ಥಿಯೇಟರ್ ಇದ್ದರೆ ಸಿನಿಮಾ, ಸಿನಿಮಾ ಇದ್ದರೆ ಥಿಯೇಟರ್
ಸಿನಿಮಾದಲ್ಲಿ ಹೀರೋ, ವಾಸ್ತವದಲ್ಲಿ ಜೀರೋ
ವಿಚಿತ್ರ ಮತ್ತು ಸಚಿತ್ರ. ಈ ಚಲನ ಚಿತ್ರ
ಕಠಾರಿವೀರರೆಲ್ಲ ತಮ್ಮ ಸುರಸುಂದರಾಂಗಿಯ ಜೊತೆ ನೋಡಿ ಬರಬಹುದಾದದ್ದು
ಇದು ಬರೀ ರೀಲು
ಅತ್ಯಂತ ಚಿಕ್ಕ ಧಾರಾವಾಹಿ
ಎಲ್ಲೂ ಸಲ್ಲದವ್ರೂ ಇಲ್ಲಿ ಗೆಲ್ಲುವರು, ಗೆದ್ದವರು ಎಲ್ಲ ಕಾಲಕ್ಕೂ ಸಲ್ಲುವರೆಂದು ಹೇಳಲುಬಾರದು
ಸಿನಿಮಾದಲ್ಲಿ ಏನು ಬೇಕಾದರೂ ಆಗಬಹುದು. ಮದುವೆಯಾದವರು ಸುಖವಾಗಿಯೂ ಇರಬಹುದು
ನಾಡಿನ ತುಂಬೆಲ್ಲ ಬರಗಾಲವಿದ್ದರೂ ಇಲ್ಲಿ ಮಾತ್ರ ಮಳೆ ಬೇಕೆಂದಾಗ ಬಂದು ನಟಿಮಣಿಗಳನ್ನು ಒದ್ದೆ ಮಾಡುತ್ತೆ
ಉತ್ತಮ ಅಭಿರುಚಿಯ ಸಾಹಿತ್ಯ, ಕಥೆ, ಸಂಗೀತ ಇವೆಲ್ಲವೂ ಇದ್ದರೆ ಅದು ಸಿನಿಮಾ ಎಂದು ಹಳೆಯ ಕಾಲದಲ್ಲಿ ನಂಬಲಾಗುತ್ತಿತ್ತು
ರೀಮೇಕೋ ಸ್ವಮೇಕೊ ರೀಲಿಸ್ ಆಗುವುದೇ ಮುಖ್ಯ
ಬಾಲಿವುಡ್, ಕಾಲಿವುಡ್, ಟಾಲಿವುಡ್, ಸ್ಯಾಂಡಲ್‌ವುಡು ಮೊದಲಾದ ಉಡ್‌ಗಳ ಉಡ್ಡಯನ ಇದರಿಂದಲೇ
ಗೆದ್ದರೆ ಸಿಡಿಮದ್ದು ತೋಪು, ಸೋತರೆ ಬರೀ ತೋಪು
-ವಿಶ್ವನಾಥ ಸುಂಕಸಾಳ
vishwasunkasal@yahoo.com