ದಾಕ್ಷಿಣಾತ್ಯರ ಮುಖ್ಯ ಗುಣ
ದಯೆಯ ಸಹವರ್ತಿ
ದಕ್ಷಿಣೆ ತೆಗೆದುಕೊಳ್ಳಲು ಅನುಭವಿಸುವ ಮುಜುಗರ
ಟೇಬಲ್ ಮೇಲೆ ಕೈಯ್ಯೊಡ್ಡುವುದರ ಬದಲು ಕೆಳಗಡೆ ತೂರಿಸುವಿಕೆಗೆ ಕಾರಣವಾದ ಸಂಕೋಚ
ದಾರಿದ್ರ್ಯದ ಮಾಲ
ದ್ರಾಕ್ಷಿ ಮೇಲೆ ಆಸೆ, ನಾಣ್ಯದ ಮೇಲೆ ಪ್ರೀತಿ-ಇದು ದ್ರಾಕ್ಷಿಣ್ಯ
ಇನ್ನೊಂಚೂರು ಬೇಕಿತ್ತು ಆದರೆ ಹೇಗೆ ಕೇಳೋದು ಎಂಬ ಭಾವ
ದಾಕ್ಷಾಯಣಿಗೆ (ಅಪ್ಪ ಕರೆಯದಿದ್ದರೂ ತನ್ನ ತವರಿಗೆ ಹೋಗೋದಕ್ಕೆ) ಇದಿಲ್ಲ
ಸ್ವಜನರಲ್ಲಿ ದಾಕ್ಷಿಣ್ಯ ಇರಬೇಕಂತೆ. ಪರಜನರಲ್ಲಿ ನಿರ್ದಾಕ್ಷಿಣ್ಯವಾಗಿರಬಹುದೇ?
ದಯೆ ದಾಕ್ಷಿಣ್ಯಗಳೆಲ್ಲ ಕಲಿಗಾಲದ್ದಲ್ಲ, ಅವೆಲ್ಲ ಕುಚೇಲನಿಗೆ ಶ್ರೀಮಂತಿಕೆ ಬಂದ ಕತೆಯೊಂದಿಗೇ ಮುಗಿದಿದೆ
ಕೆಲಸ ಮಾಡುವಾಗ ಈ ಭಾವ ಬಂದರೆ ಅದಕ್ಕೆ ಆಲಸ್ಯ ಎನ್ನಬಹುದು
ಕರ್ತವ್ಯದ ವಿಚಾರದಲ್ಲಿ ದಾಕ್ಷಿಣ್ಯವಿರಬಾರದು ಸ್ವಾಮಿ ಶೃದ್ಧಾನಂದ
ಪಾಕಿಸ್ತಾನದ ಅಕ್ರಮಕ್ಕೆ ಭಾರತ ತೆಗೆದುಕೊಳ್ಳುವ ಕ್ರಮ ಇದೇ
ದಾಕ್ಷಾಯಣಿಯ ಕಂಜೂಸುತನ
ಒಳಗೊಳಗೇ ಬೇಕು. ಹೊರಗಡೆ ಮಾತ್ರ ಸಾಕು
ರಾಜಕೀಯ ಪ್ರವೇಶಿಸಬೇಕೆಂದಿರುವವರ ಅನರ್ಹತೆ
ಮೇಲೇರುವಿಕೆಯ ಪ್ರತಿಬಂಧಕ
ತರಕಾರಿಯವನ ಜೊತೆ ವಾದ ಮಾಡುವಾಗ ಹಲವರಿಗೆ ಇದಿರುವುದಿಲ್ಲ.
-ವಿಶ್ವನಾಥ ಸುಂಕಸಾಳ
vishwasunkasal@yahoo.com