ಮೊದಲನೆಯ ವರ್ಷ: ಜಾನೂ ಇಲ್ಲಿ ಬರ್ತೀರಾ?
ಎರಡನೆಯ ವರ್ಷ: ಅಲ್ರೀ ಸ್ವಲ್ಪ ಇಲ್ಲಿ ಬರ್ತೀರಾ?
ಮೂರನೆಯ ವರ್ಷ: ಕೇಳಿಸ್ತಾ ಇದೇನಾ, ನಿಮ್ಮನ್ನೇ ಕರೀತಾ ಇರೋದು.
ನಾಲ್ಕನೆಯ ವರ್ಷ: ನೀನು ಬರ್ತೀಯಾ, ನಾನು ಬರ್ಲಾ?!
----
ತಿಮ್ಮ ಮತ್ತು ಕೋಲ್ಯ ಮದುವೆ ಸಮಾರಂಭವೊಂದರಲ್ಲಿ ಭೋಜನ ಶಾಲೆಗೆ ಹೋದರು. ಪ್ಲೇಟಿನೊಂದಿಗೆ ಟಿಶ್ಯು ಪೇಪರ್ ಕೊಟ್ಟಿದ್ದರಿಂದ ಅದನ್ನೂ ತಿನ್ನುವ ಪದಾರ್ಥ ಅಂದುಕೊಂಡ ತಿಮ್ಮ ಬಾಯಿಗೆ ಹಾಕಿಕೊಂಡು ಜಗಿಯತೊಡಗಿದ. ಅದಾಗಲೇ ಭರ್ಜರಿ ಭೋಜನ ಶುರುಮಾಡಿದ್ದ ಕೋಲ್ಯ ಇದನ್ನು ನೋಡಿ ತಿಮ್ಮನತ್ತ ಓಡಿದ.
ಕೋಲ್ಯ: ಲೇ ತಿಮ್ಮ ಅದನ್ನು ತಿನ್ಬೇಡ್ವೋ.......ಸಪ್ಪಗಿದೆ!