ಟೀಚರ್: ಗ್ರಹಗಳೆಷ್ಟು? ಅವುಗಳ ಹೆಸರೇನು?
ಮರಿಕೋಲ್ಯ: ಬುಧ, ಶುಕ್ರ, ಮಂಗಳ, ಗುರು...
ಟೀಚರ್: ಮತ್ತೆ?
ಮರಿಕೋಲ್ಯ: ಮತ್ತೇನೂ ಇಲ್ಲ ದೇವರ ದಯೆಯಿಂದ ಎಲ್ಲಾ ಚೆನ್ನಾಗಿದೆ. ನೀವ್ ಹೇಳಿ ಏನ್ ಸಮಾಚಾರ?!
---------
ದೇವರು: ನಿನಗೇನು ಬೇಕು?
ಭಕ್ತ: ನನಗೆ ಅತ್ಯಂತ ಸುಂದರಿಯಾದ ಹೆಂಡತಿ ಬೇಕು...
ದೇವರು: ನೀನು ಮುಸಲ್ಮಾನನಾಗಿದ್ದರೆ ಕತ್ರಿನಾ ಕೈಫ್‌ಳಂಥ ಹೆಂಡತಿ ಸಿಗ್ತಾಳೆ, ಹಿಂದೂ ಆಗಿದ್ರೆ ಕರೀನಾ ಕಪೂರ್ ಥರ ಇರೋವ್ಳು, ಸಿಖ್ ಆಗಿದ್ದರೆ ಅನುಷ್ಕಾಳಂತಹ ಚೆಲುವೆ, ಕ್ರಿಶ್ಚಿಯನ್ ಆಗಿದ್ದರೆ ಜೆನಿಲಿಯಾಳಂತಹ ಸುಂದರಿ! ಅಂದ್ಹಾಗೆ ನಿನ್ನ ಹೆಸರೇನು?
ಭಕ್ತ: ಅಬ್ದುಲ್ ವಿಜಯ್ ಸಿಂಗ್ ಫರ್ನಾಂಡಿಸ್!