ಅಭ್ಯರ್ಥಿಗಳೆಲ್ಲ ಮತಾರ್ಥಿಗಳೇ, ಹಾಗಾಗಿಯೇ ಅವರು ಮತದಾರರಿಗೆ ಶರಣು ಶರಣಾರ್ಥಿಗಳು
ಕೊಟ್ಟರೂ ಬಿಟ್ಟರೂ ಕೆಟ್ಟ ಹಾಗೆಯೇ
ಅನ್ಯಥಾ ಶರಣಂ ನಾಸ್ತಿ ಎಂದು ಬರುವವರಿಗೆ ಅನ್ಯಥಾ ಮಾರ್ಗೋ ನಾಸ್ತಿ ಎನ್ನುವ ಕಾರಣಕ್ಕೆ ಮಾಡಬೇಕಾದದ್ದು
ಮತದಾನ ಒಂದು ಅಧಿಕಾರ ಅಲ್ಲ. ಕರ್ತವ್ಯ. ಕಾರಣ ಅಧಿಕಾರವನ್ನು ಚಲಾಯಿಸದೆಯೂ ಇರಬಹುದು
ಪ್ರಜ್ಞಾವಂತರು ವೋಟು ಮಾಡಲ್ಲ, ಅದರ ಬದಲು ಕಮೆಂಟು ಮಾಡುತ್ತಾರೆ
ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಯಾರೆಷ್ಟು ವೋಟು ಗಳಿಸುತ್ತಾರೆಂಬುದು ಮುಖ್ಯವೇ ಹೊರತು ಯಾರು ಹೆಚ್ಚು ಕೆಲಸ ಮಾಡಬಲ್ಲರು ಎಂಬುದಲ್ಲ
ಗೆದ್ದವ ಸೋತ, ಸೋತವ ಸತ್ತ, ಸತ್ತವ ನಿಜವಾಗಿ ಗೆದ್ದ
ಗಳಿಸಿದ ಸಂಪತ್ತಿನ ಮೈನಸ್ ಪಾಯಿಂಟ್
ಮಾತುಗಾರರಿಗೆ ಒಲಿಯುವ ಮತ
ಲಕ್ಷ್ಮಿ ಗಳಿಕೆಯ ಮೂಲ ಈ ವೋಟು ಗಳಿಕೆ
ಪ್ರಜಾಪ್ರಭುತ್ವ ವ್ಯವಸ್ಥೆಯ ಓ.ಟಿ. (operation theatre)
ವೋಟು ಕೊಟ್ಟರೆ ಹೋಯಿತು, ಕೊಡದಿದ್ದರೂ ಹೋಯಿತು
ಒಮ್ಮೆ ಚಲಾಯಿಸಿದರೆ ಮತ್ತೈದು ವರ್ಷ ಪಶ್ಚಾತ್ತಾಪ ಪಡಲು ನಿಮಗೆ ಅವಕಾಶವಿದೆ
ದುಡ್ಡು ಸ್ವೀಕರಿಸದೇ ವೋಟು ಚಲಾಯಿಸುವವ ಮಹಾದಾನಿಯೇ ಸರಿ
ಕಡಿಮೆ ಕೆಟ್ಟವನೇ ಈ ದಾನಕ್ಕೆ ಸತ್ಪಾತ್ರ
ನಾವು ಯಾರ ಕೈ ಕೆಳಗೆ ಜೀವಿಸಲು ಇಷ್ಟಪಡುತ್ತೇವೆ ಎಂಬುದನ್ನು ಸೂಚಿಸುವ ಮಾಧ್ಯಮ
ವಿಶ್ವನಾಥ ಸುಂಕಸಾಳ