ನೋಟು ಉಳ್ಳವರ ಪಕ್ಷಪಾತಿ
ಕೋಟು ಬೂಟು ಸೂಟು ಹಾಕಿಕೊಳ್ಳುವವರೆಲ್ಲ ಇದನ್ನು ಚಲಾಯಿಸುವುದು ಅಪರೂಪವೇ
ಸೀಟು ಗೆಲ್ಲಲು ಇರುವ ಅರ್ಹತೆ
ಲಕ್ಷ ಖರ್ಚು ಮಾಡಿ ಗಳಿಸುವ ಕೋಟಿ ವಿದ್ಯೆಗಳಿಗಿಂತ, ಕೋಟಿ ಕೋಟಿ ಗಳಿಸುವ ವೋಟು ವಿದ್ಯೆಯೇ ಗ್ರೇಟು
ತನ್ನ ಸಮ್ಮತಿಯನ್ನು ಸೂಚಿಸುವ ಮಾಧ್ಯಮ ಈ ಮತ
ನಮ್ಮನ್ನಾಳುವವರನ್ನು ನಾವೇ ಆಯ್ದುಕೊಳ್ಳುವ ಮಾರ್ಗ
ಕೊಟ್ಟವ ಕೋಡಂಗಿ. ಇಸ್ಕೊಂಡವ ಕಮಂಗಿ
ಬೇಡವೆಂದರೂ ದೊರಕುವ ಅಧಿಕಾರವಿದು
ವೋಟಿಗಾಗಿ ಸ್ವೀಕರಿಸಿದ ನೋಟಿಗೆ 'ವೋಟಾನೋಟು' ಎನ್ನಬಹುದು
ಹೆಚ್ಚು ಹೆಚ್ಚು ಜೂಟು ಹೇಳುವವನಿಗೆ ಹೆಚ್ಚು ಹೆಚ್ಚು ವೋಟು
ಉಮೇದುವಾರನ ಉಮೇದಿಯನ್ನು ನಿರ್ಧರಿಸುವ ಅಂಶ
ವೋಟ್ ಪಡೆದವರು ನಾಡನ್ನು ಲೂಟ್ ಮಾಡುವುದೇ ಹೆಚ್ಚು
ಹೆಚ್ಚು ಅಕ್ಷರಸ್ಥರಾಗುತ್ತಿದ್ದಂತೆ ನಿಮಗಿದು ಅಲರ್ಜಿಯೆನಿಸುತ್ತದೆ
ಪ್ರಜಾಪ್ರಭುತ್ವದ ಗುಪ್ತ ರೋಗ
ಇದೊಂಥರ ತುರಿಕೆ ಇದ್ದಂತೆ, ನಂತರ ಉರಿಯುವುದೆಂದು ಗೊತ್ತಿದ್ದರೂ ತುರಿಸಿಕೊಳ್ಳುವುದು ಅನಿವಾರ್ಯ
ಯಾರಿಗೆ ವೋಟು ಕೊಟ್ಟರೆ ಎಷ್ಟು ಗೀಟ್ಟುತ್ತದೆ ಎಂಬುದೇ ಹಲವರ ಲೆಕ್ಕಾಚಾರ
ವಿಶ್ವನಾಥ ಸುಂಕಸಾಳ