ಇವನು ಇರುವನೋ ಇಲ್ಲವೋ ಎನ್ನುವುದಕ್ಕಿಂತ ಈತ ಇದ್ದರೆ ಮಾತ್ರ ನಾವೆಲ್ಲ ಸೇಫ್
ದೇವರಿಗಿಂತ ಮೇಲೆ ದೇವರು ಇಲ್ಲ. ಹಾಗಾಗಿ ದೇವರು ದೇವರನ್ನು ನಂಬದ ನಾಸ್ತಿಕನೇ
ತನ್ನ ನೆನಪನ್ನು ಯಾವತ್ತೂ ಮಾಡುತ್ತಿರಲಿ ಎಂದು ಕಷ್ಟಗಳನ್ನು ಕೊಡುತ್ತಾನೆ
ನಿತ್ಯ ನೈವೇದ್ಯ ಮಾಡುವ ಮೂಲಕ ಮನುಷ್ಯನೇ ಈತನ ಹೊಟ್ಟೆ ಹೊರೆಯುತ್ತಿರುವುದು
ಸುಖದಲ್ಲಿ ಮರೆ; ದುಃಖದಲ್ಲಿ ಮೊರೆ
ಮೊಟ್ಟ ಮೊದಲು ದೇವರ ಫೋಟೋ ಹೊಡೆದವರು ಯಾರು ಎಂಬುದಿನ್ನೂ ಪತ್ತೆಯಾಗಿಲ್ಲ
ರಜನೀಕಾಂತ
ಈತ ಒಬ್ಬ ಸಾಮಾನ್ಯ ಮನುಷ್ಯ ಎಂಬುದು ಒಂದು ಮೂಢನಂಬಿಕೆಯೇ
ದಂತ ಉದುರುವ ಮೊದಲೇ ದಂತಕತೆಯಾದವನ
ನೂರು ಕೋಟಿ ಭಾರತೀಯರ ಕಲ್ಪನೆ ಸೇರಿದರೂ ಈತನ ಸಾಹಸವನ್ನು ಊಹಿಸಲಿಕ್ಕಾಗದು
ಒಮ್ಮೆ ಈತ ಒಂದು ಕೆರೆಯಲ್ಲಿ ಉಚ್ಚೆ ಹೊಯ್ದ; ಅದು ಸಮುದ್ರವಾಯ್ತು, ನೀರು ಮಾತ್ರ ಈಗಲು ಉಪ್ಪುಪ್ಪೇ
ಮೊಟ್ಟೆ ಮೊದಲೋ ಕೋಳಿ ಮೊದಲೋ? ಇದರ ಉತ್ತರ ಈತನ ಬಳಿ ಇದೆಯಂತೆ
-ವಿಶ್ವನಾಥ ಸುಂಕಸಾಳ
vishwasunkasal@yahoo.com