ರೋಮ
ವಾನರನಿಂದ ನರನಿಗೆ ಬಂದ ಬಳುವಳಿ
ತಲೆ ಮೇಲಿದ್ದರೆ ಕೂದಲು, ಮೈ ಮೇಲಿದ್ದರೆ ರೋಮ
ರೋಮನ್ನರಿಗೂ ಇರುವ ರೋಗ
ರೊಮ್ಯಾನ್ಸ್‌ನಲ್ಲಿ ರೋಮಾಂಚನಕ್ಕೊಳಗಾಗೋದು ಇದೇ
ರಾಮ ಭಕ್ತರ ದೇಹ ಗುರುತು
ರೂಮರ್ ಕೇಳಿದಾಗ ಎದ್ದು ನಿಲ್ಲುವ ಕೂದಲು
ರೋಮವೇ ಇಲ್ಲದವನಿಗೂ ರೋಮಾಂಚನವಾಗುತ್ತ...?
ಆರಾಮವಿರುವವಗೆ ರೋಮವೂ ಹೆಚ್ಚು
ಪರಮ ಆಲಸಿಗಳಿಗೆ ರೋಮವೂ ಭಾರವೇ..
ವಿರಾಮ ಕೊಟ್ಟರೆ ಸೊಂಪಾಗಿ ಬೆಳೆವ ಕಳೆ
ರೋಮ ತುಂಬಿ ತುಳುಕುವವನನ್ನು ರೋಮಾಚಾರಿ ಎನ್ನಬಹುದು
-ವಿಶ್ವನಾಥ ಸುಂಕಸಾಳ