ಕೋಲ್ಯ ಗೋಡೆಯ ಮೇಲ್ಭಾಗದಲ್ಲಿ ಪೇಂಟ್ ಮಾಡಿ ಮಾಡಿ ಸುಸ್ತಾಗಿಬಿಟ್ಟ. ಇನ್ನು ಪೇಂಟ್ ಮಾಡುವುದು ತನ್ನಿಂದ ಸಾಧ್ಯವಿಲ್ಲವೆಂದು ಅನ್ನಿಸಿ. ಕೆಳಗಡೆ ಬರೆದ...
"Same as above'
----
ಯಾರ ವಿದ್ಯಾರ್ಥಿಗಳು ಹೆಚ್ಚು ಧೈರ್ಯವಂತರು ಎನ್ನುವ ಬಗ್ಗೆ ಇಂಡಿಯಾ ಮತ್ತು ಅಮೆರಿಕದ ಕಾಲೇಜಿನ ಇಬ್ಬರು ಪ್ರಿನ್ಸಿಪಾಲರ ನಡುವೆ ಚರ್ಚೆ ನಡೆಯಿತು.
ಅಮೆರಿಕ ಕಾಲೇಜಿನ ಪ್ರಿನ್ಸಿಪಾಲ್ ತನ್ನ ವಿದ್ಯಾರ್ಥಿಗಳನ್ನು ಮೊಸಳೆಗಳು ತುಂಬಿದ ಕೊಳದಲ್ಲಿ ಜಿಗಿಯಲು ಹೇಳಿದ.
ಅವರೆಲ್ಲರೂ ಜಿಗಿದರು. ಆಗ ಆತ ಹೇಳಿದ, 'ನೋಡಿದ್ಯಾ ನನ್ನ ವಿದ್ಯಾರ್ಥಿಗಳಿಗೆ ಎಷ್ಟು ಧೈರ್ಯ ಇದೆ ಅಂತ?'
ಆಗ ಭಾರತದ ಕಾಲೇಜಿನ ಪ್ರಿನ್ಸಿಪಾಲ್ ತನ್ನ ವಿದ್ಯಾರ್ಥಿಗಳನ್ನು ಕರೆದು ಅದೇ ಕೊಳದಲ್ಲಿ ಜಿಗಿಯಲು ಹೇಳಿದ.
ವಿದ್ಯಾರ್ಥಿಗಳು: ಹೋಗಲೇ, ಬಾಂಡ್ಲಿ. ತಲೆ ಕೆಟ್ಟಿದೇನಾ? ಬೇಕಿದ್ರೆ ನೀನೇ ಜಿಗಿ ಆ ಕೊಳದಲ್ಲಿ...
ಭಾರತದ ಪ್ರಿನ್ಸಿಪಾಲ್: ನೋಡಿದ್ಯಾ ನನ್ನ ವಿದ್ಯಾರ್ಥಿಗಳಿಗೆ ಎಷ್ಟು ಧೈರ್ಯ ಇದೆ ಅಂತ!