ಕರ್ಣಾನಂದಕರೀ ವರಾ 'ಭಯಕರೀ'
ಪಿಸು ಮಾತಿನ ಪಿಶುನಕ
ಕರ್ಣಾಭರಣ
ರಹಸ್ಯಗಳನ್ನೆಲ್ಲ ಬಯಲು ಮಾಡುವ ಮೊಬಯಲು
ಹೆಂಡತಿಗಿಂತ ನಾಜೂಕು ಮತ್ತು ಚೆಲುವೆ
ಇನ್ನೂ ಉತ್ತಮ ಮಾಡೆಲ್ ಬಂದಾಗ ಇದನ್ನು ಬದಲಿಸಬಹುದು. ಈ ವ್ಯವಸ್ಥೆ ಹೆಂಡತಿಗಿಲ್ಲ
ಹತ್ತಿರವೇ ಇರಿಸಿಕೊಳ್ಳಲ್ಪಡುವ ದೂರವಾಣಿ
ಮಿಸ್ಡ್ ಕಾಲ್ ಮಹಾರಾಣಿ
ದೂರವಿರುವವರನ್ನು ಹತ್ತಿರ ಮಾಡುವ, ಹತ್ತಿರವಿರುವವರನ್ನು ದೂರ ಮಾಡುವ ಸಾಧನ
ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡರೆ ಎಲ್ಲರೂ ಒಬ್ಬೊಬ್ಬರೇ ಮಾತಾಡುವ ಹುಚ್ಚರೇ
ಟವರ್ಗಳು ಮೇಲಕ್ಕೇರುತ್ತಿದ್ದಂತೆ ಮಾನವೀಯತೆಯ ಸಿಗ್ನಲ್ಗಳು ದುರ್ಬಲವಾಗುತ್ತಿವೆ
ಮಾತನಾಡುವವನೇ ಮಹಾಶೂರ ಎಂದುಕೊಳ್ಳುವವರ ಅವಿಭಾಜ್ಯ ಅಂಗ
ಎಲ್ಲವೂ ಸರಿಯಿದ್ದರೆ ಪ್ರೇಮದೂತ, ಎಡವಟ್ಟಾದರೆ ಪ್ರೇಮಿಗಳ ಮಧ್ಯೆ ಬರುವ ಧೂರ್ತ
'ಕೈ' ತುಂಬಾ ಕೆಲಸ ನೀಡಿದ ಉದ್ಯೋಗದಾತ
ಶಬ್ದ ಸಾಧಕ
ವಿಶ್ವನಾಥ ಸುಂಕಸಾಳ