ನೋಟು ಇರುವವ ಓಟು ಗಳಿಸಬಲ್ಲ ಮಾಧ್ಯಮ
ಇದು ಬಂತೆಂದರೆ ಕೆಲವರಿಗೆ ಹೊಸ ಸೀರೆ ಬಟ್ಟೆಗಳನ್ನೆಲ್ಲ ಕೊಳ್ಳಬೇಕಾದದ್ದೇ ಇಲ್ಲ
ಎಲ್ಲ ಪಕ್ಷಗಳ 'ಪ್ರಣಾಳಿಕೆ ಶಿಶು' ಜನಿಸುವ ಸಮಯ
ಭರವಸೆಯ ವರಸೆಜಾರಿಯಾಗುವ ಕಾಲ
ಪಕ್ಷದ ಕಚೇರಿ ಟಿಕೆಟ್ ಕೌಂಟರ್ ಆಗಿ ಪರಿವರ್ತನೆಯಾಗುವ ಅವಧಿ
ಮೊದಲು ಟಿಕೆಟ್ಗಾಗಿ ಗುದ್ದಾಟ, ನಂತರ ಜಯಕ್ಕಾಗಿ ಕಾದಾಟ, ಗೆದ್ದವರು ಮಂತ್ರಿಗಿರಿಗಾಗಿ ಹೊಡೆದಾಟ
ಆಚಾರ ವಿಚಾರಗಳಿಗಿಂತ ಇಲ್ಲಿ ಪ್ರಚಾರವೇ ಮುಖ್ಯ
ಚುನಾವಣೆಯಲ್ಲಿ ಬಂಡವಾಳ ಹೂಡಿದ ಭಂಡರಿಗೆ ಮತ್ತೈದು ವರ್ಷ ಬಂಡವಾಳ ಹೆಚ್ಚಸಿಕೊಳ್ಳುವುದೇ ಉದ್ಯೋಗ
ಪ್ರಜ್ಞಾವಂತರಿಗೆ ಈ ದಿನ ರಜೆಯ ಮಜಾ
ಸತ್ತಂತಿಹರನೆಲ್ಲ ಬಡಿದೆಬ್ಬಿಸುವ ಡಿಂಡಿಮ
ಪಕ್ಷಾಂತರವೆಂಬ ವ್ಯಭಿಚಾರ ಪರ್ವ
ಚಳಿಗಾಲದಲ್ಲೇ ನಡೆದರೂ ಕಾವುಮಾತ್ರ ಜೋರು
ನೀವೆಷ್ಟೇ ಶುದ್ಧ ಹಸ್ತರಾಗಿದ್ದರೂ ಬೆರಳಿನ ತುದಿಗೊಂದು ಕಪ್ಪು ಚುಕ್ಕಿ ಬೀಳುವ ಸಂದರ್ಭ
ವಿಶ್ವನಾಥ ಸುಂಕಸಾಳ