ಟೀಚರ್: ಹತ್ತು ಸರಳ ಪ್ರಶ್ನೆಗಳನ್ನು ಕೇಳಲಾ ಅಥವಾ ಒಂದು ಕಠಿಣ ಪ್ರಶ್ನೆ ಕೇಳಲಾ?
ಮರಿಕೋಲ್ಯ: ಒಂದು ಕಠಿಣ ಪ್ರಶ್ನೇನೇ ಕೇಳಿ.
ಟೀಚರ್: ಯಾವುದು ಮೊದಲು ಬರುತ್ತೆ ದಿನವೋ, ರಾತ್ರಿಯೋ?
ಮರಿಕೋಲ್ಯ: ರಾತ್ರಿ.
ಟೀಚರ್: ಅಷ್ಟೊಂದು ಖಚಿತವಾಗಿ ಅದ್ಹೇಗೆ ಹೇಳ್ತೀಯಾ?
ಮರಿಕೋಲ್ಯ: ಸರ್, ನೀವು ಒಂದೇ ಪ್ರಶ್ನೆ ಕೇಳ್ತೀನಿ ಅಂತ ಹೇಳಿದ್ದು. ಮರ್ತುಬಿಟ್ರಾ?!
----
ಹೆಂಡತಿ: ನನ್ನ ಮುಖದ್ಮೇಲೆ ಯಾಕ್ರೀ ನೀರು ಎರಚಿದ್ರೀ?
ಕೋಲ್ಯ: ನಿನ್ನ ಅಪ್ಪ ನನಗೆ ಹೇಳಿ ಕಳ್ಸಿದಾನೆ. ನನ್ನ ಮಗಳನ್ನ ಹೂವಿನ ಥರ ನೋಡ್ಕೋ ಅಂತ!