ಎಷ್ಟಾಗುತ್ತೆ?
ಕನ್ನಡಪ್ರಭ: ಒಂದು ಅಕ್ಷರಕ್ಕೆ .... ರುಪಾಯಿ!
ಕಂ. ಕೋಲ್ಯ: ಅಯ್ಯೋ ತುಂಬಾ ಜಾಸ್ತಿ ಆಯ್ತಲ್ಲ ಸರ್. ಹಾಗಿದ್ರೆ ಬರ್ಕೊಳ್ಳಿ: 'ಚಿಕ್ಕಪ್ಪ ಇನ್ನಿಲ್ಲ'
ಕನ್ನಡಪ್ರಭ: ಸರ್ ಕಡಿಮೆ ಅಂದ್ರೆ 5 ಪದಗಳಾದ್ರೂ ಇರ್ಬೇಕು.
ಕಂ. ಕೋಲ್ಯ: ಹಾಗಿದ್ರೆ ಬರೀರಿ- 'ಚಿಕ್ಕಪ್ಪ ಇನ್ನಿಲ್ಲ, ಮನೆ ಬಾಡಿಗೆಗೆ ಇದೆ!'