ಇಲ್ಲಿ ನೀವು ಕಾನೂನನ್ನು ಕಾನೂನುಗಳಿಂದಲೇ ಮುರಿಯಬಹುದು
ರಾಜ್ಯ ಭಾರವಹಿಸಿಕೊಂಡ ರಾಜರುಗಳೆಲ್ಲ ರಾಜಾರೋಷವಾಗಿ ಹಗಲು ದರೋಡೆಗೆ ಇಳಿಯುವ ತಂತ್ರ
ಹಕ್ಕಿನ ಹೆಸರಲ್ಲಿ ಉಳ್ಳವರ ಸೊಕ್ಕು ಪ್ರದರ್ಶನಾ ಕೇಂದ್ರ
ಮದುವೆ ಇದ್ದಂತೆ. ಕನಿಷ್ಠ ಸುಖಕ್ಕಾಗಿ ಗರಿಷ್ಠ ಕಷ್ಟವನ್ನು ಒಪ್ಪಿಕೊಳ್ಳುವಿಕೆ
ಕೆಲವೊಮ್ಮೆ ಸ್ವತಂತ್ರ; ಇನ್ನು ಕೆಲವೊಮ್ಮೆ ಅತಂತ್ರ
ಒಂದಿಷ್ಟು ಜನರನ್ನು ಆಳಿರಿ ಎಂದೂ, ಇನ್ನೊಂದಿಷ್ಟು ಜನರನ್ನು ಅವರನ್ನು ತಡೆಯಿರಿ ಎಂದೂ ಆರಿಸಿ ಕಳಿಸುವ ವ್ಯವಸ್ಥೆ
ಮೇಲಿದ್ದವರನ್ನು ಕೆಳಕ್ಕೆ ಜಗ್ಗಿ ಎಲ್ಲರನ್ನೂ ಸಮಾನರಾಗಿಸುವ ವ್ಯವಸ್ಥೆ
ಬ್ರಿಟಿಷರಿಂದ ಪಡೆದ ಸ್ವಾತಂತ್ರ್ಯವನ್ನು ನಮ್ಮವರ ಸ್ವಾರ್ಥಕ್ಕೆ ಬಲಿಕೊಡಬೇಕಾದ ಪರಿಸ್ಥಿತಿ
ಯಾರು ಪ್ರಜೆ ಮತ್ತು ಯಾರು ಪ್ರಭು ಎಂಬುದೇ ಸಮಸ್ಯೆ ಇಲ್ಲಿ
ಇಲ್ಲಿ ಯಾವಾಗ ಯಾರು ಮಂತ್ರಿ ಅಥವಾ ಪ್ರಧಾನಿ ಆಗುತ್ತಾರೆ ಎನ್ನಲಾಗದು
ಇಲ್ಲಿ ಏನು ಬೇಕಾದರೂ ವಿರೋಧಿಸಬಹುದು ಮತ್ತು ನಿಮ್ಮ ಆಗ್ರಹವನ್ನು ಬಸ್ ಸುಟ್ಟು ವ್ಯಕ್ತಪಡಿಸಬಹುದು.
-ವಿಶ್ವನಾಥ ಸುಂಕಸಾಳ
vishwasunkasal@yahoo.com