ಜಾತಿ
ಜಾತರೆಲ್ಲರ ಜೊತೆಯಲ್ಲೇ ಬರುವ ಗುಪ್ತಗಾಮಿನಿ
ಚೇಳುಗೂಡು
ಯಾರಿಗೂ ಜಾತಿ ಬೇಕಾಗಿಲ್ಲ. ಅದರಿಂದ ದೊರೆವ ಸೌಲಭ್ಯಗಳು ಮಾತ್ರ ಬೇಕು
ಜಾತ್ಯತೀತರಾಗಲು ಹೋಗಿ ಜಾತಿಗೆಟ್ಟವರೇ ಜಾಸ್ತಿ
ವಿಶ್ವ ಮಾನವ ಸಂದೇಶವನ್ನು ಪ್ರತಿಪಾದಿಸಿ ಜಾತಿಯನ್ನು ವಿರೋಧಿಸಿದವರನ್ನೂ ಆಯಾ ಜಾತಿ ಸಮಾವೇಶದಲ್ಲಿ ದೊಡ್ಡ ಕಟೌಟ್ ನಿಲ್ಲಿಸುವುದು ದೊಡ್ಡ ವಿಪರ್ಯಾಸವೇ
ಜಾತಿ ವಿರೋಧಿಸುವವರಿಂದ ಪ್ರಗತಿಪರರೆಂಬ ಜಾತಿ ಹೊಸದಾಗಿ ಹುಟ್ಟಿಕೊಂಡಿದೆ
ಜಾತಿ ನಿರ್ಮೂಲನೆಗಾಗಿ ಹೊರಟವರ ಜಾತಿ ಯಾವುದು ಎಂಬುದೇ ನೀತಿಗೆಟ್ಟವರ ದೊಡ್ಡ ಕುತೂಹಲ
ಜಾತಿಯನ್ನು ತಿರಸ್ಕರಿಸಬೇಕು, ಜಾತಿಯ ಹೆಸರಲ್ಲಿ ಸರ್ಕಾರ ಕೊಡುವ ಸೌಲಭ್ಯವನ್ನು ತಿರಸ್ಕರಿಸುವ ಮೂಲಕ
ಪ್ರೇಮಕ್ಕೆ ಮತ್ತು ಕಾಮಕ್ಕೆ ಜಾತಿಯ ಹಂಗಿಲ್ಲ, ಆದರೆ ಮದುವೆಯಾಗುವಾಗ ಮಾತ್ರ ಜಾತಿ ಅಡ್ಡ ಬರುತ್ತದೆ
ಜಾತಿ ಆಪೇಕ್ಷೆ ಇಬ್ಬರಿಗಿರುವುದಿಲ್ಲ. ಜಾತಿಯ ಹೆಸರಿನಲ್ಲಿ ಲಾಭದ ಆಪೇಕ್ಷೆ ಇಲ್ಲದವರಿಗೆ ಮತ್ತು ಇದ್ದರೂ ಲಾಭ ಮಾಡಿಕೊಳ್ಳಲಾಗದವರಿಗೆ
ಮೇಲ್ಜಾತಿಯವರೆಂದು ದೂರುವ ಅಪಾಯವೆಂದರೆ ತಾವು ಕೆಳಗಿನವರೆಂದು ತಾವೇ ಹೇಳಿಕೊಂಡಂಥಾಗುವುದು
ವಿಶ್ವನಾಥ ಸುಂಕಸಾಳ
vishwasunkasal@yahoo.com