ಸಾಧನೆಗೆ ಸವಾಲಾಗದ ಅಂಗವೈಕಲ್ಯ
ಜೈಪುರದ ಅತಿ ಬಡ ಸಿಂಧಿ ಕುಟುಂಬದ ಮೀನೂ ಭಂಬಾನಿಗೆ ಓದುವ ಬಯಕೆ. ಆಕೆಗೆ ಅಂಗ ವೈಕಲ್ಯ. ತಾಯಿ ಪ್ರತಿದಿನ ಸೈಕಲ್ ಮೇಲೆ ಬಂಕೀಪುರ ಶಾಲೆಗೆ ಕರೆದೊಯ್ದು ಕರೆತರಬೇಕಾಗಿತ್ತು. ತಂದೆ ಮಗಳನ್ನು ಖಾಸಗಿ ಶಾಲೆಗೆ ಸೇರಿಸಿ ಶಾಲಾ ಶುಲ್ಕಕ್ಕಾಗಿ ರು. 30 ಸಾಲಕ್ಕಾಗಿ ಪರದಾಡುತ್ತಿದ್ದರೆ, ಅವನ ಬಂಧುಗಳು ಅವಳನ್ನು ಕಡಿಮೆ ಶುಲ್ಕ ಪಡೆಯುವ ಶಾಲೆಗೆ ಸೇರಿಸಲು ಸಲಹೆ ನೀಡಿದರು. ಶಾಲೆಯಲ್ಲಿ ಸಹಪಾಠಿಗಳು ಅವಳನ್ನು ಗೇಲಿ ಮಾಡುತ್ತಿದ್ದರು. ಶಿಕ್ಷಕರ ಅಲಕ್ಷ್ಯ, ಆಡಳಿತ ಮಂಡಳಿಯವರ ಅಸಹಕಾರದ ನಡುವೆಯೂ ಓದುವ ಛಲ ಹೊಂದಿದ್ದ ಮೀನೂ ಎಲ್ಲವನ್ನೂ ಸಹಿಸಿಕೊಂಡು ತನ್ನ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ನೀಡಿದಳು. ಭಾರವಾದ ಪುಸ್ತಕ ಚೀಲವನ್ನು ಹೊತ್ತು ಶಾಲೆಗೆ ಹೋಗಿ ಬರುವುದು ದುಸ್ತರವಾಯಿತು. ಶಾಲಾ ಬಸ್ಸು ಆಕೆಯ ಮನೆಯ ಸಮೀಪದಲ್ಲಿಯೇ ಹಾದು ಹೋದರೂ ಅದು ಅಲ್ಲಿ ನಿಲ್ಲಿಸುತ್ತಿರಲಿಲ್ಲ. ಬಡತನ, ಸಮಾಜ ಮತ್ತು ಬಂಧುಗಳ ನಿಂದನೆಯ ಮಾತುಗಳಾವುವೂ ಅವಳ ನಿರ್ಧಾರವನ್ನು ಹಿಮ್ಮೆಟ್ಟಿಸಲಿಲ್ಲ. ಖಾಸಗಿ ಪಾಠಕ್ಕೆ ಹೋಗಲು ಸಾಧ್ಯವಾಗದೆ ಮನೆಯಲ್ಲಿಯೇ ಹೆಚ್ಚಿನ ವಿದ್ಯಾಭ್ಯಾಸ ಮಾಡಿದಳು. ಒಮ್ಮೆ ಆರನೇ ತರಗತಿಯಲ್ಲಿ ಅನುತ್ತೀರ್ಣಳಾದಳು. ಆದರೆ ಛಲ ಬಿಡದೆ ಮತ್ತೆ ಓದಿ ಮುಂದಿನ ತರಗತಿಗೆ ಹೋದಳು. ಅಂಗ ವೈಕಲ್ಯದ ಅನುಕಂಪ ಗಿಟ್ಟಿಸಲು ಪ್ರಯತ್ನಿಸುತ್ತಿದ್ದಾಳೆಂಬ ಮೂದಲಿಕೆಯ ಮಾತನ್ನೂ ಸಹಿಸಿಕೊಂಡು ಕಾಲೇಜು ಮೆಟ್ಟಿಲು ಹತ್ತಿದಾಗ ತಾಯಿ ಪ್ರತಿದಿನ ಕಾಲೇಜಿಗೆ ಕರೆದೊಯ್ಯುವ ಮತ್ತು ಕರೆತರುವ ಜವಾಬ್ದಾರಿ ಹೊತ್ತುಕೊಂಡಳು. ನಂತರ ರಾಜಾಸ್ಥಾನ್ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿವೇತನ ಪಡೆದು ಆಂಗ್ಲಭಾಷೆಯಲ್ಲಿ ಎಂ.ಎ. ಪದವಿ ಪಡೆದಳು. ನಂತರ ಕಿಶನ್ ಘರ್ ಎಂಬಲ್ಲಿ ಉಪನ್ಯಾಸಕಿಯ ಕೆಲಸ ದೊರೆಯಿತು. ಅಲ್ಲಿ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯನ್ನು ರಾಜಾಸ್ಥಾನಿಯಲ್ಲಿ ಬೋಧಿಸುವ ಅನಿವಾರ್ಯತೆಯಿಂದ ತನ್ನ ಕೆಲಸದಲ್ಲಿ ಆಸಕ್ತಿ ಕಳೆದುಕೊಂಡು ಅಂಗವಿಕಲರಿಗಾಗಿ ಜಾರಿಗೆ ಬಂದ ಕಾನೂನು ಅನುಷ್ಠಾನಾಧಿಕಾರಿಯಾಗಿ ರಾಜಸ್ಥಾನ ಸರ್ಕಾರದಲ್ಲಿ ಸೇವೆಗೆ ಸೇರಿದಳು. ನಂತರ ಫೋಡರ್ಫೌಂಡೇಷನ್ ನೆರವಿನಿಂದ ಚಿಕಾಗೋದ ಇಲಿನಾಯ್ ವಿಶ್ವ ವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿ ಪಡೆದರು. ಅಲ್ಲಿರುವಷ್ಟು ದಿನವೂ ಅಲ್ಲಿನ ಆಡಳಿತ ಮಂಡಳಿ ಆಕೆಗೆ ಕಾಲೇಜಿನ ಪಕ್ಕದಲ್ಲೇ ಉಳಿಯುವ ವ್ಯವಸ್ಥೆ ಮಾಡಿತಲ್ಲದೆ, ಬಂದುಹೋಗಲು ವಾಹನ ವ್ಯವಸ್ಥೆಯನ್ನೂ ಕಲ್ಪಿಸಿತು. ಡಾಕ್ಟರೇಟ್ ಪಡೆದು ಭಾರತಕ್ಕೆ ಬಂದ ಡಾ.ಮೀನೂ ಭಂಬಾನಿಯ ಆಸಕ್ತಿ, ಮತ್ತು ಅರ್ಹತೆಯನ್ನು ಗುರುತಿಸಿದ್ದು ಬೆಂಗಳೂರಿನ ಪ್ರತಿಷ್ಠಿತ ಂಕಿಏಆಖಐಖ ಸಂಸ್ಥೆ. ಅಲ್ಲಿ ಆಕೆಯೀಗ ಸಿಎಸ್ಆರ್ ವಿಭಾಗದ ಮುಖ್ಯಸ್ಥೆಯಾಗಿ ಅತ್ಯಂತ ಜವಾಬ್ದಾರಿಯುತ ಹುದ್ದೆಯಲ್ಲಿದ್ದಾರೆ. ತಮ್ಮ ಅಧೀನದಲ್ಲಿ ಸುಮಾರು ನಾಲ್ಕುನೂರಕ್ಕೂ ಹೆಚ್ಚು ಅಂಗವಿಕಲರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ. ಇವರ ಅನುಪಮ ಸೇವೆಗಾಗಿ 2009ರಲ್ಲಿ ಪ್ರತಿಷ್ಠಿತ ಶೆಲ್ ಹ್ಹೆಲನ್ ಕೆಲರ್ ಪ್ರಶಸ್ತಿ ಪಡೆದಿದ್ದಾರೆ ಮತ್ತು ಇಂದಿಗೂ ವಿಕಲಾಂಗರಿಗೆ ಸ್ಫೂರ್ತಿಯ ನೆಲೆಯಾಗಿದ್ದಾರೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

