ನಿಯಮಗಳ ಉಲ್ಲಂಘನೆಗೆ ಕಠಿಣ ಶಿಕ್ಷೆ
ಹಣ ಗಳಿಸಲು ಹಲವು ದಾರಿಗಳಿವೆ. ದೊಡ್ಡ ಮಟ್ಟದ ಸಮಾಜ ಸೇವೆಗೆ ರಾಜಕೀಯವೇ ಆಗಬೇಕು. ಸಮಾಜ ಸೇವೆ ಮಾಡಿ ಹೆಸರು ಗಳಿಸಲು ಶಾಸಕ ಸ್ಥಾನ ಸುವರ್ಣಾವಕಾಶ ಒದಗಿಸಿದೆ. ಕೇವಲ ಸರ್ಕಾರದ ಹಣದಲ್ಲಿ ಜಾರಿಗೊಳ್ಳದ ಯೋಜನೆಗಳಲ್ಲಿ ಕೈ ಹಾಕದೆ ನೀತಿ ನಿಯಮಗಳ ಪ್ರಕಾರ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಶಾಸಕರು ನಿಭಾಯಿಸಿದರೆ ಸಾಕು. ದೊಡ್ಡ ಮಟ್ಟದ ಹೆಸರು ಗಳಿಸಬಹುದು. ಈಗ ಆಯ್ಕೆಯಾದ ಶಾಸಕರೆಲ್ಲ ಕೋಟ್ಯಧಿಪತಿಗಳು. ಇನ್ನೂ ಹಣ ಏಕೆ? ಹೆಸರು ಗಳಿಸುವತ್ತ ಲಕ್ಷ್ಯ ಕೊಡಲಿ ಎಂದು ವಿನಂತಿ. ಭ್ರಷ್ಟತೆಯ ಮೂಲಾಧಾರವೇ ಅಧಿಕಾರಶಾಹಿಯಾದರೂ ಇದಕ್ಕೆ ಕುಮ್ಮಕ್ಕು ನೀಡುವುದು ಶಾಸಕರು. ಭ್ರಷ್ಟತೆಯನ್ನು ನಿಯಂತ್ರಿಸುವತ್ತ ದೃಢ ಸಂಕಲ್ಪ ಮಾಡಿರುವ ಮುಖ್ಯಮಂತ್ರಿಗಳು ತಮ್ಮ ಪಕ್ಷ ದ ಶಾಸಕರ ಪ್ರತಿ ತಿಂಗಳ ಗಳಿಕೆಯ ಮೇಲೆ ಕಣ್ಣಿಡಲು ತಿಂಗಳೂ ಆಸ್ತಿ ವಿವರ ನೀಡುವ ಹೊಸ ಪದ್ಧತಿ ಪಕ್ಷದಲ್ಲಿ ಜಾರಿಗೆ ತಂದರೆ ಶುದ್ಧ ಆಡಳಿತ ನೀಡುವುದು ಕಷ್ಟಸಾಧ್ಯವಲ್ಲ. ನೌಕರಶಾಹಿಯನ್ನು ನಿಯಂತ್ರಿಸಲು ನೀತಿ ನಿಯಮಗಳೇ ಅಸ್ತ್ರ. ಪ್ರತಿ ಹಂತದಲ್ಲೂ ನಿಯಂತ್ರಣ ಇದೆ. ಅಧಿಕಾರಿಗಳು ಮತ್ತು ನೌಕರರಿಂದ ನೀತಿ ನಿಯಮಗಳ ಉಲ್ಲಂಘನೆ ಆದಲ್ಲಿ ಸಂಬಂಧಪಟ್ಟವರನ್ನು ರಕ್ಷಿಸಲು ಶಾಸಕರು ಮುಂದಾಗದಿದ್ದರೆ ಮತ್ತು ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ ಆಗುವಲ್ಲಿ ಅಡ್ಡಿ ಮಾಡದಿದ್ದರೆ ಭ್ರಷ್ಟತೆ ನಿಯಂತ್ರಣ ಖಂಡಿತ ಸುಲಭಸಾಧ್ಯ. ಈಗ ಕೇಂದ್ರದಲ್ಲಿ ಹಗರಣಗಳು ಬಯಲಾಗಿ ಮಂತ್ರಿಗಳು ರಾಜೀನಾಮೆ ಕೊಡಲು ನೀತಿ ನಿಯಮಗಳ ಉಲ್ಲಂಘನೆಯಾಗಿರುವುದನ್ನು ತೋರಿಸಿದ ವರದಿಯೇ ಕಾರಣ ಎನ್ನುವುದನ್ನು ಪ್ರತಿಯೊಬ್ಬರೂ ಅರಿತರೆ ನೀತಿ ನಿಯಮಗಳನ್ನು ಗಾಳಿಗೆ ತೂರಿ ಮೆರೆಯಲು ಸಾಧ್ಯವಿಲ್ಲ ಎಂಬ ಪಾಠ ತಿಳಿಯಲು ಕಷ್ಟವಾಗದು. ಈಗ ಮಾಹಿತಿ ಕಾಯಿದೆ ಇರುವುದರಿಂದ ಪ್ರತಿ ಹಂತದಲ್ಲೂ ಏನಾಗಿದೆ ಎಂದು ತಿಳಿಯುವುದು ಸಾಧ್ಯ. ಇದನ್ನು ಸಚಿವರು, ಶಾಸಕರು ಮತ್ತು ಅಧಿಕಾರಶಾಹಿ ಅರಿತು ಕೆಲಸ ನಿರ್ವಹಿಸಲು ವಿನಂತಿ. ಉಲ್ಲಂಘಿಸಿ ನಿರಾಳವಾಗಿರುವುದು ಸುಲಭವಲ್ಲ.
-ಸತ್ಯಬೋಧ, ಬೆಂಗಳೂರು
ಚಿಕಿತ್ಸೆಗೆ ನೆರವಾಗಿ
ಮಹಾರಾಜ ಕಾಲೇಜು ದ್ವಿತೀಯ ಬಿ.ಎ. ತರಗತಿಯಲ್ಲಿ ಓದುತ್ತಿರುವ ಯುವ ಪ್ರತಿಭೆ ಎಂ.ಎನ್. ಅಭಿಲಾಷ್ ಪ್ರಸಾದ್ ಸಂಕಷ್ಟದಲ್ಲಿದ್ದು, ಸಹೃದಯರಿಂದ ನೆರವು ಬಯಸಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ತೀವ್ರ ಅನೀಮಿಯಾದಿಂದ ಬಳಲಿದಾಗ, ಅವರಿಗೆ ರಕ್ತದ ಕ್ಯಾನ್ಸರ್ ಇದೆ ಎಂಬುದು ಬೆಳಕಿಗೆ ಬಂತು. ರಕ್ತದ ಕ್ಯಾನ್ಸರಿನ ಆರಂಭಿಕ ಹಂತವಾದ ಎಂಡಿಎಸ್ ಸರಿಯಾಗಿ ಚಿಕಿತ್ಸೆ ದೊರಕದೇ ಹೋದರೆ ಲ್ಯುಕೇಮಿಯಾ ಆಗಿ ಬೆಳೆಯುತ್ತದೆ. ಈ ಕಾಯಿಲೆಗೆ ಅಸ್ಥಿ ಮಜ್ಜೆಯ ಕಸಿ ಮಾತ್ರವೇ ಶಾಶ್ವತ ಪರಿಹಾರವಾಗಿದೆ. ವೆಲ್ಲೋರಿನ ಕ್ರಿಸ್ಟಿಯನ್ ಮೆಡಿಕಲ್ ಕಾಲೇಜಿನಲ್ಲಿ ಈ ಸೌಲಭ್ಯ ಇರುವುದರಿಂದ ಈಗಾಗಲೇ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರಂಭದಲ್ಲಿ ಮೂರು ಹಂತದ ಔಷಧ ಚಿಕಿತ್ಸೆ ಮತ್ತು ನಂತರ ಕಸಿ ಮಾಡುವುದು ಚಿಕಿತ್ಸಾ ವಿಧಾನ. ಔಷಧ ಚಿಕಿತ್ಸೆ ಈಗಾಗಲೇ ಪೂರ್ಣಗೊಂಡಿದ್ದ ಕಾಯಿಲೆ ನಿಯಂತ್ರಣದಲ್ಲಿದೆ. ಇದಕ್ಕೆ 4 ಲಕ್ಷ ವೆಚ್ಚ ತಗುಲಿದೆ. ಇದೀಗ ಅಸ್ಥಿ ಮಜ್ಜೆಯ ಕಸಿ ಮಾಡಬೇಕಾಗಿದ್ದು, ಇದಕ್ಕೆ ಕನಿಷ್ಠ 14 ಲಕ್ಷ ಅಗತ್ಯವಿದೆ ಎಂದು ಆಸ್ಪತ್ರೆ ತಿಳಿಸಿದೆ. ಇದರೊಂದಿಗೆ ಮೈಸೂರಿನಿಂದ ವೆಲ್ಲೋರಿಗೆ ಹೋಗಿ ಬರಲು ಖರ್ಚು ಹೆಚ್ಚಾಗುವುದರಿಂದ ಸುಮಾರು 20 ಲಕ್ಷ ಅವಶ್ಯಕತೆ ಇದೆ. ಪೊಲೀಸ್ ಇಲಾಖೆಯಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಭಿಲಾಷ್ ಪ್ರಸಾದ್ ಅವರ ತಂದೆ ಕೆಲವು ವರ್ಷಗಳ ಹಿಂದೆಯೇ ಮೃತರಾಗಿದ್ದಾರೆ. ಅವರ ತಂದೆಯ ಪಿಂಚಣಿಯೇ ಜೀವನಾಧಾರ. ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಅಭಿಲಾಷ್ಗೆ ನೆರವಿನ ಬಲ ಬೇಕಿದೆ. ಆದ್ದರಿಂದ ದಾನಿಗಳು ಝಿಜ ಖ್ಠಿಜಛಡ್ಡ್ಠಜ್ಠ, ಝ್ಠ್ಝಡಡ್ಝಿಛಟಿ ಂಜಜ್ಝ್ಛಛಟ ಈ್ಟಟಟಜ್ಜಜ, ಗಜಟಟ್ಟ್ಠಜ ಎಂಬ ಹೆಸರಿಗೆ ಡಿಡಿ ಅಥವಾ ಚೆಕ್ ಕ್ರಾಸ್ ಮಾಡಿದ ಚೆಕ್ ಅನ್ನು ನೀಡಬಹುದಾಗಿದೆ. ಮೊ. 9986010050 ಸಂಪರ್ಕಿಸಬಹುದು.
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

