ನ್ಯಾಯದಾನದ ಹೆಗ್ಗಳಿಕೆ
1993ರ ಮುಂಬೈ ಸರಣಿ ಸ್ಫೋಟದ ಪ್ರಕರಣದಲ್ಲಿ 257 ಜನ ಹತರಾಗಿ 700 ಮಂದಿಗೆ ಗಾಯಗಳಾಗಿದ್ದನ್ನು ಇಪ್ಪತ್ತು ವರ್ಷಗಳ ಅನಂತರ ಜನ ಮರೆತಿರಲಿಲ್ಲ. ಆ ಪ್ರಕರಣದಲ್ಲಿ ವಿಶೇಷ ಟಾಡಾ ನ್ಯಾಯಾಲಯದಲ್ಲಿ ಚಲನಚಿತ್ರ ನಟ, ಕಾಂಗ್ರೆಸ್ಸಿನ ಮಾಜಿ ಕೇಂದ್ರ ಮಂತ್ರಿ ಸುನಿಲ್ ದತ್ ಅವರ ಪುತ್ರ ಚಿತ್ರನಟ ಸಂಜಯದತ್ ಕೂಡಾ ಒಬ್ಬರು ಆರೋಪಿಯಾಗಿದ್ದರು.
ಅವರ ವಿರುದ್ಧವಿದ್ದ ಆರೋಪ ಅವರಲ್ಲಿ ಲೈಸೆನ್ಸ್ ಇಲ್ಲದ ಒಂದು ವಿದೇಶಿ ಎ.ಕೆ-56 ರೈಫಲ್ ಇತ್ತು ಹಾಗೂ ಸರಣಿ ಬಾಂಬ್ ಸ್ಫೋಟ ಪ್ರಕರಣದ ರೂವಾರಿ ದಾವೂದ್ ಇಬ್ರಾಹಿಂ ಅವರ ಪರಿಚಿತರ ಪರಿಚಯವೂ ಅವರಿಗೆ ಇತ್ತು ಎನ್ನುವುದು.
ಟಾಡಾ ನ್ಯಾಯಾಲಯದಲ್ಲಿ ಆ ಪ್ರಕರಣದಲ್ಲಿ ಸಂಜಯದತ್ಗೆ ಶಿಕ್ಷೆಯಾದಾಗಲೇ ಪ್ರತಿಷ್ಠಿತ ವರ್ಗಗಳ ಪ್ರತಿಭಟನೆ ಕಂಡುಬಂದರೂ ಅವರ ವಿರುದ್ಧ ಮಂಡನೆಯಾಗಿದ್ದ ಸಾಕ್ಷ್ಯ ಬಲವಾಗಿಯೇ ಇತ್ತು. ಸುಪ್ರೀಮ್ ಕೋರ್ಟಿನಲ್ಲಿ ಮೇಲ್ಮನವಿಯ ವಿಚಾರಣೆಯ ಅನಂತರ ಗುರುವಾರ ಪ್ರಕಟವಾದ ತೀರ್ಪಿನಲ್ಲಿ ಸಂಜಯದತ್ಗೆ ವಿದಿಸಿದ್ದ ಶಿಕ್ಷೆಯ ಅವಧಿಯನ್ನು ಆರು ವರ್ಷಗಳಿಂದ ಐದು ವರ್ಷಗಳಿಗೆ ಇಳಿಸಲಾಗಿದೆ. ಅವರ ವಿರುದ್ಧ ಇದ್ದ ಆರೋಪಕ್ಕೆ ನೀಡಬಹುದಾದ ಕನಿಷ್ಠ ಪ್ರಮಾಣದ ಶಿಕ್ಷೆ ಇದು.
ಮುಂಬೈನ ಹಾಲಿವುಡ್ ಪ್ರಮುಖರು ಏನಾದರೂ ಹೇಳಿಕೊಳ್ಳಲಿ, ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಗಳು ಕಾಯಿದೆಯ ಮುಂದೆ ಎಲ್ಲರೂ ಸಮಾನರೇ ಎನ್ನುವ ಸಿದ್ಧಾಂತವನ್ನು ಮತ್ತೆ ಎತ್ತಿ ಹಿಡಿದಿದ್ದಾರೆ. ಅದನ್ನು ದೇಶವಾಸಿಗಳು ಹೆಮ್ಮೆಯಿಂದ ಒಪ್ಪಿಕೊಳ್ಳಬೇಕು. ಇಲ್ಲಿ ಸಂಜಯದತ್ರ ಪ್ರತಿಷ್ಠೆಯ ಪ್ರಶ್ನೆ ಗೌಣ. ಅವರ ಮೇಲಿದ್ದ ಆರೋಪ ಗುರುತರವಾದದ್ದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

