ದೇವರಿಲ್ಲ

Updated on: 

ದೇವರಿಲ್ಲ ಎಂದು ಕೂಗಿ ಕೂಗಿ ಹೇಳಿ. ನಿಮಗೆ ಆತ ಪ್ರಗತಿಪರ ಎಂಬ ಬಿರುದು ಕೊಡುವುದು ಅನಿವಾರ್ಯ
    ಅವರು, ಇವರು ಎಂದು ಭೇದ ಮಾಡದವನೇ ದೇವರು
    ಇವನು ನಿರ್ಮಿಸಿದ ನಿಯಮವನ್ನು ಮೀರಲು ಇವನಿಂದಲೇ ಸಾಧ್ಯವಿಲ್ಲ
    ಅಪ್ಪ ಅಮ್ಮ ಇಲ್ಲದವ, ಆದರೆ ಮಕ್ಕಳಂತೂ ಅಸಂಖ್ಯ
    ದೇವರನ್ನು ನಂಬಿ. ಆತನ ದೂತರನ್ನು ನಂಬದಿರಿ
    ಅರ್ಚಕರ ಹೊಟ್ಟೆಗೆ ಪ್ರಸಾದ ಬೀಳಬೇಕೆಂದರೆ ಇವನ ಪ್ರಸಾದ ಕೊಡುವುದು ಅನಿವಾರ್ಯ
    ಕಾಣಿಕೆ ಡಬ್ಬಿಯ ಹಿಂದೆ ಇರುವವ
    ಕಾರ್ಯದ ಯಶಸ್ಸಿಗೆ ದೇವಾನುಗ್ರಹ ಬೇಕು. ಅದಕ್ಕಿಂತ ಮನೋನಿಗ್ರಹ ಬೇಕು
    ಪ್ರಾರ್ಥಿಸಲು ಎಲ್ಲರಿಗೂ ಕಾರಣ ಇದೆ ಮತ್ತು ಆ ಕಾರಣ ಇದೇ...
    ಈತ ಎಲ್ಲರನ್ನೂ ಪಾಲಿಸುತ್ತಾನೆ. ಭಕ್ತರಲ್ಲದವರನ್ನೂ...
    ದೇವರ ಕುರಿತು ಹೆಚ್ಚು ಯೋಚಿಸುವವರು ನಾಸ್ತಿಕರೇ. ಅವನನ್ನು ನಿರಾಕರಿಸಲಾದರೂ...
    ಈತನಿಗೆ ರಜೆಯೂ ಇಲ್ಲ, ವಿಶ್ರಾಂತಿಯೂ ಇಲ್ಲ
    ಕೆಟ್ಟ ಮಕ್ಕಳ ತಂದೆಯ ಕಷ್ಟಕ್ಕೆ ಈತನೇ ಉದಾಹರಣೆ
    ಈ ಶಬ್ದ ಏಕವಚನವೂ ಹೌದು, ಬಹುವಚನವೂ ಹೌದು
    ಈತನ ಹೆಸರಲ್ಲಿ ಅದೆಷ್ಟೋ ಜನ ನಿತ್ಯ ಪ್ರಸಾದ ಸ್ವೀಕರಿಸುತ್ತಾರೆ

-ವಿಶ್ವನಾಥ ಸುಂಕಸಾಳ
vishwasunkasal@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com