ಸಂಪಾದಕೀಯ

ಬಿಜೆಪಿ: ಜೇಠ್ಮಲಾನಿ ಉಚ್ಚಾಟನೆ

Published On :

ಭಾರತೀಯ ಜನತಾ ಪಾರ್ಟಿಯ ಅತ್ಯುನ್ನತ ಮಟ್ಟದ ಒಳಜಗಳಕ್ಕೆ ಕೊನೆಯೇ ಇಲ್ಲವೇನೋ ಎನಿಸುತ್ತಿದೆ. ಚುನಾವಣೆಯ ಮುನ್ನಾದಿನಗಳಲ್ಲಿ ಯಾವ ಪಕ್ಷವೂ ಶೃಂಗ ನಾಯಕರ ಸಮುದಾಯದಲ್ಲಿ ಸಂಘರ್ಷವನ್ನು ಅಪೇಕ್ಷಿಸುವುದಿಲ್ಲ. ಆದರೆ ಈಗ ಬಿಜೆಪಿ ಅನಪೇಕ್ಷಿತವಾಗಿ ಸಂಘರ್ಷದ ಸ್ಥಿತಿಯನ್ನು ತಲುಪಿದೆ.
  ಪಕ್ಷದ ಅತಿ ಹಿರಿಯರಲ್ಲಿ ಒಬ್ಬರಾದ, ಕ್ರಿಮಿನಲ್ ಕಾಯಿದೆಯಲ್ಲಿನ ಎಲ್ಲ ಒಳದಾರಿಗಳನ್ನು ಬಲ್ಲ ನಿಸ್ಸೀಮ ವಯೋವೃದ್ಧ ವಕೀಲ, ರಾಜ್ಯಸಭೆಯ ಸದಸ್ಯ ರಾಮ್ ಜೇಠ್ಮಲಾನಿ ಅವರನ್ನು ಪಕ್ಷದ ಸಂಸದೀಯ ಮಂಡಳಿ ಅಶಿಸ್ತು ಹಾಗೂ ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಮೇಲೆ ಪಕ್ಷದಿಂದಲೇ ಉಚ್ಚಾಟಿಸಿದೆ.
  ರಾಮ್ ಜೇಠ್ಮಲಾನಿ ಕಳೆದ ವರ್ಷ, ಪಕ್ಷದಲ್ಲಿ ಅಧ್ಯಕ್ಷರಾಗಿದ್ದ ನಿತಿನ್ ಗಡ್ಕರಿ ಅವರ ವಿರುದ್ಧ ಮಾಡಿದ್ದ ಟೀಕೆಯೇ ಈಗಿನ ಶಿಸ್ತಿನ ಕ್ರಮಕ್ಕೆ ಕಾರಣ.
  ರಾಮ್‌ಜೇಠ್ಮಲಾನಿ ಅವರು ಶಿಸ್ತು ಭಂಗದ ಆರೋಪವನ್ನು ಎದುರಿಸುತ್ತಿರುವುದು ಇದೇ ಮೊದಲ ಬಾರಿ ಏನೂ ಅಲ್ಲ. ಹಿಂದೆ ಲಖನೌದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ವಿರುದ್ಧವೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ, ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ರಾಜ್ಯಸಭೆಯ ಸದಸ್ಯತ್ವವನ್ನು ನೀಡಲಾಗಿತ್ತು. ಆದರೂ ರಾಮ್‌ಜೇಠ್ಮಲಾನಿ ಅವರ ಹರಿತವಾದ ನಾಲಿಗೆ ಸುಮ್ಮನಿರಲಿಲ್ಲ. ಇನ್ನು ಮುಂದೆಯೂ ಅವರು ಸುಮ್ಮನಿರುವುದಿಲ್ಲ. ಆ ಸಂಕಟವನ್ನು ಬಿಜೆಪಿ ಅನುಭವಿಸಲೇಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.