ಶಿಕ್ಷಕ

Updated on: 

ಜೋಜೋ ಹಾಡದೇ ಎಲ್ಲರನ್ನೂ ಒಟ್ಟಿಗೇ ಮಲಗಿಸುವ ಸಾಮರ್ಥ್ಯದವ
    ಇವನು ಹೋಂವರ್ಕ್ ಕೊಟ್ಟರೆ ಮಕ್ಕಳ ಪಾಲಕರಿಗೆಲ್ಲ ಅದೇ ಕೆಲಸ
    ಒಲಿದರೆ ಗುರು..ಮುನಿದರೆ ಗುರ್ರ್...
    ಶಿಕ್ಷಣ ಇಲಾಖೆಯ ಎಲ್ಲ ಪ್ರಯೋಗಗಳ ಬಲಿಪಶು
    ಹಳ್ಳಿ ಶಿಕ್ಷಕನು ಹಾಡು ಬರೆದರೆ ಅದು ರಗಳೆ ಅಥವಾ ಕಂದಪದ್ಯವೇ ಆಗಿರುತ್ತದೆ
    ಕೆಲ ಹೊತ್ತು ಎಲ್ಲ ತಾಯಂದಿರಿಗೆ ಮಕ್ಕಳ ಕಾಟದಿಂದ ಮುಕ್ತಿ ದೊರಕಿಸುವವ
    ಗಣಿತದ ಶಿಕ್ಷಕ ಎಲ್ಲ ಮಕಳ ಶತ್ರುತ್ವವನ್ನು ಕಟ್ಟಿಕೊಳ್ಳುತ್ತಾನೆ
    ಸ್ವಲ್ಪ ವ್ಯತ್ಯಾಸವದರೂ 'ಚೀಟರ್‌' ಎಂದು ಕರೆಸಿಕೊಳ್ಳುವ ಪ್ರಸಂಗ ಈತನದು
    ಈ ವೃತ್ತಿಯಲ್ಲಿರುವವರೆಲ್ಲರೂ ಸಾಕಪ್ಪಾ ಈ ಕೆಲಸ ಎನ್ನುವವರೇ..
    ಹೆಚ್ಚಿನ ಮಹಾತ್ಮರೆಲ್ಲ ಮೊದ ಮೊದಲು ಈ ಕೆಲಸವನ್ನೇ ಮಾಡಿದವರು..ಇದನ್ನು ಬಿಟ್ಟ ಮೇಲೆ ಮಹಾತ್ಮರಾದರು
    ವಿದ್ಯೆಯೆಂಬ ಗಗನಕುಸುಮವನ್ನು ಮುಡಿಗೇರಿಸಲು ಬಂದ ಯಕ್ಷ
    ನಾವು ಮಾಡಿಕೊಟ್ಟ ಕೋಲಿನಲ್ಲಿ ನಮಗೇ ಬಾರಿಸುವವ
    ವಿದ್ಯಾರ್ಥಿಗಳ ಚೆಡ್ಡಿ ಒದ್ದೆಯಾಗಲು ಈತನೇ ಕಾರಣ
    ಬಿಸಿ ಬಿಸಿ ಅಡಿಗೆ ಮಾಡಿ ಹಾಕುವವ

-ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com