ರಜನಿಕಾಂತ

Updated on: 

ಈತ ಚಿಟಿಕೆ ಹೊಡೆದರೆ ಅಂತರಿಕ್ಷ ನೌಕೆಯಲ್ಲಿದ್ದ ಸುನೀತಾ ವಿಲಿಯಮ್ಸ್‌ಗೂ ಕೇಳಿಸುತ್ತಿತ್ತಂತೆ
    ಇವನು ಚೂರು ಸಡಿಲ ಬಿಟ್ಟರೂ ಗ್ರಹಗಳ ಕಕ್ಷೆ ಬದಲಾಗಿಬಿಡುತ್ತೆ
    ಈತನ ಅಕ್ವೇರಿಯಂನಲ್ಲಿ ತಿಮಿಂಗಿಲಗಳಿವೆಯಂತೆ
    ಭೂಮಿಗಿಂತ ಹೆಚ್ಚು ಗುರುತ್ವಾಕರ್ಷಣೆ ಉಳ್ಳವ. ಅದೆಷ್ಟು ಅಭಿಮಾನಿಗಳು ಈತನಿಗೆ..!
    ಈತನ ಅಭಿಮಾನಿಗಳೆಲ್ಲ ಒಂದೆಡೆ ಸೇರಿರುವ ಗ್ರಹಕ್ಕೆ ಭೂಮಿ ಎನ್ನುತ್ತಾರೆ
    ಈತನ ಒಂದು ಓಟಿನ ಮೌಲ್ಯ ವಿಶ್ವದ ಜನಸಂಖ್ಯೆಗೆ ಸಮಾನ
    ಅವನ ಸಾಹಸಗಳನ್ನೆಲ್ಲ ದಾಖಲಿಸಿದರೆ ಅದು ಗಿನ್ನಿಸ್ ಪುಸ್ತಕಕ್ಕಿಂತ ದೊಡ್ಡದಾಗುತ್ತದೆ
    ಈತ ಜೋರಾಗಿ ಬಿಟ್ಟ ಉಸಿರೇ ಕತ್ರೀನಾ, ನೀಲಂ, ಸ್ಯಾಂಡಿ ಮುಂತಾಗಿ ಕರೆಸಿಕೊಂಡಿದೆ
    ಒಂದು ಕಡೆ ಪೆಂಡಾಲ್ ಹಾಕಲಾಗಿತ್ತು. ಕೇಳಿದರೆ ಅದು ಈತನ ಅಂಡರ್‌ವೇರ್ ಒಣ ಹಾಕಿದ್ದಾಗಿತ್ತು
    ಇವನ ತಿಂಗಳ ಖರ್ಚುಕೇಂದ್ರ ಬಜೆಟ್
    ಸಿಂಧೂ ಬಯಲಿನ ನಾಗರಿಕತೆಗೆ ಜಾಗ ಹುಡುಕಿಕೊಟ್ಟವ ಈತನೇ

-ವಿಶ್ವನಾಥ ಸುಂಕಸಾಳ
vishwasunkasal@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com