ಚಾರ್ಜ್ ಮತ್ತು ರೀಚಾರ್ಜ್ ಮಾಡುತ್ತಲೇ ಇರಬೇಕಾದದ್ದು
ಇದನ್ನುಳ್ಳವರು ಯಾರೂ ಅಕ್ಷರಶಃ ನೀರುದ್ಯೋಗಿಗಳಲ್ಲ
ಸುಳ್ಳನ್ನು ಅತ್ಯಂತ ಸಲೀಸಾಗಿ ಹೇಳಲು ಇರುವ ಸಾಧನ
ಟಾಯ್ಲೆಟ್‌ನಲ್ಲೂ ನಿಮ್ಮ ಜೊತೆ ಬರುವ ಬೇತಾಳ
ಎಸ್‌ಎಂಎಸ್ ಎಂಬ ಅದ್ಭುತದ ವ್ಯವಸ್ಥೆ ಹೊಂದಿರುವ ಸಾಧನ
ನಿಮ್ಮ ಮೊಬೈಲಿಗೆ ದಿನಕ್ಕೊಂದು ಕರೆಯೂ ಬಾರದಿದ್ದರೆ ಜಗತ್ತಿನ ದೃಷ್ಟಿಯಲ್ಲಿ ನೀವು ಬದುಕಿಲ್ಲ ಎಂದರ್ಥ
ಮೊಬೈಲ್‌ನಿಂದಲೇ ಸ್ನೇಹ, ಮೊಬೈಲ್‌ನಿಂದಲೇ ದ್ರೋಹ, ಮೊಬೈಲ್‌ನಿಂದಲೇ ಸರಸ ವಿರಸವಯ್ಯಾ...
ಒಬ್ಬರನ್ನೊಬ್ಬರು ದೂರುವ-ವಾಣಿ ಅಥವಾ ದೂರುವಾಣಿ
ಇದು ಅಪಾಯ ಮೂಲ ಆದರೂ ನಮಗಿದು ಒಪ್ಪಿತ ದೋಷ
ಎಲ್ಲರಿಗೂ ಹಿಡಿದಿರುವ ಮೂಲವ್ಯಾಧಿ
ಮನುಷ್ಯನೇ ಸೃಷ್ಟಿಸಿಕೊಂಡಿರುವ ಹೊಸ ಅಂಗ
ಯಾವುದೇ ವರ್ಕ್ ಇಲ್ಲದಿದ್ದರೂ ನೆಟ್‌ವರ್ಕ್ ಬೇಕೇ ಬೇಕು
ಅಂಗನೆಯರನ್ನೂ ಸೆಳೆದ ಮಾಯಾಂಗನೆ
ನಡೆದಾಡುವ ಪಂಚಾಯ್ತಿ ಕಟ್ಟೆ
ಕರ-ಸೇವಕ
ವಿಶ್ವನಾಥ ಸುಂಕಸಾಳ