ಹುಡುಗಿಯೊಬ್ಬಳು ಕೋಲ್ಯನನ್ನು ಹುಚ್ಚಿಯಂತೆ ಪ್ರೀತಿಸುತ್ತಿದ್ದಳು. ಒಂದು ದಿನ ರಾತ್ರಿ ಮಾಳಿಗೆ ಹತ್ತಿ ಚಂದ್ರನನ್ನೇ ದಿಟ್ಟಿಸುತ್ತಾ, ರೊಮ್ಯಾಂಟಿಕ್ ಆಗಿ ಕೇಳಿದಳು...'ಹೇ ಚಂದ್ರ! ನನ್ನ ಪ್ರಿಯತಮ ಕೋಲ್ಯ ಹೇಗಿದ್ದಾನೆ ಅಂತ ಹೇಳು...'
ಚಂದ್ರ(ಸಿಟ್ಟಿನಿಂದ): 'ಇಲ್ಕೇಳೇ ಹುಡುಗಿ. ಮೊದಲನೆಯದಾಗಿ ನಾನು ನಿಮ್ಮಪ್ಪನ ನೌಕರ ಅಲ್ಲ...ನೀನು ಕೇಳೋ ಪ್ರಶ್ನೆಗೆಲ್ಲ ಉತ್ತರ ಕೊಡೋಕ್ಕೆ...'
'ಎರಡನೆಯದು, ಇಷ್ಟು ದೂರದಿಂದ ನನಗೇನೂ ಕಾಣಿಸೋದಿಲ್ಲ'
'ಮೂರನೆಯದಾಗಿ, ನಿನ್ನ ಈ ಪ್ರೀತಿ ಪ್ರೇಮದ ಸಂದೇಶಗಳೆಲ್ಲ ನಿನ್ನ ಹತ್ತಿರವೇ ಇಟ್ಟುಕೋ...ನನ್ನನ್ನೇನು ಪೋಸ್ಟ್ಮ್ಯಾನ್ ಅನ್ಕೊಂಬಿಟಿದೀರಾ, ಪ್ರೀತಿಸೋರೆಲ್ಲ ನನ್ನ ಹಿಂದೆ ಯಾಕೆ ಬೀಳ್ತಾರೋ ಗೊತ್ತಾಗ್ತಾ ಇಲ್ಲ!'