ಮರೆತು ಹೋದ ಪುಢಾರಿಗಳ 'ಮರಳಿ ಕ್ಷೇತ್ರಕ್ಕೆ' ಅಭಿಯಾನ
ಹಲವರ ಚಿತಾವಣೆ, ಉಳಿದವರ ಬವಣೆ
ದುಡ್ಡು ಕೊಟ್ಟು 'ದಾನ' ಪಡೆವವರ ಪರ್ವ
ಇದು ವಯಸ್ಕರಿಗೆ ಮಾತ್ರ...!
ಮುಂದಿನ 5 ವರ್ಷಗಳ ಕಾಲ ನಾವು ಯಾವ ಪ್ರಭುಗಳ ಸೇವಕರಾಗಬೇಕೆಂಬುದನ್ನು ನಾವೇ ನಿರ್ಧರಿಸುವ ಅವಕಾಶ
ಪ್ರಜೆಗಳೇ ಪ್ರಭುಗಳು, ಚುನಾವಣೆ ಘೋಷಣೆಯಾಗಿ ಮುಗಿಯುವವರೆಗೆ..
ಕೋಟಿ ಇದ್ದವನು ಚುನಾವಣೆಗೆ ನಿಂತು ಕೋಟಿ ಕೋಟಿ ಸುರಿಯುವ 'ಸುರಿಹೊಂಡ'
ಒಮ್ಮೆ ಗೆದ್ದರೆ ಸಾಕು, ಹೊಟ್ಟೆ ತುಂಬಾ ಮೇಯಬಹುದು. ಮೈದಾನವೇ ನಿಮ್ಮದು
ಲಕ್ಷ್ಮಿಯನ್ನು ಮೂಟೆಗಟ್ಟಲೆ ತುಂಬಿ ಮನೆ ಮನೆಗೆ ಹಂಚುವ 'ವರಮಹಾಲಕ್ಷ್ಮಿ ಹಬ್ಬ'
ಜನಸೇವೆಗೆ ಮೊದಲು (ಟಿಕೆಟ್ ಪಡೆಯಲು) ಪಕ್ಷದ ಮುಖಂಡರ ಸೇವೆ ಮಾಡಬೇಕಾದ ಸಮಯ
ಚುನಾವಣೆ ಮೇಲೆ ಜನ ವಿಶ್ವಾಸ ಕಳೆದುಕೊಂಡಿರಬಹುದು. ಆದರೆ ಪಕ್ಷಗಳು ಹಂಚುವ ಹಣ ಹೆಂಡದ ಮೇಲಲ್ಲ
ನೀತಿಗೆಟ್ಟವರನ್ನು ನೀತಿಸಂಹಿತೆಯ ಮೂಲಕ ಕಟ್ಟಿ ಹಾಕುವ ಅವಧಿ
ಪಕ್ಷದ ನಿರುದ್ಯೋಗಿ ಕಾರ್ಯಕರ್ತರಿಗೊಂದು ತಾತ್ಕಾಲಿಕ 'ಉದ್ಯೋಗ ಖಾತ್ರಿ' ಯೋಜನೆ
ಅಕ್ರಮ ತಡೆಯಲು ಚುನಾವಣಾಧಿಕಾರಿಯ ಪರಾಕ್ರಮ ಪ್ರದರ್ಶನಗೊಳ್ಳೋದು ಈಗಲೇ
ತಮಗೇ ವೋಟು ನೀಡಿ ಎಂದು ಕಾಡುವವರ ಕಾಟವನ್ನು ಮತ್ತೈದು ವರ್ಷಗಳ ಕಾಲ ಮುಂದೂಡುವ ಪ್ರಕ್ರಿಯೆ
-ವಿಶ್ವನಾಥ ಸುಂಕಸಾಳ
vishwasunkasal@yahoo.com