ನಾನು ಚಿಕ್ಕವನಿರುವಾಗ ನನ್ನ ಅಜ್ಜಿ ತಲೆ ನೋವಿಗೆ ಇದನ್ನೇ ಹಚ್ಚುತ್ತಿದ್ದಳು
ಅಮೃತ ಮಥನದಲ್ಲಿ ಅಮೃತ ಸುರರ ಪಾಲಾಯಿತು, ವಿಷ ಅಸುರರ ಪಾಲಾಯಿತು, ಮನುಷ್ಯರಿಗಾಗಿ ಮತ್ತೆ ಮಥಿಸಿದಾಗ ಅಮೃತಾಂಜನ ಸೃಷ್ಟಿಯಾಯಿತು
ಎಲ್ಲಾ ವಿವಾಹಿತರೂ ಯಾವತ್ತೂ ಜೊತೆಗಿಟ್ಟುಕೊಳ್ಳಬೇಕಾದದ್ದು
ತಲೆ ನೋವಿನ ಜೊತೆಗೆ ತಲೆ ನೋವು ತರುವವರನ್ನೂ ಓಡಿಸುತ್ತೆ
ಇದರ ಘಮ್ಮನೆ ಪರಿಮಳವೇ ಹೇಳುತ್ತೆ ಇಲ್ಲೆಲ್ಲೋ ತಲೆನೋವಿದೆ ಎಂದು
ಗಂಡ ಹೆಂಡತಿ ಇಬ್ಬರ ನಡುವಿನ ಸ್ನೇಹಿತ
ತಲೆ ನೋವು ಬಂದಾಗ ಹಣೆಗೂ ಇದಕ್ಕೂ 'ಹಣಾಹಣಿ'
ಕೆಲವರಿಗೆ ಇದರ ವಾಸನೆಯಿಂದ ನಿದ್ದೆಯೇ ಬರದು, ಇನ್ನು ಕೆಲವರಿಗೆ ಇದಿಲ್ಲದಿದ್ದರೆ ನಿದ್ದೆಯೇ ಬರದು
ಜನಜಂಗುಳಿಯಲ್ಲಿ ನೆಲೆಸಿರುವವರಿಗೆ ಅಮೃತಾಂಜನವೇ ರಕ್ಷಕ
ಆಂಜನೇಯ ಹೊತ್ತು ತಂದ ಸಂಜೀವಿನಿ ಪರ್ವತದ ಮೂಲಿಕೆಗಳಿಂದ ತಯಾರಿಸಿದ್ದರಿಂದ ಇದಕ್ಕೆ ಈ ಹೆಸರು
ರಾಜಕಾರಣಿಗಳು ತಮ್ಮ ಭಾಷಣಕ್ಕೂ ಮುನ್ನ ಮಾಡಬಹುದಾದ ದೊಡ್ಡ ಉಪಕಾರವೆಂದರೆ ಕೇಳುಗರಿಗೆ ಮೊದಲು ಇದನ್ನು ವಿತರಿಸುವುದು
ನಿಮ್ಮ ಸ್ನೇಹಿತನ ಮದುವೆಯಲ್ಲಿ ಕೊಡಬಹುದಾದ ದೊಡ್ಡ ಉಡುಗೊರೆಯೆಂದರೆ ಅಮೃತಾಂಜನದ ದೊಡ್ಡ ಬಾಕ್ಸ್
ಮೃತನ ಬಳಿ ಹಚ್ಚಿಕೊಂಡು ಹೋದರೂ ಆತನ ನಾಸಿಕ ಅರಳುವುದು
-ವಿಶ್ವನಾಥ ಸುಂಕಸಾಳ
vishwasunkasal@yahoo.com