(ಮದುವೆಗೆ ಮುನ್ನ...)
ಕೋಲ್ಯ: ಈ ದಿನಕ್ಕಾಗಿ ನಾನು ಎಷ್ಟು ದಿನದಿಂದ ಕಾದಿದ್ದೆ!
ಕೋಲ್ಯಿಣಿ: ಹಾಗಿದ್ರೆ ನಾನು ಹೋಗಲಾ?
ಕೋಲ್ಯ: ಇಲ್ಲ. ಬೇಡ್ವೇ ಬೇಡ!
ಕೋಲ್ಯಿಣಿ: ನನ್ನನ್ನು ತುಂಬಾ ಪ್ರೀತಿ ಮಾಡ್ತೀಯಾ?
ಕೋಲ್ಯ: ಹಾಂ. ಮೊದಲೂ ಮಾಡ್ತಿದ್ದೆ, ಮುಂದೇನೂ ಮಾಡ್ತೀನಿ.
ಕೋಲ್ಯಿಣಿ: ನನಗೆ ಯಾವತ್ತಾದ್ರೂ ವಂಚನೆ ಮಾಡ್ತೀಯಾ?
ಕೋಲ್ಯ: ಸಾಧ್ಯಾನೇ ಇಲ್ಲ. ಹಾಗೆ ಮಾಡೋ ಬದಲು ನಾನು ಸತ್ತು ಹೋಗ್ತೀನಿ.
ಕೋಲ್ಯಿಣಿ: ನೀನು ನನ್ನನ್ನು ಯಾವಾಗ್ಲೂ ಇದೇ ರೀತಿ ಪ್ರೀತಿಸ್ತೀಯಾ?
ಕೋಲ್ಯ: ಹಾಂ...ಯಾವಾಗ್ಲೂ!
ಕೋಲ್ಯಿಣಿ: ನನ್ ಮೇಲೆ ಯಾವತ್ತಾದ್ರೂ ಕೈ ಮಾಡ್ತೀಯಾ?
ಕೋಲ್ಯ: ಇಲ್ಲ. ನಾನಂಥ ವ್ಯಕ್ತಿಯಲ್ಲ.
ಕೋಲ್ಯಿಣಿ: ನಾನು ನಿನ್ನನ್ನು ಸಂಪೂರ್ಣವಾಗಿ ನಂಬಬಹುದಾ?
ಕೋಲ್ಯ: ಹೂಂ...
ಕೋಲ್ಯಿಣಿ: ಓಹ್ ಡಾರ್ಲಿಂಗ್...!
(ಮದುವೆಯ ನಂತರ ಏನಾಯಿತು ಎಂದು ತಿಳಿಯಲು, ಈ ಜೋಕನ್ನು ಕೆಳಗಿನಿಂದ(ಉಲ್ಟಾ) ಓದಿ...)