ತಲತಲಾಂತರದಿಂದಲೂ ತಲೆಯಿಂದ ತಲೆಗೆ ಹರಿದುಬರುತ್ತಿರುವ ವ್ಯಾಧಿ
ರಜಾ ಚೀಟಿಯ ಪ್ರಮುಖ ವಿಷಯ
ಬೇಗ ಮನೆಗೆ ಬರಲೊಂದು ನೆವ
ಕೆಲವಷ್ಟು ಕೆಲಸಗಳಿಂದ ತಪ್ಪಿಸಿಕೊಳ್ಳಲೊಂದು ಮಾರ್ಗ, ಇದರಿಂದ ತಪ್ಪಿಸಿಕೊಳ್ಳಲು ಮಾತ್ರ ಮಾರ್ಗವೇ ಇಲ್ಲ.
ಅಮೃತಾಂಜನ, ಜಂಡುಬಾಮ್ ಮೊದಲಾದ ಕಂಪೆನಿಗಳ ಬಂಧು
ತಲೆ ಇದೆ ಎಂದು ನೆನಪಿಸುವ ರೋಗ
ಹೆಲ್ಮೆಟ್ ಹಾಕಿಕೊಂಡರೂ ಹೆಡ್ಡೇಕ್
ಕೆಲಸವೇ ಇಲ್ಲದ ಅಥವಾ ವಿಶ್ರಾಂತಿಯೇ ಇಲ್ಲದ ತಲೆಯ ಖಾಯಂ ಸದಸ್ಯ
ತಲೆನೋವು ಹುಡುಗಿಯರಿಗೇ ಜಾಸ್ತಿ. ಹುಡುಗರಿಗೆ ಅದರ ಬದಲು ಹುಡುಗಿಯರೇ ಇದ್ದಾರಲ್ಲ
ತಲೆಗೆ ಕಾವು ಏರಿದಾಗ ಉಂಟಾಗುವ ನೋವು
ಬಾಸ್ ಇರುವ ತನಕ ಜಗತ್ತಿನಲ್ಲಿ ಇದರ ಅಸ್ತಿತ್ವವಿರುತ್ತೆ
ಪುಸ್ತಕ ಹಿಡಿದು ಕೂತಾಗಲೇ ಒಕ್ಕರಿಸುವ ಪೀಡೆ
-ವಿಶ್ವನಾಥ ಸುಂಕಸಾಳ
vishwasunkasal@yahoo.com