ಯೋಜನೆಗಳ ಅನುಷ್ಠಾನಕ್ಕಿಲ್ಲ ಬದ್ಧತೆ
2008ರಲ್ಲಿ ಕೇಂದ್ರ ಸರ್ಕಾರ, ರೈತರ ಸಾಲ ಮನ್ನಾ ಪರಿಹಾರ ಯೋಜನೆಯನ್ನು ಘೋಷಿಸಿತು. ಪ್ರಧಾನ ಮಂತ್ರಿಗಳು ಸಂಸತ್ತಿನಲ್ಲಿ ಮತ್ತು ಮಾಧ್ಯಮಗಳಲ್ಲಿ ದೇಶದ ಎಲ್ಲಾ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗಿದೆ ಮತ್ತು ಈ ಬಗ್ಗೆ ರು. 76,000 ಕೋಟಿ ಒದಗಿಸಲಾಗಿದೆ ಎಂದು ಪದೇ ಪದೆ ಘೋಷಿಸಿ ತನ್ನ ಬೆನ್ನನ್ನು ತಾವೇ ತಟ್ಟಿಕೊಂಡರು. ಆದರೆ ಈ ಯೋಜನೆ ಯಾವುದೇ ಅರ್ಹ ರೈತರಿಗೆ ತಲುಪದೇ ಅಧಿಕಾರಿಗಳ, ಮಧ್ಯವರ್ತಿಗಳ ಮತ್ತು ರಾಜಕಾರಣಿಗಳ ಜೇಬು ಸೇರಿರುವ ಬಗ್ಗೆ ಸಿ.ಎ.ಜಿ. ವರದಿ ಬಹಿರಂಗಪಡಿಸಿದೆ. ಅದೇ ರೀತಿ ಕರ್ನಾಟಕದ ಹೈಕೋರ್ಟ್, ರಾಜ್ಯದ ಅಡಿಕೆ ಬೆಳೆಗಾರರ ಸಾಲವನ್ನು ಮನ್ನಾ ಮಾಡಬೇಕೆಂದು ಆದೇಶ ನೀಡಿತ್ತು. ಸರ್ಕಾರ ಈ ಆದೇಶವನ್ನು ಜಾರಿಗೆ ತರದೇ ರೈತರಿಗೆ ದ್ರೋಹ ಬಗೆಯುತ್ತಿದೆ. ಈ ಮಧ್ಯೆ ಸರ್ಕಾರ ನಬಾರ್ಡ್ ಮೂಲಕ ಅಡಿಕೆ ಬೆಳೆಗಾರರ ಬೆಳೆ ಸಾಲವನ್ನು 3 ವರ್ಷ ಮತ್ತು ಅಭಿವೃದ್ಧಿ ಸಾಲವನ್ನು 11 ವರ್ಷದ ಅವಧಿಗೆ ವಿಸ್ತರಿಸಿ ಆದೇಶ ಹೊರಡಿಸಿದ್ದರೂ ಯಾವುದೇ ಸಹಕಾರಿ ಬ್ಯಾಂಕ್ ಮತ್ತು ವಾಣಿಜ್ಯ ಬ್ಯಾಂಕುಗಳು ಅನುಷ್ಠಾನಕ್ಕೆ ತರಲೇ ಇಲ್ಲ. ಈ ಬಗ್ಗೆ ಸರ್ಕಾರವೂ ಕಣ್ಮುಚ್ಚಿ ಕುಳಿತಿದೆ. ಇದು ಕೋರ್ಟು ಆದೇಶದ ಉಲ್ಲಂಘನೆಯೂ ಆಗಿರುತ್ತದೆ. ಬಾಯಿ ತೆರೆದರೆ ಇವು, ತಾವು ರೈತಪರ ಎಂದು ಬೊಗಳೆ ಬಿಡುತ್ತವೆ. ಸರ್ಕಾರಗಳಿಂದ ರೈತ ಶೋಷಣೆ ಇದೇ ರೀತಿ ಮುಂದುವರಿದರೆ, ರೈತ ತನ್ನ ಚಳವಳಿ ಮಾರ್ಗ ಕೈ ಬಿಟ್ಟು ದಂಗೆ ಏಳುವ ದಿನಗಳು ದೂರವಿಲ್ಲ.
- ಎನ್. ಈಶ್ವರ ಭಟ್, ಪುತ್ತೂರು
ಅಸಂಗತ ಮಾತುಗಳ ಗೊಂದಲ
ಇತ್ತೀಚೆಗೆ ಮಂಗಳೂರಿನಲ್ಲಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸುತ್ತಾ ಬೊಳುವಾರು ಮಹಮದ್ ಕುಂಞ ಕೆಲವು ಅಸಂಗತ ಮಾತುಗಳನ್ನಾಡಿ ಗೊಂದಲದ ವಿಚಾರಕ್ಕೆ ಸಾಕ್ಷಿಯಾದರು. (ಕ.ಪ್ರ. ಮಾ. 10)
- ಬುರ್ಖಾ ಮುಸ್ಲಿಮರಿಗೆ ಕಡ್ಡಾಯವಲ್ಲ ಎಂದು ಹೇಳಿದ ಅವರ ಮಾತಿಗೆ ಅವರ ಧಾರ್ಮಿಕ ಮುಖಂಡರ ಅಭಿಪ್ರಾಯ ಏನಿರಬಹುದು?
- ಬುರ್ಖಾ ಹಾಕಿ ಶಾಲೆಗೆ ಬರುವವರನ್ನು ಪ್ರೀತಿಯಿಂದ ನೋಡಿ ಎಂಬುದಕ್ಕೆ ಏನರ್ಥ? ತರಗತಿಯೊಳಗೆ ಎಲ್ಲ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸಮವಸ್ತ್ರದಲ್ಲಿರಬೇಕಾದುದು ಅಪೇಕ್ಷಣೀಯವಲ್ಲವೆ? 'ನೈತಿಕಗಿರಿ' ಎಂಬ ಆಪಾದನೆಗೆ ಕುಂಞಯವರ ಬಳಿ ಸಾಕ್ಷ್ಯವಿದೆಯೇ? ಶಿಕ್ಷಣ ಸಂಸ್ಥೆಗಳ ನೀತಿ-ನಿಯಮಗಳಿಗೆ ಒಪ್ಪಿಕೊಂಡೇ ಅಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪ್ರವೇಶ ಪಡೆದಿರುತ್ತಾರಲ್ಲವೆ? ಬುರ್ಕಾ ಹಾಕಿ ಶಾಲೆಗೆ ಬರುವವರನ್ನು ದ್ವೇಷಿಸಿದ ವಿಚಾರ ಎಲ್ಲೂ ಕಂಡುಬಂದಿಲ್ಲ.
- ಮಹಿಳಾ ಸಬಲೀಕರಣದಲ್ಲಿ ಮೊದಲ ಶತ್ರು ಧರ್ಮ ಗ್ರಂಥಗಳು ಎಂದು ಅವರು ಹೇಳಿದ್ದಾರೆ. ಧರ್ಮ ಗ್ರಂಥಗಳು ಯಾವ ಮತದ ಗ್ರಂಥಗಳೆಂದು ಅವರು ಧೈರ್ಯವಾಗಿ ಹೇಳಬಲ್ಲರೇ? ಮನುಧರ್ಮಶಾಸ್ತ್ರ ಮಹಿಳೆಯರ ಬಗ್ಗೆ ಗೌರವದಿಂದಲೇ ಮಾತಾಡಿದೆ. (ಮಾನವಧರ್ಮಶಾಸ್ತ್ರ ಮತ್ತು ಮಹಿಳೆಯರು- ಎನ್. ರಂಗನಾಥ ಶರ್ಮಾ)
- ಭೂತಗಳೆಲ್ಲ ಬ್ರಾಹ್ಮಣರಾಗಲು ಹೊರಟಿವೆ- ಎಂದರೆ ಏನು? ಭೂತಗಳೇಕೆ? ಎಲ್ಲರೂ ಬ್ರಾಹ್ಮಣರಾಗಲಿ. ಆಗ ಮೀಸಲಾತಿ, ಓಟ್ ಬ್ಯಾಂಕ್ ರಾಜಕಾರಣ, ಜಾತಿ ಸಂಘರ್ಷಗಳು ಇರಲಾರವು. ಆದರೆ ಕುಂಞಯವರು ಇದಕ್ಕೆ ಒಪ್ಪಿಯಾರೆ?
- ಎಂ. ಸುಬ್ರಹ್ಮಣ್ಯ ಭಟ್, ಮುಡಿಪು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

