ಮುದುಕಿಯೊಬ್ಬಳು ಕಂಡಕ್ಟರ್ ಕೋಲ್ಯನಿಗೆ ದಿನವೂ ತಿನ್ನಲು ಬಿಸ್ಕತ್ ಕೊಡತೊಡಗಿದಳು.
ಒಂದು ದಿನ ಕೋಲ್ಯ ಕೇಳಿದ: ಅಜ್ಜಿ ಇಷ್ಟೊಂದು ರುಚಿಯಾದ ಬಿಸ್ಕತ್ ನನಗ್ಯಾಕೆ ಕೊಡ್ತಾ ಇದೀಯಾ? ನೀನೇ ತಿನ್ಬೋದಲ್ಲ?
ಮುದುಕಿ: ನನಗೆ ಹಲ್ಲೇ ಇಲ್ವಪ್ಪ. ಹೇಗೆ ತಿನ್ಲಿ?
ಕೋಲ್ಯ: ಹಾಗಿದ್ರೆ ದಿನಾಲೂ ಬಿಸ್ಕತ್ ಏಕೆ ತೊಗೊಂಡು ಬರ್ತೀಯಾ?
ಮುದುಕಿ: ಅದೇನಂದ್ರೆ, ಅದಕ್ಕೆ ಸವರಿರ್ತಾರಲ್ಲ ಚಾಕಲೆಟ್ ಕ್ರೀಮ್; ಅದಂದ್ರೆ ನನಗೆ ತುಂಬಾ ಇಷ್ಟ. ಅದನ್ನೆಲ್ಲ
ನೆಕ್ಕೋಕ್ಕೆ ಮಜಾ ಇರುತ್ತೆ!